ಸ್ಥಳೀಯ

ನೆಹರುನಗರ ರೈಲ್ವೇ ಮೇಲ್ಸೆತುವೆ ಸಂಚಾರಕ್ಕೆ ಮುಕ್ತ!! ಹೀಗೆ ನಡೆಯಿತು ಉದ್ಘಾಟನೆ!!

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ನೆಹರುನಗರ ವಿವೇಕಾನಂದ ಕಾಲೇಜು ಮಂಗಳೂರು ರಸ್ತೆಯಲ್ಲಿರುವ ರೈಲ್ವೇ ಮೇಲ್ಸೆತುವೆ ಸಂಚಾರಕ್ಕೆ ತೆರೆದುಕೊಂಡಿದೆ.

SRK Ladders

ಹಲವು ವರ್ಷಗಳ ಬೇಡಿಕೆಯಾಗಿದ್ದ ರೈಲ್ವೇ ಮೇಲ್ಸೆತುವೆಯ ಕಾಮಗಾರಿ ಪೂರ್ಣಗೊಂಡಿದೆ. ಇದೀಗ ಪಾದಚಾರಿಗಳು, ವಾಹನಗಳು ಸಂಚರಿಸತೊಡಗಿವೆ.

ಅಗಲ ಕಿರಿದಾಗಿದ್ದ ಹಿಂದಿನ ಸೇತುವೆಯನ್ನು ಕೆಡವಿ, ಹೊಸ ಸೇತುವೆ ನಿರ್ಮಿಸಬೇಕೆಂಬ ಬೇಡಿಕೆ ಇದೀಗ ಸಾಕಾರಗೊಂಡಿದೆ. ಸ್ಥಳೀಯರು ಜೊತೆಯಾಗಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ, ಸಮಾರಂಭ ಮಾಡದೇ ರೈಲ್ವೇ ಮೇಲ್ಸೆತುವೆ ಉದ್ಘಾಟನೆಗೊಂಡಿತು.


ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 2