Gl harusha
ಸ್ಥಳೀಯ

ದೇವಾಲಯದ ಹುಂಡಿಯಲ್ಲಿ ಡೆತ್‌ ನೋಟ್‌ ಪತ್ತೆ!

ಈ ಸುದ್ದಿಯನ್ನು ಶೇರ್ ಮಾಡಿ

ದೇವಾಲಯದಲ್ಲಿ ಹುಂಡಿ ಒಡೆದಾಗ ಸಿಕ್ಕ ಹತ್ತಾರು ಪತ್ರಗಳ ಪೈಕಿ, ಒಂದು ಪತ್ರದಲ್ಲಿ ಮಹಿಳೆಯೋರ್ವರು ಬರೆದ ಡೆತ್ ನೋಟ್ ಸಿಕ್ಕಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ, ಈ ಘಟನೆ ಮೈಸೂರಿನ ಶ್ರೀಕಂಠೇಶ್ವರ ದೇಗುಲದಲ್ಲಿ ಪತ್ತೆಯಾಗಿದೆ.

srk ladders
Pashupathi
Muliya

“ಹೇ ಭಗವಂತ! ಮಿತಿ ಮೀರಿದ ಸಾಲದಿಂದ ಜೀವನದಲ್ಲಿ ಬಹಳ ಕಷ್ಟ ಅನುಭವಿಸಿದ್ದೇನೆ. ಸಣ್ಣ ಪುಟ್ಟ ವಿಷ ಯಕ್ಕೂ ಗಂಡ ಜಗಳವಾಡುತ್ತಾರೆ. ನನಗೆ ಬದುಕಲು ಸಾಧ್ಯವಾಗುತ್ತಿಲ್ಲ. ಶನಿದೇವ ನನ್ನ ಸಾವಿಗೆ ಯಾರೂ ಕಾರಣರಲ್ಲ…’ ಇಂಥದೊಂದು ಪತ್ರ ನಂಜನಗೂಡು ಶ್ರೀಕಂಠೇಶ್ವರ ದೇಗುಲದ ಹುಂಡಿ ಎಣಿಕೆಯ ವೇಳೆ ಬೆಳಕಿಗೆ ಬಂದಿದೆ. ವಿಪರೀತ ಸಾಲ, ಬಡ್ಡಿ, ಬ್ಯಾಂಕಿನ ಸಾಲ ಕಟ್ಟಲಾಗುತ್ತಿಲ್ಲ. ಸಾಲದ್ದಕ್ಕೆ ನನ್ನೆಲ್ಲಾ ಒಡವೆಯನ್ನು ಗಿರವಿ ಇಟ್ಟಿರುವೆ. ನನ್ನ ಬಳಿ ಹಣ ಇಲ್ಲದ್ದಕ್ಕೆ ಗಂಡ ಸಣ್ಣ ವಿಚಾರಕ್ಕೂ ಜಗಳವಾಡುತ್ತಾರೆ. ಸಾಲಕ್ಕಾಗಿ ಬ್ಯಾಂಕಿಗೆ ಅರ್ಜಿ ಸಲ್ಲಿಸಿದ್ದೆ, ಅದೂ ಆಗಲಿಲ್ಲ.

ನಿತ್ಯವೂ ನೋವು ಅನುಭವಿಸುತ್ತಿರುವೆ. ನಿತ್ಯವೂ ಸಣ್ಣ ವಿಚಾರಕ್ಕೂ ಜಗಳ ನಡೆಯುತ್ತೆ. ನನಗೆ ಈ ಜೀವನ ಬೇಡ ಎಂದು ತೀರ್ಮಾನಿಸಿದ್ದೇನೆ ಎಂದು ಪತ್ರದಲ್ಲಿ ಬರೆಯಲಾಗಿದೆ. ಹಲವು ಭಕ್ತರು ವಿಚಿತ್ರ ಕೋರಿಕೆಗಳ ಜೊತೆಗೆ ಪತ್ರಗಳನ್ನು ದೇವರ ಹುಂಡಿಗೆ ಹಾಕಿದ್ದು ಸಿಕ್ಕಿದೆ, ಇ ಮಧ್ಯೆ ಈ ಡೆತ್ ನೋಟ್ ನಿಂದ ಹಲವರು ಬೇಸರ ವ್ಯಕ್ತಪಡಿಸಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ

Related Posts

ಸುಬ್ರಹ್ಮಣ್ಯಕ್ಕೆ ದಿನದ 3 ಹೊತ್ತು ರೈಲು ಸೇವೆ| ಮಂಗಳೂರು – ಪುತ್ತೂರು ರೈಲು ಓಡಾಟ ವಿಸ್ತರಣೆ: ಬದಲಾದ ಸಮಯ ಹೀಗಿದೆ

ಮಂಗಳೂರು-ಕಬಕ ಪ್ಯಾಸೆಂಜ‌ರ್ ರೈಲು ಸೇವೆಯನ್ನು ಇದೀಗ ಸುಬ್ರಹ್ಮಣ್ಯಕ್ಕೆ ವಿಸ್ತರಿಸಿ ಕೇಂದ್ರ