Gl harusha
ಸ್ಥಳೀಯ

ಅಡಕೆ ಕಲಬೆರಕೆ ಕಾನೂನಿನಡಿ ಕೇಸು ದಾಖಲಿಸಲು ಸಹಾಯಕ ಆಯುಕ್ತರೊಂದಿಗೆ ಚರ್ಚೆ |ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ರೈತ ಸಂಘದ ಒಕ್ಕೂಟ ಹೇಳಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಹೊರದೇಶಗಳಿಂದ ಆಮದಾಗುವ ಟನ್ ಗಟ್ಟಲೆ ಅಡಕೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು. ಅದರಲ್ಲೂ ದಕ್ಷಿಣ ಕನ್ನಡಕ್ಕೆ ಹೊರ ರಾಜ್ಯಗಳಿಂದ ಬರುವ ಅಡಕೆಯನ್ನು ಇಲ್ಲಿಯ ಅಡಕೆಯೊಂದಿಗೆ ಬೆರಕೆ ಮಾಡುವುದರ ವಿರುದ್ಧ ಕಲಬೆರಕೆ ಕಾನೂನಿನಡಿ ಪ್ರಕರಣ ದಾಖಲಿಸಲು ಈಗಾಗಲೇ ಪುತ್ತೂರು ಸಹಾಯಕ ಆಯುಕ್ತರೊಂದಿಗೆ ಚರ್ಚೆ ನಡೆಸಲಿದ್ದೇವೆ ಎಂದು ರಾಜ್ಯ ರೈತ ಸಂಘ ಒಕ್ಕೂಟದ ಮುಖ್ಯಸ್ಥ ಸನ್ನಿ ಡಿಸೋಜಾ ತಿಳಿಸಿದ್ದಾರೆ.

srk ladders
Pashupathi

ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಈಗಾಗಲೇ ಈ ಕುರಿತು ಒಂದು ಸುತ್ತಿನ ಮಾತುಕತೆ ನಡೆಸಲಾಗಿದೆ. ನಿನ್ನೆ ಕಿದುವಿನಲ್ಲಿ ಸಚಿವೆ ಶೋಭಾ ಕರಂದ್ಲಾಜೆ ಹೇಳಿಕೆ ನೀಡಿದ್ದು, ಹೊರ ದೇಶಗಳಿಂದ ಅಡಕೆ ಆಮದು ಆಗುತ್ತಿಲ್ಲ. ಆದರೆ ಬರ್ಮಾ, ಶ್ರೀಲಂಕಾ, ಬಾಂಗ್ಲಾದೇಶ ಸೇರಿದಂತೆ ಐದು ದೇಶಗಳಿಂದ ಕಳಪೆ ಗುಣಮಟ್ಟ ಅಡಕೆ ಆಮದಾಗುತ್ತಿರುವ ಕುರಿತು ಮಾಹಿತಿಗಳು ತಿಳಿದು ಬಂದಿದೆ. ನಯಾ ಪೈಸೆ ಟ್ಯಾಕ್ಸ್ ಇಲ್ಲದೆ ಅಡಕೆ ಆಮದಾಗುತ್ತಿದ್ದು, ಇದು ಸುಳ್ಳು ಎಂದು ಸರಕಾರ ಜನರನ್ನು ದಾರಿತಪ್ಪಿಸಲು ಹೊರಟಿದೆ. ಈ ಕುರಿತು ನೈತಿಕ ಹೊಣೆಹೊತ್ತ ಮಂತ್ರಿಗಳು ರಾಜೀನಾಮೆ ನೀಡಬೇಕು ಎಂದು ಅವರು ಒತ್ತಾಯಿಸಿದರು.

ಒಕ್ಕೂಟದ ಇನ್ನೋರ್ವ ಮುಖ್ಯಸ್ಥ ರೂಪೇಶ್ ರೈ ಅಲಿಮಾರ್ ಮಾತನಾಡಿ, ಕೃಷಿಕರ ಜೀವನಾಡಿಯಾದ ದಕ್ಷಿಣ ಕನ್ನಡ ಜಿಲ್ಲೆಗೆ ಹೊರ ರಾಜ್ಯಗಳಿಂದ ಅಡಕೆ ಬಾರದಂತೆ ಆಡಳಿತ ವ್ಯವಸ್ಥೆ ನೋಡಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಹೊರರಾಜ್ಯಗಳಿಂದ ಅಡಕೆ ಬಂದದ್ದು ಗೊತ್ತಾದಲ್ಲಿ ನಾವೇ ಅಡಕೆ ಲಾರಿಗಳಿಗೆ ಬೆಂಕಿ ಹಾಕುವ ಕೆಲಸ ಮಾಡುತ್ತೇವೆ. ಇಲ್ಲವೇ ಯಾವ ಗೋಡೌನ್ಗೆ ಅಡಕೆ ಬರುತ್ತದೆಯೋ ಅದಕ್ಕೆ ಬೀಗ ಜಡಿಯುವ ಕೆಲಸ ಮಾಡುತ್ತೇವೆ. ಈ ಕುರಿತು ಜಿಲ್ಲಾಧಿಕಾರಿಗಳು, ಸಹಾಯಕ ಆಯುಕ್ತರು, ತಹಶೀಲ್ದಾರ್ ಈ ಕುರಿತು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟದ ಖಲೀಲ್, ಸುರೇಶ್ ಭಟ್ ಉಪಸ್ಥಿತರಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

Related Posts

ಸುಬ್ರಹ್ಮಣ್ಯಕ್ಕೆ ದಿನದ 3 ಹೊತ್ತು ರೈಲು ಸೇವೆ| ಮಂಗಳೂರು – ಪುತ್ತೂರು ರೈಲು ಓಡಾಟ ವಿಸ್ತರಣೆ: ಬದಲಾದ ಸಮಯ ಹೀಗಿದೆ

ಮಂಗಳೂರು-ಕಬಕ ಪ್ಯಾಸೆಂಜ‌ರ್ ರೈಲು ಸೇವೆಯನ್ನು ಇದೀಗ ಸುಬ್ರಹ್ಮಣ್ಯಕ್ಕೆ ವಿಸ್ತರಿಸಿ ಕೇಂದ್ರ