ಪುತ್ತೂರು: ಹಂಟ್ಯಾರ್ ಶಾಲಾ ಬಳಿ ಬೃಹತ್ ಮರವೊಂದು ರಸ್ತೆಗಡ್ಡವಾಗಿ ಬಿದ್ದಿದ್ದು ಹೆದ್ದಾರಿ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿದೆ.
ಮರ ರಸ್ತೆಗಡ್ಡವಾಗಿ ಬಿದ್ದಿದ್ದರಿಂದ ಎರಡೂ ಬದಿಯೂ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಸಂಪ್ಯದಿಂದಲೇ ವಾಹನಗಳು ಸರತಿ ಸಾಲಿನಲ್ಲಿ ತೆವಳುತ್ತಾ ಚಲಿಸುತ್ತಿದ್ದವು.
ಜೆಸಿಬಿ ಮೂಲಕ ಮರವನ್ನು ತೆರವು ಮಾಡಲಾಗುತ್ತಿದೆ.
ವಾಹನಗಳು ಒಂದು ಬದಿಯಿಂದಷ್ಟೇ ತೆರಳಲು ಅನುವು ಮಾಡಿಕೊಡಲಾಗಿದೆ.