Gl
ಸ್ಥಳೀಯ

ಲೋಕಾಯುಕ್ತ ಬಲೆಗೆ ಬಿದ್ದಿರುವ ಗ್ರಾಮ ಪಂಚಾಯತ್ ಅಧ್ಯಕ್ಷೆಯ ವಜಾಕ್ಕೆ ಬಿಜೆಪಿ ಒತ್ತಾಯ!

GL

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಲೋಕಾಯುಕ್ತ ಬಲೆಗೆ ಬಿದ್ದಿರುವ ಪೆರುವಾಯಿ ಗ್ರಾಮ ಪಂಚಾಯತ್ ಅಧ್ಯಕ್ಷೆ ನಫೀಸಾ ಅವರು ಶಾಸಕ ಅಶೋಕ್ ಕುಮಾರ್ ರೈ ಅವರ ಆಪ್ತರಾಗಿದ್ದು, ತಕ್ಷಣ ಅವರನ್ನು ಹುದ್ದೆಯಿಂದ ಹಾಗೂ ಪಕ್ಷದಿಂದ ವಜಾ ಮಾಡಬೇಕು ಎಂದು ಬಿಜೆಪಿಯ ಪೆರುವಾಯಿ ಶಕ್ತಿ ಕೇಂದ್ರದ ಅಧ್ಯಕ್ಷ ಬಾಲಕೃಷ್ಣ ಪೂಜಾರಿ ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ಅಶೋಕ್ ಕುಮಾರ್ ರೈ ಅವರು ಸರಕಾರಿ ಅಧಿಕಾರಿಗಳ ಲಂಚ, ಭಷ್ಟಾಚಾರದ ವಿರುದ್ಧ ಕಚೇರಿಗೆ ಹೋಗಿ ಮಾಧ್ಯಮದ ಎದುರು ಅಧಿಕಾರಿಗಳನ್ನು ಗದರಿಸಿ ಲಂಚದ ಹಣವನ್ನು ವಾಪಸು ಕೊಡಿಸುತ್ತಾ ಇದ್ದುದನ್ನು ಮಾಧ್ಯಮದಲ್ಲಿ ನೋಡಿದ್ದೇವೆ. ಈಗ ಶಾಸಕರ ಕಾಲ ಬುಡದಲ್ಲಿ ಅವರ ಪಕ್ಷದವರೇ ಲಂಚ ಪಡೆದು ಲೋಕಾಯುಕ್ತ ಬಲೆಗೆ ಬಿದ್ದು ಎಲ್ಲಾ ಮಾಧ್ಯಮದಲ್ಲಿ ಬಂದಿರುತ್ತದೆ. ಆದರೆ ಶಾಸಕರು ಈ ಬಗ್ಗೆ ಮೌನ ವಹಿಸಿದ್ದು ಸಾರ್ವಜನಿಕರಲ್ಲಿ ಸಂಶಯಕ್ಕೆ ಎಡೆಮಾಡಿದೆ. ಆದ್ದರಿಂದ ಈ ಎಲ್ಲಾ ಆರೋಪಗಳು ಅಧ್ಯಕ್ಷರ ಮೇಲಿದ್ದು ಸ್ಥಳಿಯ ಶಾಸಕರು ಅವರದೇ ಆದ ಪಕ್ಷದವರು ಆಗಿದ್ದು ರಾಜ್ಯದಲ್ಲಿ ಕಾಂಗ್ರೆಸ್ ನೇತ್ರತ್ವದ ಸರಕಾರ ನಡೆಸುವುದುದರಿಂದ ನಪೀಸಾ ಅವರನ್ನು ಕಾಂಗ್ರೆಸ್ ಪಕ್ಷದಿಂದ ವಜಾಮಾಡಿ ಮತ್ತು ನಫೀಸಾ ಅವರು ಗ್ರಾಮ ಪಂಚಾಯತ್ ಅಧ್ಯಕ್ಷೆ ಸ್ನಾನಕ್ಕೆ ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಬೇಕಾಗಿ ಈ ಮೂಲಕ ಆಗ್ರಹಿಸುತ್ತೇವೆ ಎಂದು ಪೆರುವಾಯಿ ಶಕ್ತಿ ಕೇಂದ್ರ ಅಧ್ಯಕ್ಷ ಬಾಲಕೃಷ್ಣ ಪೂಜಾರಿ ಹೇಳಿದರು.
ಸೆ. 6ರಂದು ಪುತ್ತೂರು ವಿಧಾನ ಸಭಾ ಕ್ಷೇತ್ರದ ಬಂಟ್ವಾಳ ತಾಲೂಕು ಪೆರುವಾಯಿ ಗ್ರಾಮ ಪಂಚಾಯತ್ ಅಧ್ಯಕ್ಷ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೇಸ್ ಕಾರ್ಯದರ್ಶಿ ನಫೀಸಾ ಅವರು ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃಧಿ ಇಲಾಖೆ 2024-25 ನೇ ಸಾಲಿನ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಗಳ ಕಾರ್ಯಕ್ರಮದಡಿ ಕೃಷಿ ಜಮೀನಿಗೆ ಕೊಳವ ಬಾವಿ ಹಾಕಿಸಿ ಕೊಳ್ಳಲು