ಬೆಂಗಳೂರು: ಕಲಿಯುಗ- ಸತ್ಯಯುಗದ ಸಂಧಿಕಾಲ ಆರಂಭವಾಗಿದ್ದು, ರಾಜಕಾರಣಿಗಳು ಅವರು ಮಾಡಿದ ಕರ್ಮಕ್ಕೆ ತಕ್ಕ ಫಲ ಅನುಭವಿಸುತ್ತಿದ್ದಾರೆ ಎಂದು ಓಡಿಶಾದ ಖ್ಯಾತ ಕಾಲಜ್ಞಾನಿ, ವಿಶ್ವದೆಲ್ಲೆಡೆ ಅತ್ಯಂತ ಜನಪ್ರಿಯವಾಗಿರುವ ಭವಿಷ್ಯ ಮಾಲಿಕಾದ ಅದ್ಭುತ ಜ್ಞಾನವನ್ನು ಸಿದ್ದಿಕೊಂಡಿರುವ ಕಾಲಜ್ಞಾನಿ ಪಂ. ಶ್ರೀ ಕಾಶಿನಾಥ್ ಮಿಶ್ರ ತಿಳಿಸಿದ್ದಾರೆ.
ಬೆಂಗಳೂರು ಬಸವನಗುಡಿಯ ಶಂಕರಮಠದ ಶ್ರೀ ಭಾರತೀ ತೀರ್ಥ ಸಭಾಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಸಕ್ತ ನಡೆಯುತ್ತಿರುವ ಬೆಳವಣಿಗೆ ಎಲ್ಲಾ ರಾಜಕಾರಣಿಗಳ ಬದುಕಿನಲ್ಲಿ ಕಂಡು ಬರಲಿದೆ. ಎಲ್ಲ ರಾಜಕಾರಣಿಗಳು ತಮ್ಮ ಕರ್ಮಕ್ಕೆ ಫಲ ಪಡೆಯುವ ದಿನ ಬಂದಿದೆ. ಅದು ಒಂದಿಬ್ಬರು ರಾಜಕಾರಣಿಗಳಲ್ಲ,” ಎಂದು ಅವರು ತಿಳಿಸಿದರು.ಮಾರ್ಚ್ 29 2025ರಿಂದ 2034ರ ವರೆಗೆ ವಿಶ್ವ ಸಂಕಷ್ಟದ ದಿನ ಎದುರಿಸಲಿದೆ. ಭಾರತದ ಮೇಲೆ 13 ರಾಷ್ಟ್ರಗಳು ಧಾಳಿ ಮಾಡಲಿವೆ. ಇದರಲ್ಲಿ ಕೆಲವು ಮಿತ್ರ ದೇಶಗಳು ಕೂಡಾ ಸೇರಿವೆ. ಈ ಯುದ್ಧದಲ್ಲಿ ಉತ್ತರ ಭಾರತ ಅಪಾರ ಕಷ್ಟ ಎದುರಿಸಲಿದೆ ಎಂದು ತಿಳಿಸಿದ ಅವರು ಪುರಿ ಜಗನ್ನಾಥ ದೇಗುಲ ಸಮುದ್ರದಲ್ಲಿ ಮುಳುಗುವ ಸಾಧ್ಯತೆ ಇದೆ ಎಂದು ತಿಳಿಸಿದರು.ವಿಶ್ವದಲ್ಲಿ ಈ ಅವಧಿಯಲ್ಲಿ ಹೊಸ ಸಾಂಕ್ರಾಮಿಕ ಮಹಾಮಾರಿ, ಯುದ್ಧ ನಡೆಯಲಿದೆ. 2024ರ ಬಳಿಕ ಸತ್ಯಯುಗ ಆರಂಭ ಬಳಿಕ ಎಲ್ಲವು ಬದಲಾಗಲಿದೆ ಎಂದು ಅವರು ತಿಳಿಸಿದರು.ಕಾಲಜ್ಞಾನಿ ಪಂ. ಶ್ರೀ ಕಾಶಿನಾಥ್ ಮಿಶ್ರ ನಮ್ಮ ಬೆಂಗಳೂರಿನಲ್ಲಿ ಶ್ರೀ ಮದ್ಭಾಗವತ ಮಹಾ ಪುರಾಣ ಕಥಾಮೃತ ಮತ್ತು ಭವಿಷ್ಯ ಮಾಲಿಕಾ ಪುರಾಣ ಕಾಯಕ್ರಮ ನಡೆಸಿಕೊಡಲು ಆಗಮಿಸಿದ್ದಾರೆ. ಇದೆ ಮೊದಲ ಬಾರಿಗೆ ಅವರು ನಮ್ಮ ಬೆಂಗಳೂರಿನಲ್ಲಿ ಆಸ್ತಿಕ ಮಹಾಶಯರನ್ನು ಹರಸಲಿದ್ದಾರೆ.