ಪುತ್ತೂರು: ಆರ್ಯಾಪು ಗ್ರಾಮ ಪಂಚಾಯತ್ ಅಧ್ಯಕ್ಷರಾಗಿದ್ದ ಗೀತಾ, ಸದಸ್ಯರಾಗಿದ್ದ ಯತೀಶ್ ದೇವ ಹಾಗೂ ಹರೀಶ್ ನಾಯಕ್ ಬಳಕ್ಕ ಅವರಿಗೆ ಬಳಕ್ಕ ಮರಿಕೆಯ ಶ್ರೀ ಭ್ರಾಮರಿ ಗೃಹಪ್ರವೇಶದ ಸಂದರ್ಭ ಸನ್ಮಾನಿಸಿ, ಗೌರವಿಸಲಾಯಿತು.
ತಮ್ಮ ಅಧಿಕಾರಾವಧಿಯಲ್ಲಿ ಉತ್ತಮ ಕಾರ್ಯ ನಿರ್ವಹಿಸಿ, ಜನಮನ್ನಣೆ ಗಳಿಸಿರುವ ಹಿನ್ನೆಲೆಯಲ್ಲಿ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಮಾಜಿ ಶಾಸಕ ಸಂಜೀವ ಮಠಂದೂರು, ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ಗ್ರಾಮಾಂತರ ಬಿಜೆಪಿ ಮಂಡಲ ಅದ್ಯಕ್ಷ ದಯಾನಂದ ಉಜಿರೆಮಾರು, ಬಿಜೆಪಿ ಮುಖಂಡರಾದ ಸಾಜ ರಾಧಾಕೃಷ್ಣ ಆಳ್ವ, ಬೂಡಿಯಾರ್ ರಾಧಾಕೃಷ್ಣ ರೈ, ಹರೀಶ್ ಬಿಜತ್ರೆ, ಪ್ರಮುಖರಾದ ಜಯಂತ ಶೆಟ್ಟಿ ಕಂಬಳತ್ತಡ್ಡ, ವಿಜಯ ಬಿ.ಎಸ್., ಗಣೇಶ್ ರೈ ಮೂಲೆ, ಆರ್ಯಾಪು ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸದಾನಂದ ಶೆಟ್ಟಿ ಕೂರೇಲು, ಸದಸ್ಯ ಪ್ರಜ್ವಲ್ ರೈ ತೊಟ್ಲ, ಆರ್ಯಾಪು ಗ್ರಾಪಂ ಪಿಡಿಓ ನಾಗೇಶ್, ಬಿಜೆಪಿ 114ನೇ ಬೂತ್ ಅಧ್ಯಕ್ಷ ಶಶಿಧರ್ ಗೌಡ ಮರಿಕೆ, ಕಾರ್ಯದರ್ಶಿ ರವಿಕಿರಣ್ ಭಟ್ ಬಲ್ಲೇರಿ ಮೊದಲಾದವರು ಉಪಸ್ಥಿತರಿದ್ದರು.
ಮನೆಯವರಾದ ಶೇಷಪ್ಪ ಕುಲಾಲ್, ಕಮಲಾ ಶೇಷಪ್ಪ ಕುಲಾಲ್, ರಾಮಚಂದ್ರ ಕುಲಾಲ್ ಬಳಕ್ಕ ಅತಿಥಿಗಳನ್ನು ಸ್ವಾಗತಿಸಿದರು.





















