ಸ್ಥಳೀಯ

ಬೆಳಗಾವಿ ಕೋರ್ಟ್ ಹಾಲ್ ನಲ್ಲೇ ಪಾಕ್ ಪರ ಘೋಷಣೆ ಕೂಗಿದ ಜೈಲು ಕೈದಿ ಪುತ್ತೂರು ಮೂಲದ ಜಯೇಶ್ ಪೂಜಾರಿ!

ಪುತ್ತೂರು ಮೂಲದ ನಟೋರಿಯಸ್ ಪಾತಕಿ ಜಯೇಶ್ ಪೂಜಾರಿ ಬೆಳಗಾವಿಯ ಜಿಲ್ಲಾ ನ್ಯಾಯಾಲಯದಲ್ಲೇ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ್ದಾನೆ.‌ ಪಾಕಿಸ್ತಾನ್ ಪರ ಘೋಷಣೆ ಕೂಗುತ್ತಿದ್ದಂತೆ ವಕೀಲರು, ಸಾರ್ವಜನಿಕರು ಸೇರಿ ಕೋರ್ಟ್ ಒಳಗಡೆಯೇ ಧರ್ಮದೇಟು ನೀಡಿದ್ದಾರೆ.

ಈ ಸುದ್ದಿಯನ್ನು ಶೇರ್ ಮಾಡಿ

ಬೆಳಗಾವಿ: ಪುತ್ತೂರು ಮೂಲದ ನಟೋರಿಯಸ್ ಪಾತಕಿ ಜಯೇಶ್ ಪೂಜಾರಿ ಬೆಳಗಾವಿಯ ಜಿಲ್ಲಾ ನ್ಯಾಯಾಲಯದಲ್ಲೇ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ್ದಾನೆ.‌ ಪಾಕಿಸ್ತಾನ್ ಪರ ಘೋಷಣೆ ಕೂಗುತ್ತಿದ್ದಂತೆ ವಕೀಲರು, ಸಾರ್ವಜನಿಕರು ಸೇರಿ ಕೋರ್ಟ್ ಒಳಗಡೆಯೇ ಧರ್ಮದೇಟು ನೀಡಿದ್ದಾರೆ.

ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಜೀವ ಬೆದರಿಕೆ ಒಡ್ಡಿರುವ ಪ್ರಕರಣ ಸೇರಿದಂತೆ ಹಲವಾರು ಕೇಸುಗಳನ್ನು ಎದುರಿಸುತ್ತಿರುವ ಜಯೇಶ್ ಪೂಜಾರಿ ಬೆಳಗಾವಿ ಹಿಂಡಲಗಾ ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿದ್ದು ಇಂದು ಕೋರ್ಟಿಗೆ ಹಾಜರುಪಡಿಸಲು ಕರೆತಂದಿದ್ದಾಗ ಕೃತ್ಯ ನಡೆದಿದೆ. ಕೋರ್ಟ್ ಒಳ ಭಾಗದಲ್ಲೇ ವಕೀಲರು, ಸಾರ್ವಜನಿಕರು ಪೊಲೀಸರ ಸಮ್ಮುಖದಲ್ಲಿಯೇ ಥಳಿಸಿದ್ದಾರೆ. ಏಟು ಬೀಳುತ್ತಿದ್ದಂತೆ ಆರೋಪಿಯನ್ನು ರಕ್ಷಣೆ ಮಾಡಿ ಪೊಲೀಸರು ಹೊರಗಡೆ ಕರೆದುಕೊಂಡು ಹೋಗಿದ್ದಾರೆ.

SRK Ladders

ಕೈದಿಯನ್ನು ಬಳಿಕ ಪೊಲೀಸರು ಸ್ಥಳೀಯ ಎಪಿಎಂಸಿ ಠಾಣೆಗೆ ಕರೆದುಕೊಂಡು ಹೋಗಿದ್ದು ವಿಚಾರಣೆ ನಡೆಸುತ್ತಿದ್ದಾರೆ. ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಅವರಿಗೆ ಜೈಲಿನಿಂದ ಜೀವ ಬೆದರಿಕೆ ಒಡ್ಡಿದ ಪ್ರಕರಣ ಸಂಬಂಧಿಸಿ ಪೊಲೀಸರು ಆತನನ್ನು ವಿಚಾರಣೆಗೆ ಕರೆತಂದಿದ್ದರು.‌ ಹಿಂಡಲಗಾ ಜೈಲಿನಲ್ಲಿದ್ದುಕೊಂಡೇ ಅಲೋಕ್ ಕುಮಾರ್ ಗೆ ಫೋನ್ ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದ ಬಗ್ಗೆ ಪ್ರಕರಣ ದಾಖಲಾಗಿತ್ತು. ಈ ಹಿಂದೆ ಕೇಂದ್ರ ಸಚಿವ ನಿತಿನ್ ಗಡ್ಕರಿಯವರ ನಾಗಪುರದ ಕಚೇರಿಗೆ ಜೈಲಿನಿಂದ ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದಲ್ಲದೆ, ಹತ್ತು ಕೋಟಿ ನೀಡುವಂತೆ ಜಯೇಶ್ ಪೂಜಾರಿ ಡಿಮ್ಯಾಂಡ್ ಇಟ್ಟಿದ್ದ. ಕೋರ್ಟ್ ನಲ್ಲಿ ಸಕಾಲಕ್ಕೆ ತನ್ನ ಕೇಸಿನ ಕುರಿತು ಅಹವಾಲು ಸ್ವೀಕರಿಸುತ್ತಿಲ್ಲ ಎಂಬ ಕೋಪದಲ್ಲಿ ಕೈದಿ ಪಾಕ್ ಪರ ಘೋಷಣೆ ಕೂಗಿ ವಿಕೃತಿ ಮೆರೆದಿದ್ದಾನೆ ಎಂದು ತಿಳಿದುಬಂದಿದೆ.

ಆರೋಪಿ ಜಯೇಶ್ ಪೂಜಾರಿ ಮೂಲತಃ ಮಂಗಳೂರಿನ ಪುತ್ತೂರಿನವನಾಗಿದ್ದು ಮುಂಬೈನಲ್ಲಿದ್ದು ಅಪರಾಧ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ. ಹಿಂದೆ ಅಂಡರ್ ವರ್ಲ್ಡ್ ಪಾತಕಿಗಳ ಜೊತೆಗೆ ಸಂಪರ್ಕದಲ್ಲಿದ್ದು ಉದ್ಯಮಿಗಳನ್ನು ಬೆದರಿಸಿ ಹಣ ಕೀಳುತ್ತಿದ್ದ. ನಾಲ್ಕು ವರ್ಷಗಳ ಹಿಂದೆ ಬಂಧನಕ್ಕೀಡಾಗಿ ಜೈಲಿನಲ್ಲಿದ್ದಾನೆ‌.


ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 3