ಸ್ಥಳೀಯ

ಬಿಜೆಪಿ ಶಾಲು ಹಾಕಿಸಿಕೊಂಡ ಅರುಣ್ ಕುಮಾರ್ ಪುತ್ತಿಲ! | ಇದು “ಮಾಧ್ಯಮಗಳ ಪ್ರಚಾರ” ಎಂದು ಹೇಳುವಂತಿಲ್ಲ!!

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಅರುಣ್ ಕುಮಾರ್ ಪುತ್ತಿಲ ಅವರು ಬಿಜೆಪಿ ಜತೆ ಮೈತ್ರಿ ಅಥವಾ ಸೇರ್ಪಡೆಗೊಂಡಿರುವುದು ದೃಢ. ಇದೀಗ ಮಂಗಳೂರಿನಲ್ಲಿ ಅರುಣ್ ಕುಮಾರ್ ಪುತ್ತಿಲ ಅವರಿಗೆ ಬಿಜೆಪಿ ಶಾಲು ಹಾಕಿಸಿರುವುದೇ ಇದಕ್ಕೆ ಸಾಕ್ಷಿ.

akshaya college

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ಬಳಿ ಪುತ್ತಿಲ ಮಾತುಕತೆಗೆ ತೆರಳಿದಾಗ ಜೊತೆಗೆ‌ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಪುತ್ತೂರು ಮಂಡಲ ಅಧ್ಯಕ್ಷರುಗಳಾದ ಪಿ.ಜಿ. ಜಗನ್ನಿವಾಸ್ ರಾವ್ ಹಾಗೂ ಸಾಜ ರಾಧಾಕೃಷ್ಣ ಆಳ್ವ, ಶಾಸಕ ಸುನೀಲ್ ಕುಮಾರ್ ಇದ್ದರು. ಜೊತೆಗೆ ನಿಂತು ಫೊಟೋ ಕ್ಲಿಕ್ಕಿಸಿಕೊಂಡಿದ್ದರೂ ಕೂಡ.

ಹೀಗಿದ್ದರೂ ಪುತ್ತೂರಿಗೆ ಆಗಮಿಸಿದ ಸತೀಶ್ ಕುಂಪಲ ಬಳಿ ಪುತ್ತಿಲ ಬಿಜೆಪಿ ಸೇರ್ಪಡೆ ಬಗ್ಗೆ ವಿಚಾರಿಸಿದಾಗ, “ಅದು ಮಾಧ್ಯಮಗಳ ಪ್ರಚಾರವಷ್ಟೇ” ಎಂದು ಹೇಳಿ ನುಣುಚಿಕೊಂಡಿದ್ದರು. ಆದರೆ ಇದೀಗ ಪುತ್ತಿಲ ಅವರ ಕೊರಳಲ್ಲಿ ಬಿಜೆಪಿ ಶಾಲು ರಾರಾಜಿಸುತ್ತಿದೆ. ಹಾಗಾಗಿ, ಈಗ ಇದು “ಮಾಧ್ಯಮಗಳ ಪ್ರಚಾರ” ಎಂದು ಹೇಳುವಂತಿಲ್ಲ. “ಫೊಟೋ ಎಡಿಟೆಡ್” ಎಂದು ಹೇಳಿದರೂ ಹೇಳಬಹುದು.

ಅದೇನಿದ್ದರೂ, ಪುತ್ತಿಲ ಅವರು ಬಿಜೆಪಿ ಸೇರ್ಪಡೆಗೊಂಡಿದ್ದಾರೆ ಎನ್ನುವುದು ಸ್ವತಃ ಬಿಜೆಪಿ ಮುಖಂಡರುಗಳಿಗೂ ತಿಳಿದ ವಿಚಾರ. ಇದೀಗ ಶಾಲು ಹಾಕಿಕೊಂಡು, ಪಕ್ಕದಲ್ಲಿ, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರೂ ಜತೆಗಿದ್ದಾರೆ. ಮಾತ್ರವಲ್ಲ, ಪರಸ್ಪರ ಕೈಕುಲುತ್ತಿರುವ ದೃಶ್ಯವೂ ಚಿತ್ರದಲ್ಲಿದೆ.

ಆದರೆ ಪುತ್ತಿಲ ಪರಿವಾರ ಬಿಜೆಪಿ ಜತೆ ಮೈತ್ರಿ ಅಥವಾ ವಿಲೀನ ಮಾಡಿಕೊಂಡಿದೆಯೇ ಎನ್ನುವುದು ಇನ್ನಷ್ಟೇ ತಿಳಿದುಬರಬೇಕಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

1 of 107