ಕೃಷಿರಾಜ್ಯ ವಾರ್ತೆಸ್ಥಳೀಯ

ಹಾಲಿಗೆ ನೀರು ಸೇರಿಸಿ ಕೆಎಂಎಫ್’ಗೆ ಭಾರೀ ವಂಚನೆ: ಸಸ್ಪೆಂಡ್

ಕರ್ನಾಟಕ ಹಾಲು ಮಹಾಮಂಡಳ ಕೆಎಂಎಫ್ ಗೆ (KMF) ಹಾಲು ಸರಬರಾಜು ಮಾಡುವ ಬಿ.ಎಂ.ಸಿ ಹಾಲಿನ ಡೈರಿಯೊಂದಲ್ಲಿ ಕೆಲಸ ಮಾಡುವ ಡೈರಿ ಗುಮಾಸ್ತ ಹಾಗೂ ಕಾರ್ಯದರ್ಶಿ ಸೇರಿಕೊಂಡು ರೈತರು ತಂದು ಕೊಡುವ ಹಾಲಿಗೆ ನೀರು ಮಿಶ್ರಣ ಮಾಡಿ ಹೆಚ್ಚುವರಿ ಹಾಲಿನ ಲೆಕ್ಕ ತೋರಿಸಿದ್ದಾರೆ. ನಂತರ ಹೆಚ್ಚುವರಿಯಾಗಿ ಬಂದ ಹಾಲಿನ ಹಣವನ್ನು ಬೇನಾಮಿ ಅಕೌಂಟ್ ಗಳಿಗೆ ವರ್ಗಾವಣೆ ಮಾಡಿ ಲಕ್ಷ ಲಕ್ಷ ಹಣ ಗುಳಂ ಮಾಡಿರುವ ಘಟನೆ ನಡೆದಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಗುಮಾಸ್ತ-ಕಾರ್ಯದರ್ಶಿ ವಂಚನೆಯ ವಿರೋಧ ಆಕ್ರೋಶಗೊಂಡ ಹಾಲು ಉತ್ಪಾದಕರು ಹಾಲು ಉತ್ಪಾದಕ ಸಹಕಾರ ಸಂಘದ ಡೈರಿ ಮುಂದೆ ಪ್ರತಿಭಟನೆ ನಡೆಸಿದ್ದಾರೆ…

SRK Ladders

ಸಂಘದ ಕಾರ್ಯದರ್ಶಿ ಮತ್ತು ಗುಮಾಸ್ತ ಸೇರಿ ಅಕ್ರಮವಾಗಿ ತಿಂದಿರುವ ಹಣ ವಾಪಸ್ ಕಟ್ಟಲೇ ಬೇಕು ಎಂದು ಆಗ್ರಹಿಸಿದ್ದಾರೆ. ಈ ವಿದ್ಯಮಾನಗಳು/ ದೃಶ್ಯಗಳು ಕಂಡು ಬಂದಿದ್ದು ಚಿಕ್ಕಬಳ್ಳಾಪುರ ತಾಲ್ಲೂಕಿನ ಅಜ್ಜವಾರ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಹಾಲಿನ ಡೈರಿಯಲ್ಲಿ.

ಡೈರಿಯ ಕಾರ್ಯದರ್ಶಿ ಮುನಿರಾಜು ಮತ್ತು ಗುಮಾಸ್ತ ಮುನಿಕೃಷ್ಣ ಎನ್ನುವವರು, ರೈತರು ತಂದು ಕೊಡುವ ಹಾಲಿಗೆ ನೀರು ಮಿಶ್ರಣ ಮಾಡಿ, ಹೆಚ್ಚುವರಿ ಹಾಲಿನ ಹಣ ತರಿಸಿಕೊಂಡಿದ್ದಾರೆ. ನಂತರ ಹೆಚ್ಚುವರಿಯಾಗಿ ಬಂದ ಹಾಲಿನ ಹಣವನ್ನು ತಮಗೆ ಬೇಕಾದ ಸಂಬಂಧಿಕರು ಹಾಗೂ ಬೇನಾಮಿ ಅಕೌಂಟ್ ಗಳಿಗೆ ಹಣ ವರ್ಗಾವಣೆ ಮಾಡಿ ಲಕ್ಷ ಲಕ್ಷ ಹಣ ಗುಳಂ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಅಜ್ಜವಾರ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘ ಅಧ್ಯಕ್ಷರಾದ ಕೇಶವ ಮಾಹಿತಿ ನೀಡಿದ್ದಾರೆ.

ಇನ್ನು ಗ್ರಾಮದ ರೈತ ಹರೀಶ ಎನ್ನುವವರು ಡೈರಿಯ ಕಾರ್ಯದರ್ಶಿ ಮುನಿರಾಜು ಮತ್ತು ಗುಮಾಸ್ತ ಮುನಿಕೃಷ್ಣ ಜೋಡಿಯ ಅಕ್ರಮವನ್ನು ಪತ್ತೆ ಹಚ್ಚಿ ಸಂಘದ ಆಡಳಿತ ಮಂಡಳಿ ಗಮನಕ್ಕೆ ತಂದಿದ್ದಾರೆ. ಇದರಿಂದ ಎಚ್ಚೆತ್ತ ಆಡಳಿತ ಮಂಡಳಿ, ಇಬ್ಬರನ್ನೂ ತಕ್ಷಣ ಕೆಲಸದಿಂದ ತೆಗೆದು ಹಾಕಿದ್ದಾರೆ. ಇಬ್ಬರೂ ಸೇರಿ ನಾಲ್ಕು ತಿಂಗಳಿಂದ 4 ಲಕ್ಷದ 70 ಸಾವಿರ ಹಣವನ್ನು ಗೋಲ್ ಮಾಲ್ ಮಾಡಿದ್ದಾರೆ. ಇದರಿಂದ ಆಕ್ರೋಶಗೊಂಡ ಸಂಘದ ಸದಸ್ಯರು ಡೈರಿಯ ಮುಂದೆ ಹಾಲಿನ ಕ್ಯಾನ್ ಗಳನ್ನಿಟ್ಟು ಪ್ರತಿಭಟನೆ ನಡೆಸಿದ್ದಾರೆ.

ಈ ಸುದ್ದಿಯನ್ನು ಶೇರ್ ಮಾಡಿ

Related Posts

ವಿವಿ ಪ್ರಾಧ್ಯಾಪಕಿಯಾದ ಮಂಗಳಮುಖಿ; ಉನ್ನತ ಶಿಕ್ಷಣದ ಪ್ರಾಧ್ಯಾಪಕಿಯಾದದ್ದು ಇದೇ ಮೊದಲು!!

ತೃತೀಯ ಲಿಂಗಿಯೊಬ್ಬರು ವಿಶ್ವವಿದ್ಯಾಲಯವೊಂದರ ಅರೆಕಾಲಿಕ ಪ್ರಾಧ್ಯಾಪಕಿಯಾಗಿ ನೇಮಕಗೊಳ್ಳುವ ಮೂಲಕ…

1 of 4