ಜೂನ್ 24ರಿಂದ ಜೂನ್ 30ರವರೆಗೆ ಪ್ರತಿದಿನ ಸಂಜೆ 4ರಿಂದ 7ರವರೆಗೆ, ನಗರದ ಬಸವನಗುಡಿಯ ಶಂಕರಪುರಂನ ಶಂಕರ ಮಠದ ಶ್ರೀ ಭಾರತೀ ತೀರ್ಥ ಸಭಾ ಭವನದಲ್ಲಿ ಅವರು ಈ ಕಾಲಜ್ಞಾನ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.ಈ ಗ್ರಂಥದ ಪ್ರಕಾರ ಈಗಿರುವ 795 ಕೋಟಿ ಜನರ ಪೈಕಿ ಕೇವಲ 64 ಕೋಟಿ ಜನರು ಮಾತ್ರ ಕಲಿಯುಗದಿಂದ ಸತ್ಯಯುಗಕ್ಕೆ ತೆರಳುತ್ತಾರೆ. ಮುಂದಿನ 8 ವರ್ಷಗಳಲ್ಲಿ ಜಗತ್ತು ಮೂರನೇ ಜಾಗತಿಕ ಮಹಾ ಯು ದ್ಧ, ಆಹಾ ರ ಧಾನ್ಯಗಳ ಕೊರತೆ, ಬಿರುಗಾಳಿಗಳು ಮತ್ತು ಸುಂಟರ ಗಾಳಿಗಳು, ಪ್ರವಾಹಗಳು ಮತ್ತು ಸುನಾಮಿಗಳು, ಜ್ವಾಲಾಮುಖಿ ಸ್ಫೋಟಗಳು ಮತ್ತು ಬೆಂಕಿಯಿಂದ ನಾಶ, ಭೂಕಂಪಗಳು, ಬರ ಮತ್ತು ಹಸಿವು, ಸಾಂಕ್ರಾಮಿಕ ರೋಗಗಳಿಂದ ಈ ಜಗತ್ತು ನಡುಗಲಿದೆ ಎಂದು ತಿಳಿಸಿದ್ದರು. ಈ ಪೈಕಿ ಈಗಾಗಲೇ ಕೆಲವು ಸತ್ಯವಾಗುತ್ತಿದ್ದು, ಪಂ. ಶ್ರೀ ಕಾಶಿನಾಥ್ ಮಿಶ್ರ ಅವರ ಭವಿಷ್ಯ ದರ್ಪಣ ಎಲ್ಲೆಡೆ ಪ್ರಖ್ಯಾತಿ ಹೊಂದುತ್ತಿದೆ.ಶ್ರೀ ಪುರಿಯ ಶ್ರೀ ಜಗನ್ನಾಥನ ಪರಮ ಭಕ್ತರಾದ ಪಂ. ಶ್ರೀ ಕಾಶಿನಾಥ್ ಮಿಶ್ರ ತ್ರಿಸಂಧ್ಯಾಧಾರ ಶ್ಲೋಕದ ಮೂಲಕ ಜಗತ್ತನ್ನು ರಕ್ಷಿಸಲು ತಮ್ಮ ಭಕ್ತರೊಂದಿಗೆ ಶ್ರಮಿಸುತ್ತಿದ್ದಾರೆ.ಈ ಭವಿಷ್ಯ ಮಾಲಿಕಾ ಗ್ರಂಥಗಳನ್ನು 600 ವರ್ಷಗಳ ಹಿಂದೆ ಪಂಚ ಸಖರು ಅಂದರೆ ದ್ವಾಪರ ಯುಗದ ಭಗವಾನ್ ಶ್ರೀ ಕೃಷ್ಣನ ಪರಮ ಮಿತ್ರರು ಕಲಿಯಗದಲ್ಲಿ ಪುನರ್ಜನ್ಮ ಪಡೆದು ಬರೆದು, ಮನುಕುಲದ ಭವಿಷ್ಯ ಬರೆದಿದ್ದಾರೆ. ಈ ಕೃಷ್ಣನ ಸ್ನೇಹಿತರೆಂದರೆ ಅಚ್ಯುತಾನಂದ ದಾಸ, ಬಲರಾಮ ದಾಸ, ಶಿಶು ಅನಂತ ದಾಸ, ಯಶವಂತ ದಾಸ, ಮತ್ತು ಜಗನ್ನಾಥ ದಾಸ (ಧಾಮ, ಸುಧಾಮ, ಸುಭಾಲ, ಸುಭಾವು, ಹಾಗು ಸುಭಾಕ್ಷ.) ಈ ಗ್ರಂಥದ ಜ್ಞಾನವನ್ನು ಕಾಲಜ್ಞಾನಿ ಪಂ. ಶ್ರೀ ಕಾಶಿನಾಥ್ ಮಿಶ್ರ ಭಕ್ತರಿಗೆ ಅನುಗ್ರಹಿಸಲಿದ್ದಾರೆ.
