ಪುತ್ತೂರು: ಶಿರಾಡಿ ಘಾಟ್ ಚೆಕ್ ಪೋಸ್ಟ್ ಬಳಿ ಸರಣಿ ಅಪಘಾತ ನಡೆದ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ.
ಗೂಡ್ಸ್ ಹೊತ್ತ ಟೆಂಪೋ, ಐರಾವತ ಬಸ್, ರಾಜಹಂಸ ಬಸ್ ನಡುವೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಚಾಲಕರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.

ಪುತ್ತೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಐರಾವತ ಬಸ್ಸನ್ನು ಗೂಡ್ಸ್ ಹೊತ್ತ ಟೆಂಪೋ ಓಬರ್ ಟೇಕ್ ಮಾಡುವ ಭರದಲ್ಲಿ ದುರ್ಘಟನೆ ಸಂಭವಿಸಿತು. ಓವರ್ ಟೇಕ್ ಮಾಡುವ ಸಂದರ್ಭ ಎದುರಿನಿಂದ ರಾಜಹಂಸ ಬಸ್ ಬರುತ್ತಿದ್ದು, ಟೆಂಪೋ ಚಾಲಕ ನಿಯಂತ್ರಣ ಕಳೆದುಕೊಂಡು ರಾಜಹಂಸಕ್ಕೆ ಡಿಕ್ಕಿ ಹೊಡೆದು, ಹಳ್ಳಕ್ಕೆ ಬಿತ್ತು.
ಇನ್ನೊಂದೆಡೆ ರಾಜಹಂಸ ಹಾಗೂ ಐರಾವತ ಬಸ್ ಮುಖಾಮುಖಿ ಡಿಕ್ಕಿಯಾದವು.
ಸ್ಥಳದಲ್ಲಿ ಟ್ರಾಫಿಕ್ ದಟ್ಟಣೆಯಾಗಿದ್ದು, ಎರಡು ಕಡೆಯೂ ವಾಹನಗಳು ಸಾಲುಗಟ್ಟಿ ನಿಂತಿವೆ. ಸಂಚಾರ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿದ್ದಾರೆ.


























