Gl harusha
ರಾಜ್ಯ ವಾರ್ತೆಸ್ಥಳೀಯ

ಎಸ್ಪಿ, ಐಜಿಪಿ ಕಚೇರಿ ಜಾಗವನ್ನೇ ಮಾರಾಟಕ್ಕೆ ಯತ್ನಿಸಿದ ಖದೀಮರು!!

ಈ ಸುದ್ದಿಯನ್ನು ಶೇರ್ ಮಾಡಿ

ನಕಲಿ ದಾಖಲೆ ಸೃಷ್ಟಿಸಿ ನಗರದ ಮಿಲ್ಲರ್ಸ್ ರಸ್ತೆಯಲ್ಲಿರುವ ಬೆಂಗಳೂರು ಗ್ರಾಮಾಂತರ ಎಸ್ಪಿ ಕಚೇರಿ ಹಾಗೂ ಕೇಂದ್ರ ವಲಯ ಐಜಿಪಿ ಕಚೇರಿ ಜಾಗವನ್ನು ಮಾರಾಟಕ್ಕೆ ಯತ್ನಿಸಿದ ಆರು ಮಂದಿಯನ್ನು ಹೈಗ್ರೌಂಡ್ಸ್ ಪೊಲೀಸರು ಬಂಧಿಸಿದ್ದಾರೆ.

srk ladders
Pashupathi

ಐದು ಎಕರೆ ಜಾಗದ ಇಂದಿನ ಮಾರುಕಟ್ಟೆ ಮೌಲ್ಯ ಸುಮಾರು ರೂ. 200 ಕೋಟಿ ಆಗಿದೆ. ಪೊಲೀಸ್ ಇಲಾಖೆಯ ಕಚೇರಿ ಇರುವ ಕಟ್ಟಡದ ಹೆಸರು ಓಂ ಮಹಲ್. ಬಂಧಿತರನ್ನು ವಿದ್ಯಾರಣ್ಯಪುರದ ಎಂಡಿ ಹನೀಫ್, ವಿಜಯನಗರದ ರಾಜಶೇಖರ್, ಉಳ್ಳಾಲದ ರಾಮಸಂದ್ರ ಮುಖ್ಯರಸ್ತೆಯ ಮೊಹಮ್ಮದ್ ನದೀಮ್, ಸಂಜಯನಗರದ ಮೋಹನ್ ಶೆಟ್ಟಿ ಮತ್ತು ಜಹೀರ್ ಅಹಮದ್ ಎಂದು ಗುರುತಿಸಲಾಗಿದೆ.

ಸೋಮವಾರ ಮಧ್ಯಾಹ್ನ 1ರಿಂದ 1.30ರ ನಡುವೆ ಈ ಘಟನೆ ನಡೆದಿದೆ. ಆರೋಪಿಗಳು ಎಸ್ಪಿ ಕಚೇರಿ ಆವರಣವನ್ನು ಅತಿಕ್ರಮ ಪ್ರವೇಶಿಸಿದ್ದು, ತಮ್ಮ ಮೊಬೈಲ್ ನಿಂದ ಕಚೇರಿಯ ಕಟ್ಟಡ ಹಾಗೂ ಆವರಣವನ್ನು ಚಿತ್ರೀಕರಿಸಿ, ಪೋಟೋ ಸೆರೆ ಹಿಡಿಯಲು ಮುಂದಾಗಿದ್ದಾರೆ. ಅದನ್ನು ಗಮನಿಸಿದ ಎಸ್ಟೇಟ್ ಆಫೀಸರ್ ಸಂತೋಷ್ ಗೌಡ, ಏಕೆ ಕಚೇರಿ ಕಟ್ಟಡ ಚಿತ್ರೀಕರಿಸುತ್ತಿರುವಿರಿ ಎಂದು ಪ್ರಶ್ನಿಸಿದ್ದಾರೆ. ಆಗ ಸ್ವತ್ತಿನ ಮಾಲೀಕರಾದ ಗಣಪತಿ ಮತ್ತು ಜಹೀರ್ ಎಂಬುವರು ನಮಗೆ ಜಿಪಿಎ (ಜನರಲ್ ಪವರ್ ಆಫ್ ಅಟಾರ್ನಿ) ಮಾಡಿಕೊಟ್ಟಿದ್ದು, ಮಾರಾಟ ಮಾಡುವ ಹಕ್ಕಿದೆ ಎಂದು ಆರೋಪಿಗಳು ಹೇಳಿದ್ದಾರೆ.

ಈ ವಿಷಯವನ್ನು ಮೇಲಾಧಿಕಾರಿಗಳಿಗೆ ತಿಳಿಸಿದ ಇನ್ಸ್‌ಪೆಕ್ಟರ್ ಹೈಗ್ರೌಂಡ್ಸ್ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಫ್ಲಾಟ್ ನೇಪಾಳದ ರಾಜಮನೆತನಕ್ಕೆ ಸೇರಿತ್ತು ಎಂದು ಹೇಳಲಾಗುತ್ತದೆ. ಆದರೆ, ಮಾಲೀಕತ್ವದ ವಿವರಗಳು ಸ್ಪಷ್ಟವಾಗಿಲ್ಲ. ಪೊಲೀಸ್ ಇಲಾಖೆಯ ಕಚೇರಿಗಳು 1962 ರಿಂದ ಕಾರ್ಯನಿರ್ವಹಿಸುತ್ತಿವೆ.”ಆಸ್ತಿ ಮಾಲೀಕತ್ವದ ಬಗ್ಗೆ ಗೊಂದಲವಿದೆ. ನಿವೇಶನ ನೇಪಾಳಿ ರಾಜನಿಗೆ ಸೇರಿದ್ದು ಎಂದು ಹೇಳಲಾಗಿದೆ. ರಾಜ್ಯ ಸರ್ಕಾರದಿಂದ ಆಸ್ತಿಯನ್ನು ನೋಂದಾಯಿಸಲು ಹಲವಾರು ಪತ್ರ ವ್ಯವಹಾರಗಳು ನಡೆದಿದೆ ಎಂದು ಬೆಂಗಳೂರು ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ ಬಲದಂಡಿ ತಿಳಿಸಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

Related Posts