Gl harusha
ಸ್ಥಳೀಯ

ಕಡಬ: ಶಶಿಕಲಾ ಕೆರೆಗೆ ಬಿದ್ದು ಮೃತ್ಯು!

ಮುಂಜಾನೆ ವೇಳೆ ಹುಲ್ಲು ತರಲೆಂದು ತೋಟಕ್ಕೆ ಹೋದ ಮಹಿಳೆಯೊಬ್ಬರು ಕೆರೆಯಲ್ಲಿ ಶವವಾಗಿ ಪತ್ತೆಯಾದ ಘಟನೆ ಕಡಬ ಠಾಣಾ ವ್ಯಾಪ್ತಿಯ ಪೆರಾಬೆ ಗ್ರಾಮದಿಂದ ವರದಿಯಾಗಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಮುಂಜಾನೆ ವೇಳೆ ಹುಲ್ಲು ತರಲೆಂದು ತೋಟಕ್ಕೆ ಹೋದ ಮಹಿಳೆಯೊಬ್ಬರು ಕೆರೆಯಲ್ಲಿ ಶವವಾಗಿ ಪತ್ತೆಯಾದ ಘಟನೆ ಕಡಬ ಠಾಣಾ ವ್ಯಾಪ್ತಿಯ ಪೆರಾಬೆ ಗ್ರಾಮದಿಂದ ವರದಿಯಾಗಿದೆ.

srk ladders
Pashupathi
Muliya

ಆಲಂಕಾರಿನ ಪೆರಾಬೆ ಗ್ರಾಮದ ಬಲಂಪೋಡಿಯ ಉಮೇಶ್ ಎಂಬವರ ಪತ್ನಿ ಶಶಿಕಲಾ ಎಂಬವರು ಮೃತಪಟ್ಟ ಮಹಿಳೆ.

ಜುಲೈ 8 ರ ಮುಂಜಾನೆ ಪತಿ –ಪತ್ನಿ ಇಬ್ಬರೂ ದನದ ಕೊಟ್ಟಿಗೆಯಲ್ಲಿ ಕೆಲಸ ಮಾಡಿ ತೆರಳಿದ್ದು ಬಳಿಕ ಪತ್ನಿಯು ದನಗಳಿಗೆ ಹುಲ್ಲು ತರಲು ತಮ್ಮ ಕೃಷಿ ತೋಟದ ಕಡೆಗೆ ಹೋಗಿದ್ದರು.

ದನಗಳನ್ನು ಸ್ವಚ್ಚ ಮಾಡಿ ಮನೆಯಲ್ಲಿ ಇದ್ದು ಸುಮಾರು 1 ಗಂಟೆಯಾದರು ಪತ್ನಿ ಮನೆಗೆ ಬಾರದೇ ಇರುವುದರಿಂದ ತಮ್ಮ ತೋಟದ ಬಳಿ ಹೋಗಿ ನೋಡಿದಾಗ ಪತ್ನಿಯು ಕಾಣದೇ ಇದ್ದು ನೆರೆಕೆರೆಯವರ ಜೊತೆ ಸೇರಿ ಹುಡುಕಾಟ ಮಾಡಿದಾಗ ಕೆರೆಯಲ್ಲಿ ಬಿದ್ದಿರುವುದು ಕಂಡುಬಂದಿದೆ.

ಕೆರೆಯಿಂದ ಮೇಲಕ್ಕೆ ಎತ್ತಿದಾಗ ಮೃತಪಟ್ಟಿರುವುದು ಗಮನಕ್ಕೆ ಬಂದಿದೆ. ಕಡಬ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

Related Posts

ಸುಬ್ರಹ್ಮಣ್ಯಕ್ಕೆ ದಿನದ 3 ಹೊತ್ತು ರೈಲು ಸೇವೆ| ಮಂಗಳೂರು – ಪುತ್ತೂರು ರೈಲು ಓಡಾಟ ವಿಸ್ತರಣೆ: ಬದಲಾದ ಸಮಯ ಹೀಗಿದೆ

ಮಂಗಳೂರು-ಕಬಕ ಪ್ಯಾಸೆಂಜ‌ರ್ ರೈಲು ಸೇವೆಯನ್ನು ಇದೀಗ ಸುಬ್ರಹ್ಮಣ್ಯಕ್ಕೆ ವಿಸ್ತರಿಸಿ ಕೇಂದ್ರ