ಪುತ್ತೂರು: ಪ್ರಧಾನಿ ನರೇಂದ್ರ ಮೋದಿ ಅವರ ಸಹೋದರ , ಭಾರತೀಯ ತೈಲಿಕ್ ಸಾಹು ರಾಥೋಡ್ ಮಹಾಸಭಾ ಮುಖ್ಯ ಸಲಹೆಗಾರ ಪ್ರಹ್ಲಾದ್ ದಾಮೋದರ್ ದಾಸ್ ಮೋದಿ ಇಂದು ಪುತ್ತೂರಿಗೆ ಭೇಟಿ ನೀಡಿದ್ದಾರೆ. ಪುತ್ತೂರಿನ ಲಕ್ಷ್ಮೀ ದೇವಿ ಬೆಟ್ಟದಲ್ಲಿ ಮಹಾಲಕ್ಷ್ಮೀ ದೇವಿ ಅಮ್ಮನವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ನಂತರ ಪುತ್ತೂರಿನ ಕೋಟೆಚಾ ಹಾಲ್ ನಲ್ಲಿ ನಡೆದ ಜಿಲ್ಲಾ ಮಟ್ಟದ ಗಾಣಿಗ ಸಂಗಮ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಗಾಣಿಗ ಸಮಾಜ ಗೌರವಯುತ ಸಮಾಜ.ರಾಮಾಯಣ, ಸ್ವಾತಂತ್ರ್ಯ ಹೋರಾಟದಲ್ಲೂ ಗಾಣಿಗ ಸಮಾಜದ ಪಾತ್ರವಿದೆ. ಪ್ರದಾನಿ ಮೋದಿ ಅವರು ಗಾಣಿಗ ಸಮಾಜದ ಹೆಸರನ್ನು ಇಂದು ವಿಶ್ವದಾದ್ಯಂತ ಪಸರಿಸಿದ್ದಾರೆ.ಈ ತಾಕತ್ತು ಗಾಣಿಗ ಸಮಾಜಕ್ಕೆ ಸಿಕ್ಕಿದ್ದು,ಗಾಣಿಗ ಸಮಾಜದ ಪುತ್ರನಿಂದ ಇದು ಸಾಧ್ಯವಾಗಿದೆ.
ಇಂದು ಗಾಣಿಗ ಸಮಾಜದ ಮಗನಿಂದ ದೇಶದಲ್ಲಿ ಬದಲಾವಣೆ ಬಂದಿದೆ.ಇಂತಹ ಸಮಾಜ ಇಂದು ವಿಶ್ವದಾದ್ಯಂತ ಬೆಳಗುವಂತೆ ಮಾಡಿದ್ದಾರೆ. ದೇಶಾದ್ಯಂತ 14 ಕೋಟಿಯಷ್ಟು ಗಾಣಿಗ ಸಮಾಜದವರಿದ್ದಾರೆ.ಆದರೆ ಗಾಣಿಗರು ಸಂಘಟಿತರಾಗಿಲ್ಲ ಅನ್ನೋದು ಸತ್ಯ.ನಾವು ಮನಸ್ಸು ಮಾಡಿದರೆ ದೇಶಕ್ಕಾಗಿ ಏನು ಬೇಕಾದರೂ ಮಾಡಬಹುದು.ಗಾಣಿಗ ಸಮಾಜ ಸಂಘಟಿತರಾಗಿ ನಾವು ಏನೆಂದು ತೋರಿಸಿಕೊಡಬೇಕು.ಇಂದು ಗಾಣಿಗ ಸಮಾಜದ ಮಗನಿಂದ ದೇಶದಲ್ಲಿ ಬದಲಾವಣೆ ಬಂದಿದೆ ಎಂದರು.





















