ಕರಾವಳಿಸ್ಥಳೀಯ

ಮೀನುಗಾರಿಕಾ ಬೋಟ್’ಗೆ ಮತ್ತೊಂದು ಬೋಟ್ ಡಿಕ್ಕಿ: ಲಕ್ಷಾಂತರ ರೂ. ಮೌಲ್ಯದ ಸೊತ್ತು ಸಮುದ್ರಪಾಲು!!

ಈ ಸುದ್ದಿಯನ್ನು ಶೇರ್ ಮಾಡಿ

ಮೀನುಗಾರಿಕೆ ತೆರಳಿದ್ದ ಬೋಟಿಗೆ ಸಮುದ್ರ ಮಧ್ಯೆ ಇನ್ನೊಂದು ಬೋಟು ಢಿಕ್ಕಿ ಹೊಡೆದ ಪರಿಣಾಮ ಬೋಟು ಮುಳುಗಡೆ ಯಾಗಿದ್ದು, ಇದರಿಂದ ಲಕ್ಷಾಂತರ ರೂ. ನಷ್ಟ ಉಂಟಾಗಿದೆ. ಬೋಟಿನಲ್ಲಿದ್ದ ಐದು ಮಂದಿ ಮೀನುಗಾರರನ್ನು ರಕ್ಷಿಸಲಾಗಿದೆ.

ಮಲ್ಪೆ ವಡಭಂಡೇಶ್ವರ ಗೋಪಾಲ ಸುವರ್ಣ ಎಂಬವರ ಮಾಲ್ತಿದೇವಿ ಬೋಟು ಮೇ 16ರಂದು ರಾತ್ರಿ ಮಲ್ಪೆಬಂದರಿನಿಂದ ಮೀನುಗಾರಿಕೆಗಾಗಿ ಭಟ್ಕಳ ಕಡೆಗೆ ತೆರಳಿತ್ತು. ಇದರಲ್ಲಿ ತಾಂಡೇಲ ಸುರೇಶ್ ಕುಂದರ್, ಮೀನುಗಾರರಾದ ಶಂಕರ ಕುಂದರ್, ಶಂಕರ ಪೂಜಾರಿ, ಯೋಗೇಂದ್ರ, ಫರೀದ ಅಬ್ದುಲ್ ಘನಿ ಶೇಖ್ ಇದ್ದರು.

SRK Ladders

ಮೇ 17ರಂದು ಬೆಳಗಿನ ಜಾವ ಭಟ್ಕಳ ಸಮೀಪ ಸುಮಾರು 12 ಮಾರು ದೂರದಲ್ಲಿ ಹೋಗುತ್ತಿದ್ದ ಬೋಟಿಗೆ ಶ್ರೀದುರ್ಗಾ ಬೋಟು ಡಿಕ್ಕಿ ಹೊಡೆಯಿತ್ತೆನ್ನ ಲಾಗಿದೆ. ಇದರ ಪರಿಣಾಮ ಮಾಲ್ತಿದೇವಿ ಬೊಟಿನ ಮಧ್ಯ ಭಾಗದ ಅಡಿ ಹಲಗೆಯು ಎದ್ದು ಹೋಗಿದ್ದು, ನೀರು ಒಳಗೆ ಬರಲು ಆರಂಭಿಸಿತು.

ಢಿಕ್ಕಿ ಹೊಡೆದ ದುರ್ಗಾ ಬೋಟು ಮತ್ತು ಹತ್ತಿರದಲ್ಲೇ ಇದ್ದ ಪಾಂಚಜನ್ಯ ಬೋಟಿನವರು ಮಾಲ್ತಿದೇವಿ ಬೋಟನ್ನು ಹಗ್ಗದಿಂದ ಕಟ್ಟಿ ಗಂಗೊಳ್ಳಿ ಬಂದರಿನ ಎಳೆದು ತರುವಾಗ ಗಂಗೊಳ್ಳಿ ಅಳಿವೆಯಿಂದ ಸುಮಾರು 8ರಿಂದ 10 ಮಾರು ದೂರ ಹಗ್ಗ ತುಂಡಾಯಿತು. ಇದರ ಕಾರಣ ಮಾಲ್ತಿದೇವಿ ಬೋಟು ನೀರಿನಲ್ಲಿ ಶೇ.90ರಷ್ಟು ಮುಳುಗಡೆಗೊಂಡಿತು. ಈ ವೇಳೆ ಈ ಬೋಟಿನಲ್ಲಿದ್ದ ಎಲ್ಲಾ ಮೀನುಗಾರರನ್ನು ದುರ್ಗಾ ಮತ್ತು ಪಾಂಚಜನ್ಯ ಬೋಟಿನವರು ರಕ್ಷಿಸಿದ್ದು, ಯಾವುದೇ ಜೀವ ಹಾನಿಯಾಗಿರುವುದಿಲ್ಲ ಎಂದು ತಿಳಿದುಬಂದಿದೆ.

ಬೋಟಿನಲ್ಲಿದ್ದ 1.90ಲಕ್ಷ ರೂ. ಮೌಲ್ಯದ 500 ಲೀಟರ್ ಡಿಸೇಲ್, ಎಂಟು ಟ್ರಾಲ್ ಬಲೆ, ಅಶೋಕ್ ಲೈಲ್ಯಾಂಡ್ ಇಂಜಿನ್, ಇತರೇ ಉಪಕರಣಗಳು ಸೇರಿದಂತೆ ಒಟ್ಟು 20,00,000ಲಕ್ಷ ರೂ. ನಷ್ಟ ಉಂಟಾಗಿದೆ. ಬಲೆ ಮತ್ತು ಇನ್ನಿತರ ಸಲಕರಣೆ ಗಳು ನೀರಿನಲ್ಲಿ ತೇಲಿ ಹೋಗಿರುವುದಾಗಿ ಕರಾವಳಿ ಕಾವಲು ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.”


ಈ ಸುದ್ದಿಯನ್ನು ಶೇರ್ ಮಾಡಿ

Related Posts

ಎಸ್.ಕೆ. ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿಯ 2025ನೇ ಸಾಲಿನ ಕ್ಯಾಲೆಂಡರ್, ಡೈರಿ ಬಿಡುಗಡೆ

ಎಸ್.ಕೆ. ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಲಿ. ಮಂಗಳೂರು ಇದರ 2025ನೇ…

1 of 3