ಸ್ಥಳೀಯ

ಡಾ. ಯದುರಾಜ್, ಡಾ. ಜೈನಾಬ ಸುನು ಆಲಿ, ಡಾ. ಅಜಯ್ ಅವರಿಗೆ ಸನ್ಮಾನ | ವಿಶೇಷ ಚೇತನರ ವಿವಿದೋದ್ದೇಶ ಪುನರ್ ವಸತಿ ಕಾರ್ಯಕರ್ತರಿಂದ ಗೌರವ

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು ಹಾಗೂ ಕಡಬ ತಾಲೂಕು ವಿಕಲ ಚೇತನರ ಇಲಾಖೆಯಡಿ ಕರ್ತವ್ಯ ನಿರ್ವಹಿಸುತ್ತಿರುವ ವಿವಿದೋದ್ದೇಶ ಹಾಗೂ ಗ್ರಾಮೀಣ ಪುನರ್ ವಸತಿ ಕಾರ್ಯಕರ್ತರ /ನಗರ ಪುನರ್ವಸತಿ ಕಾರ್ಯಕರ್ತರ ಪ್ರಗತಿ ಪರಿಶೀಲನೆ ಸಭೆ ಮಾ. 5ರಂದು ಪುತ್ತೂರು ತಾಪಂ ಮಿನಿ ಸಭಾಂಗಣದಲ್ಲಿ ಜರಗಿತು.

Shani-pooja

ಪುತ್ತೂರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಹಾಗೂ ವಿಕಲಚೇತನರ ನೋಡೆಲ್ ಅಧಿಕಾರಿ ಮಂಗಳ ಕಾಳೆ ಅಧ್ಯಕ್ಷತೆ ವಹಿಸಿದ್ದರು.

ಪುತ್ತೂರು ತಾಲ್ಲೂಕು ಪಂಚಾಯತ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಕಲಚೇತನರ ಸೇವಾ ಕೇಂದ್ರ ಕಚೇರಿಯು 15 ವರ್ಷದ ಸವಿ ನೆನಪಿನ ಪ್ರಯುಕ್ತ ಪುತ್ತೂರು ಸರಕಾರಿ ಆಸ್ಪತ್ರೆಯ ಆಡಳಿತ ವ್ಯೆದ್ಯಾಧಿಕಾರಿ ಡಾ. ಯದುರಾಜ್ ಡಿ.ಕೆ ಹಾಗೂ ಕಿವಿ ಮೂಗು ಗಂಟಲು ತಜ್ಞೆ ಡಾ. ಜೈನಾಬ ಸುನು ಆಲಿ, ಪುತ್ತೂರು ಸರಕಾರಿ ಆಸ್ಪತ್ರೆಯ ಎಲುಬು ಕೀಲು ತಜ್ಞ ಡಾ. ಅಜಯ್ ಎಂ. ಬಿ ಅವರನ್ನು ಸನ್ಮಾನಿಸಲಾಯಿತು. ಪುತ್ತೂರು ಹಾಗೂ ಕಡಬ ತಾಲ್ಲೂಕು ವಿಶಿಷ್ಟ ಗುರುತಿನ ಚೀಟಿ( ಯು. ಡಿ. ಐಡಿ )ಕಾರ್ಡ್ ಹಾಗೂ ಪುತ್ತೂರು ತಾಲ್ಲೂಕು ಆಸ್ಪತ್ರೆ ಯಲ್ಲಿ ನಡೆಯುವ 2ನೇ ಶುಕ್ರವಾರ, 4ನೇ ಶುಕ್ರವಾರ, ಹಾಗೂ 2ನೇ ಮಂಗಳವಾರ ನಡೆಯುವ ಬೌದ್ಧಿಕ ಹಾಗೂ ಮಾನಸಿಕ ವಿಶೇಷ ಚೇತನರ ಪ್ರಮಾಣ ಪತ್ರ ಶಿಬಿರವನ್ನು ಉತ್ತಮವಾಗಿ ನಿರ್ವಹಿಸಿದ ಹಿನ್ನೆಲೆಯಲ್ಲಿ ಪುತ್ತೂರು ವಿಕಲ ಚೇತನರ ಸೇವಾ ಕೇಂದ್ರ ಕಚೇರಿ ಹಾಗೂ ಪುತ್ತೂರು ಹಾಗೂ ಕಡಬ ವಿಶೇಷ ಚೇತನರ ವಿವಿದೋದ್ದೇಶ ಪುನರ್ ವಸತಿ ಕಾರ್ಯ ಕರ್ತರ ಎಲ್ಲಾ ಗ್ರಾಮೀಣ ಹಾಗೂ ನಗರ ಪುನರ್ ವಸತಿ ಕಾರ್ಯ ಕರ್ತರ ಪರವಾಗಿ ಸ್ಮರಣಿಕೆ ನೀಡಿ ಗೌರವ ಅಭಿನಂದನೆ ಕಾರ್ಯಕ್ರಮ ಮಾಡಲಾಯಿತು.

ಈ ಸಂದರ್ಭದಲ್ಲಿ ಪುತ್ತೂರು ಕೇತ್ರ ಶಿಕ್ಷಣಾಧಿಕಾರಿ ವಿಷ್ಣು ಪ್ರಸಾದ್, ಪುತ್ತೂರು ತಾಲ್ಲೂಕು ಪಂಚಾಯತ್ ವ್ಯವಸ್ಥಾಪಕಿ ತುಳಸಿ, ಪುತ್ತೂರು ತಾಲ್ಲೂಕು ಪಂಚಾಯತ್ ವಿಶೇಷ ಚೇತನರ ವಿವಿದೋದ್ದೇಶ ಪುನರ್ವಸತಿ ಕಾರ್ಯಕರ್ತ ನವೀನ್ ಕುಮಾರ್ ಉಪಸ್ಥಿತರಿದ್ದರು.

ಪುತ್ತೂರು ಹಾಗೂ ಕಡಬ ತಾಲ್ಲೂಕು ಎಲ್ಲಾ ಗ್ರಾಮೀಣ ಹಾಗೂ ನಗರ ಪುನರ್ವಸತಿ ಕಾರ್ಯಕರ್ತರು ಹಾಜರಾಗಿದ್ದರು.

ಪುತ್ತೂರು ತಾಲ್ಲೂಕು ವಿಕಲ ಚೇತನರ ವಿಶೇಷ ಚೇತನರ ವಿವಿದೋದ್ದೇಶ ಪುನರ್ ವಸತಿ ಕಾರ್ಯ ಕರ್ತ ನವೀನ್ ಕುಮಾರ್ ಸ್ವಾಗತಿಸಿದ್ದರು. ಪುತ್ತೂರು ತಾಲ್ಲೂಕು 34ನೆಕ್ಕಿಲಾಡಿ ಗ್ರಾಮ ಪಂಚಾಯತ್ ಗ್ರಾಮೀಣ ಪುನರ್ ವಸತಿ ಕಾರ್ಯಕರ್ತ ಸೇಸಪ್ಪ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

1 of 122