ರಾಜಕಾರಣಿಗಳು ಕರ್ಮಕ್ಕೆ ತಕ್ಕ ಪಾಠ ಕಲಿಯುವ ದಿನ ಬಂದಿದೆ: ಕಾಲಜ್ಞಾನಿ ಪಂ. ಶ್ರೀ ಕಾಶಿನಾಥ್ ಮಿಶ್ರ | ಭಾರತದ ಮೇಲೆ ದಾಳಿ ಮಾಡಲಿವೆಯಂತೆ ಮಿತ್ರರಾಷ್ಟ್ರ ಸಹಿತ 13 ರಾಷ್ಟ್ರಗಳು!!
What's your reaction?
- 094c
- 094cc
- 0ai technology
- 0artificial intelegence
- 0avg
- 0bt ranjan
- 0co-operative
- 0crime news
- 0death news
- 0gl
- 0gods own country
- 0google for education
- 0independence
- 0jewellers
- 0karnataka state
- 0kerala village
- 0lokayuktha
- 0lokayuktha raid
- 0manipal
- 0minister krishna bairegowda
- 0mla ashok rai
- 0nidana news
- 0nirvathu mukku
- 0ptr tahasildar
- 0puttur
- 0puttur news
- 0puttur tahasildar
- 0revenue
- 0revenue department
- 0revenue minister
- 0society
- 0sowmya
- 0tahasildar
- 0tahasildar absconded
- 0udupi
Related Posts
ಕೋರ್ಟ್ ರಸ್ತೆಗೆ ಬಂದ ಮಂಗನ ಮೇಲೆ ನಾಯಿ ದಾಳಿ! ಕುತ್ತಿಗೆಗೆ ಗಾಯವಾಗಿ ಗಂಭೀರ ಸ್ಥಿತಿಯಲ್ಲಿದ್ದ ವಾನರನ ರಕ್ಷಣೆ!!
ಪುತ್ತೂರು: ಇಲ್ಲಿನ ಕೋರ್ಟ್ ರಸ್ತೆಗೆ ಬಂದ ಮಂಗನ ಮೇಲೆ ನಾಯಿ ದಾಳಿ ನಡೆಸಿ ಗಂಭೀರ ಗಾಯಗೊಳಿಸಿದ…
ಅಶೋಕ ಜನಮನದಲ್ಲಿ ಜನಸಂದಣಿಯಿಂದ ಅಸ್ವಸ್ಥ | ಆಸ್ಪತ್ರೆಗೆ ಭೇಟಿ ನೀಡಿದ ಶಾಸಕ ಅಶೋಕ್ ರೈ
ಪುತ್ತೂರು: ಅ. 20 ರಂದು ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ನಡೆದ ಅಶೋಕ ಜನಮನ 2025 ದೀಪಾವಳಿ…
ಸಿಡಿಲು ಬಡಿದು ಹಾನಿಯಾದ ಮನೆಗೆ ಭೇಟಿ ನೀಡಿದ ಶಾಸಕ ಅಶೋಕ್ ರೈ
ಪುತ್ತೂರು: ಸಿಡಿಲು ಬಡಿದು ಹಾನಿಯಾದ ಚಿಕ್ಕ ಮುಡ್ನೂರು ಗ್ರಾಮದ ಬೆದ್ರಾಳ ನೆಕ್ಕರೆ ನಿವಾಸಿ…
ನಗರಸಭೆಯ ವಾಹನ ಶೆಡ್ಡಿನಲ್ಲಿ ಖಾಸಗಿ ಸಂಸ್ಥೆಯ ಎಲೆಕ್ಟ್ರೋನಿಕ್ಸ್ ದಾಸ್ತಾನು! ಮಹಮ್ಮದ್ ಅಲಿ ತರಾಟೆ; ದಾಸ್ತಾನು ಖಾಲಿ ಮಾಡಿಸಿದ ಅಧಿಕಾರಿಗಳು!
