Gl harusha
ದೇಶಸ್ಥಳೀಯ

ಜನಸಾಮಾನ್ಯರಿಗೆ ರಾಜಭವನದ ಸಿಸಿಟಿವಿ ದೃಶ್ಯಾವಳಿ ತೋರಿಸಿದ ರಾಜ್ಯಪಾಲರು!

ಈ ಸುದ್ದಿಯನ್ನು ಶೇರ್ ಮಾಡಿ

ರಾಜಭವನದ ಮಹಿಳಾ ಉದ್ಯೋಗಿಯೊಬ್ಬರು ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿರುವ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ ವಿ ಆನಂದ ಬೋಸ್ ಅವರು ಸುಮಾರು 100 ಜನರಿಗೆ ಮೇ 2ರ ಸಿಸಿಟಿವಿ ದೃಶ್ಯಾವಳಿಗಳನ್ನು ತೋರಿಸಿದ್ದಾರೆ.

srk ladders
Pashupathi

ರಾಜಭವನದ ನೆಲ ಮಹಡಿಯಲ್ಲಿರುವ ಸಭಾಂಗಣದಲ್ಲಿ ಮೇ 2 ರ ಸಂಜೆ 5. 30 ರಿಂದ ಮುಖ್ಯಧ್ವಾರದಲ್ಲಿರುವ ಎರಡು ಸಿಸಿಟಿವಿ ಕ್ಯಾಮೆರಾಗಳ ದೃಶ್ಯಗಳನ್ನು ಜನರಿಗೆ ತೋರಿಸಲಾಗುತ್ತಿದೆ ಮತ್ತು ಸ್ಕ್ರೀನಿಂಗ್ ನಡೆಯುತ್ತಿದೆ.

ರಾಜಭವನದ ಗುತ್ತಿಗೆ ಮಹಿಳಾ ಉದ್ಯೋಗಿಯೊಬ್ಬರು ಶುಕ್ರವಾರ ಕೋಲ್ಕತ್ತಾ ಪೊಲೀಸರಿಗೆ ಲಿಖಿತ ದೂರು ಸಲ್ಲಿಸಿದ್ದು, ರಾಜ್ಯಪಾಲರ ಭವನದಲ್ಲಿ ಬೋಸ್ ತನಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.

“ರಾಜಕಾರಣಿ” ಮಮತಾ ಬ್ಯಾನರ್ಜಿ ಮತ್ತು ಆಕೆಯ ಪೊಲೀಸರನ್ನು ಹೊರತುಪಡಿಸಿ ಸಾಮಾನ್ಯ ಜನರಿಗೆ ಸಿಸಿಟಿವಿ ದೃಶ್ಯಾವಳಿಗಳನ್ನು ತೋರಿಸುವುದಾಗಿ ಬೋಸ್ ಬುಧವಾರ ಹೇಳಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

Related Posts