ಪೆರುವಾಯಿ ಗ್ರಾಮದ ಮತ್ತು ಮಾಣಿಲ ಗ್ರಾಮದ ಫಲಾನುಭವಿಗಳಿಂದ 10,000 ರೂ. ದಿಂದ 20,000 ದ ವರೆಗೆ ಲಂಚದ ರೂಪದಲ್ಲಿ ಹಣದ ಬೇಡಿಕೆ ಇಟ್ಟಿದ್ದು ಪೆರುವಾಯಿ ಗ್ರಾಮದ ಕನರಡ, ರಾಮ ನಾಯ್ಕ ಎಂಬವರ ಜಮೀನಿಗೆ ಕೊಳವೆ ಬಾವಿ ಮಂಜೂರು ಮಾಡಿಸಲು 10,000 ಲಂಚವನ್ನು ಪೆರುವಾಯಿ ಗ್ರಾಮ ಪಂಚಾಯತ ಕಚೇರಿಯಲ್ಲಿ ಸ್ವೀಕರಿಸುತ್ತಿರುವಾಗ ಗ್ರಾಮ ಪಂಚಾಯತ್ ಅಧ್ಯಕ್ಷ ನಪೀಸಾ ಅವರು ರೆಡ್ ಹ್ಯಾಂಡ್ ಆಗಿ ಮಂಗಳೂರು ಲೋಕಾಯುಕ್ತ ಪೋಲಿಸರು ಬಂದಿಸಿ ನ್ಯಾಯಲಕ್ಕೆ ಹಾಜರು ಪಡಿಸಿರುತ್ತಾರೆ. ಪೆರುವಾಯಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಹಾಗೂ ದ.ಕ ಜಿಲ್ಲಾ ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿ ನಪೀಸಾ ಈ ಯೋಜನೆಯಲ್ಲಿ 30 ಕ್ಕೂ ಅಧಿಕಾ ಪಲಾನುಭವಿಗಳಲ್ಲಿ ಹಣದ ಬೇಡಿಕೆ ಇಟ್ಟಿದ್ದು ಹಣ ನೀಡದಿದ್ದಲ್ಲಿ ನಿಮಗೆ ಯೋಜನೆ ಅನುದಾನ ಸಿಗುವುದಿಲ್ಲ ಎಂದು ಹೇಳಿರುತ್ತಾರೆ. ನಪೀಸಾ ಕಾಂಗ್ರೆಸ್ ಪಕ್ಷದ ಪ್ರಾಭಾವಿ ವ್ಯಕ್ತಿಯಾಗಿದ್ದು, ಜಿಲ್ಲಾ ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿ ಹಾಗೂ ಪೆರುವಾಯಿ ಗ್ರಾಮ ಪಂಚಾಯತ್ ಅಧ್ಯಕ್ಷಾರಾಗಿದ್ದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರ ಆಪ್ತ ವಲಯದಲ್ಲಿ ಕಾಣಿಸಿಕೊಂಡಿರುತ್ತಾರೆ. ಸರಕಾರದ ಕೆಲವು ಅನುದಾನ ಮಂಜುರಾತಿಗೆ ಪುತ್ತೂರು ಶಾಸಕರ ಶಿಫಾರಸು ಪತ್ರ ಪಡೆದು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅಕ್ರಮ ಸಕ್ರಮ ಮಂಜೂರು ಮಾಡಿಸುವುದು 940 ಹಕ್ಕು ಪತ್ರ ಕೊಡಿಸುವುದು ಕೆಂಪುಕಲ್ಲಿನ ಗಣಿಗಾರಿಕೆ ಅಲ್ಲದೆ ಗ್ರಾಮ ಪಂಚಾಯತ್ ಕೆಲಸ ಕಾರ್ಯಗಳಲ್ಲಿ ಗುತ್ತಿಗೆದಾರರೊಂದಿಗೆ ಶಾಮೀಲಾಗಿ ಹಣ ಪಡೆಯುತ್ತರುವ ಆರೋಪ ಕೂಡ ಪೆರುವಾಯಿ ಗ್ರಾಮ ಪಂಚಾಯತ್ ಅಧ್ಯಕ್ಷರ ಮೇಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷೆ ಲಲಿತಾ ಆಚಾರ್ಯ, ಪುಣಚ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ರಾಜೇಶ್ ಬಾಳೆಕಲ್ಲು, ಬೂತ್ ಸಮಿತಿ ಅಧ್ಯಕ್ಷ ಗೋಪಾಲ ಎ. ಉಪಸ್ಥಿತರಿದ್ದರು.

core technologies

ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

1 of 119