ಪುತ್ತೂರು: ಕಿಲ್ಲೆ ಮೈದಾನದ ನಗರಸಭೆ ವಾಹನ ಶೆಡ್ಡ್’ನಲ್ಲಿ ದಾಸ್ತಾನು ಇಟ್ಟಿದ್ದ ಖಾಸಗಿ ಸಂಸ್ಥೆಯ…
ನಿಮ್ಮ ವ್ಯಕ್ತಿತ್ವವೇ ಹಾಸ್ಯಕ್ಕೆ ವಸ್ತು: ಮದ್ಯಪ್ರಿಯರಿಗೆ ಎಚ್ಚರಿಕೆ ನೀಡಿದ ವೀರೇಂದ್ರ ಹೆಗ್ಗಡೆ | ತೆಂಕಿಲ ಗೌಡ ಸಮುದಾಯ ಭವನದಲ್ಲಿ ಗಾಂಧಿಸ್ಮೃತಿ, ಬೃಹತ್ ಜನಜಾಗೃತಿ ಸಮಾವೇಶ
ಪುತ್ತೂರು: ಸಿನಿಮಾ, ನಾಟಕದ ಹಾಸ್ಯ ಸನ್ನಿವೇಶಗಳಿಗೆ ಕುಡುಕರ ಜೀವನವೇ ವಸ್ತು ಆಗುತ್ತಿದೆ.…
ಹಿಂದಾರು ಸಾಯಿ ಭಗವಾನ್ ಗೋಶಾಲೆಯಲ್ಲಿ ಸಾಮೂಹಿಕ ಗೋಪೂಜೆ | ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ಕಾರ್ಯಕ್ರಮ
ಪುತ್ತೂರು : ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ, ನೇತ್ರಾವತಿ ವಲಯ, ಪುತ್ತೂರು ತಾಲೂಕು ಇದರ…
ಅಶೋಕ ಜನ-ಮನ: ಆಸ್ಪತ್ರೆಯಲ್ಲಿ ದಾಖಲಾದವರ ಆರೋಗ್ಯ ವಿಚಾರಿಸಿದ ಮಠಂದೂರು
ಪುತ್ತೂರು: ಅ.20ರಂದು ನಡೆದ ಅಶೋಕ ಜನಮನ ಕಾರ್ಯಕ್ರಮದ ವೇಳೆ ಅಸ್ವಸ್ಥಗೊಂಡು ಆಸ್ಪತ್ರೆಗೆ…
ರಸ್ತೆಗೆ ಅಡ್ಡ ಬಿದ್ದಿದ್ದ ಗುಡ್ಡ ತೆರವು
ಪುತ್ತೂರು: ತೀವ್ರ ಮಳೆಯಿಂದ ಮಚ್ಚಿಮಲೆ - ಬಲ್ನಾಡು ರಸ್ತೆಗಡ್ಡವಾಗಿ ಕುಸಿತಗೊಂಡ ಗುಡ್ಡದ…
ನಿಗಮಗಳ ವಿಲೀನ, ಮುಚ್ಚಲು ಸರ್ಕಾರಕ್ಕೆ ಶಿಫಾರಸು!
ರಾಜ್ಯದ 7 ನಿಗಮಗಳನ್ನು ಮುಚ್ಚುವಂತೆ, 9 ನಿಗಮಗಳನ್ನು ವಿಲೀನ ಮಾಡುವಂತೆ ರಾಜ್ಯ ಸರ್ಕಾರಕ್ಕೆ…
ಪಶುಪತಿ ಎಲೆಕ್ಟ್ರಿಕಲ್ ಶೋರೂಂಗೆ ಬೇಕಾಗಿದ್ದಾರೆ
ಪುತ್ತೂರು: ಪುತ್ತೂರಿನ ಪಶುಪತಿ ಲೈಟ್ಸ್, ಫ್ಯಾನ್ಸ್, ಎಲೆಕ್ಟ್ರಿಕಲ್’ಗೆ ತಕ್ಷಣ ಮಾರಾಟ…




















