ಪುತ್ತೂರು: ಮತದಾರರ ಜಾಗೃತಿ, ವಿಶ್ವ ಮಹಿಳಾ ದಿನಾಚರಣೆ, ಸ್ಮಾರ್ಟ್ ಕ್ಲಾಸ್ ಉದ್ಘಾಟನೆ, ಸುಸ್ಥಿರ ಅಭಿವೃದ್ಧಿ ಸುಸ್ಥಿರ ಸ್ವಚ್ಛತೆ – ಸಂವಾದ ಸಂಕಲ್ಪ ಕಾರ್ಯಕ್ರಮ ಬೀರಿಗ ಅಂಗನವಾಡಿ ಕೇಂದ್ರದಲ್ಲಿ ಮಾ. 12ರಂದು ಜರಗಿತು.
ಬನ್ನೂರು ಗ್ರಾ.ಪಂ., ಸೆಲ್ಕೋ ಫೌಂಡೇಷನ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜನಶಿಕ್ಷಣ ಟ್ರಸ್ಟ್, ಗ್ರಾಮ ವಿಕಾಸ ಕೇಂದ್ರ, ಸ್ವ-ಸಹಾಯ ಸಂಘಗಳ ಒಕ್ಕೂಟ, ಬಾಲ ವಿಕಾಸ ಸಮಿತಿ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಿತು.
ಇದೇ ಸಂದರ್ಭ 1 ಲಕ್ಷ 10 ಸಾವಿರ ರೂ. ವೆಚ್ಚದ ಸ್ಮಾರ್ಟ್ ಕ್ಲಾಸ್ ಅನ್ನು ಉದ್ಘಾಟಿಸಲಾಯಿತು. ಸ್ಮಾರ್ಟ್ ಕ್ಲಾಸಿಗೆ ಸೆಲ್ಕೋ ಫೌಂಡೇಷನ್ 55 ಸಾವಿರ ರೂ. ದೇಣಿಗೆ ನೀಡಿದ್ದು, ಉಳಿದ ಮೊತ್ತವನ್ನು ಪುತ್ತೂರು ಶಾಸಕರು, ಮಕ್ಕಳ ಪೋಷಕರು, ಹಿರಿಯ ವಿದ್ಯಾರ್ಥಿಗಳು ಸ್ನೇಹ ಸಿಲ್ಕ್ಸ್ ಮಾಲಕ ಸತೀಶ್ ಪುತ್ತೂರು, ಪ್ರವೀಣ್ ನಾಯಕ್ ಕೆಮ್ಮಾಯಿ, ಈಶ್ವರ ಭಟ್ ಪಂಜಿಗುಡ್ಡೆ ಅವರು ದೇಣಿಗೆಯಾಗಿ ನೀಡಿದರು.
ಬಾಲ ವಿಕಾಸ ಸಮಿತಿ ಅಧ್ಯಕ್ಷೆ ಸ್ವಾತಿಗಣೇಶ್ ಸ್ವಾಗತಿಸಿ, ಅಂಗನವಾಡಿ ಕಾರ್ಯಕರ್ತೆ ಅರುಣಾ ಡಿ. ಬೀರಿಗ ಕಾರ್ಯಕ್ರಮ ನಿರೂಪಿಸಿದರು. ಸಂಧ್ಯಾ ಸಹಕರಿಸಿದರು.