ಸ್ಥಳೀಯ

ಕೈಚಳಕಕ್ಕೆ ಮುನ್ನ ಹೀಗೊಂದು ‘ಕಳ್ಳ ನಮನ’!

ಈ ಸುದ್ದಿಯನ್ನು ಶೇರ್ ಮಾಡಿ

ಜೈಪುರ: ದೇವಾಲಯದ ಹುಂಡಿ ಹಣ ಕದಿಯುವ ಮೊದಲು, ಕಳ್ಳ ದೇವರಿಗೆ ಕೈ ಮುಗಿದು ಪ್ರಾರ್ಥಿಸಿರುವ ವೀಡಿಯೋ ವೈರಲ್‌ ಆಗಿದೆ.

ರಾಜಸ್ಥಾನದ ಅಳ್ವಾರ್‌ನ ಆದರ್ಶ್‌ ನಗರದಲ್ಲಿ ಶನಿವಾರ ಬೆಳಗ್ಗೆ ಈ ಘಟನೆ ನಡೆದಿದ್ದು, ದೇವಾಲಯದ ಸಿಸಿಟಿವಿ ಕೆಮರಾದಲ್ಲಿ ಕಳ್ಳನ ಕೈಚಳಕ ಸೆರೆಯಾಗಿದೆ.

SRK Ladders

ದೇವರಿಗೆ ನಮಸ್ಕರಿಸಿದ ಬಳಿಕ ಕಳ್ಳನು ಹುಂಡಿಯಲ್ಲಿ ಸಂಗ್ರಹವಾಗಿದ್ದ ಹಣ ಹಾಗೂ ದೇವರ ಆಭರಣಗಳನ್ನು ಕದ್ದಿದ್ದಾನೆ. ಕದೀಮನನ್ನು ಗೋಪೇಶ್‌ ಶರ್ಮಾ(37) ಎಂದು ಗುರುತಿಸಲಾಗಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ, ದೇಗುಲಗಳಲ್ಲಿ ಕಳವು ಮಾಡುತ್ತಿದ್ದ ಬಗ್ಗೆ ಆತ ಒಪ್ಪಿಕೊಂಡಿದ್ದಾನೆ.


ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 2