ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಶಾಸಕ ಅಶೋಕ್ ರೈ ashok rai ಪರಿಸರ ಪ್ರೇಮದ ಕಾಳಜಿಗೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಶ್ಲಾಘನೆ ವ್ಯಕ್ತಪಡಿಸಿದರು.
ಅಶೋಕ್ ರೈಗಳೇ ನೀವು ರಸ್ತೆ ಬದಿಯಲ್ಲಿ ಹಣ್ಣಿನ ಗಿಡಗಳನ್ನು ನೆಟ್ಟು ಪರಿಸರ ಪ್ರೇಮ ಮೆರೆದಿದ್ದೀರಿ ಇದು ಭಾರೀ ಸುದ್ದಿಯಾಗಿದೆ, ವೈರಲ್ ಆಗಿದೆ. ಸರಕಾರದ ಗಮನಕ್ಕೂ ಬಂದಿದೆ. ಈ ತರ ಎಲ್ಲಾ ಶಾಸಕರು ಮುತುವರ್ಜಿ ವಹಿಸಿದರೆ ಒಂದಷ್ಟು ಗಿಡಗಳು ಬೆಳೆಯಬಹುದು ಎಂದರು.
ಅಶೋಕ್ ರೈಗಳೇ ಒಳ್ಳೆಯ ಕೆಲಸ ಮಾಡುತ್ತಿದ್ದೀರಿ. ಎಲ್ಲವನ್ನೂ ಗಮನಿಸುತ್ತಿದ್ದೇವೆ ಎಂದು ಸಚಿವರು ಸಭೆಗೆ ತಿಳಿಸಿದರು.