ಸ್ಥಳೀಯ

ಎಸ್ ಪಿ ವೈ ಎಸ್ ಎಸ್ ಉಪ್ಪಿನಂಗಡಿ ನಗರದ ವತಿಯಿಂದ 4 ಕಡೆ ಅಂತರಾಷ್ಟ್ರೀಯ ಯೋಗ ದಿನಾಚರಣೆ

ಒಂದು ಭೂಮಿ ಒಂದು ಆರೋಗ್ಯಕ್ಕಾಗಿ ಯೋಗ ಎಂಬ ಘೋಷ ವಾಕ್ಯದೊಂದಿಗೆ spyss ಉಪ್ಪಿನಂಗಡಿ ನಗರದ ಸಹಸ್ರಲಿಂಗೇಶ್ವರ ಶಾಖೆ ಉಪ್ಪಿನಂಗಡಿ ಮತ್ತು ಗಾಣಿಗ ಸಮುದಾಯ ಭವನ ಶಾಖೆಯ ವತಿಯಿಂದ ಗುರುವಾಯನಕೆರೆ ನಮ್ಮ ಮನೆ ಹವ್ಯಕ ಸಭಾಭವನದಲ್ಲಿ ವಿಶ್ವ ಯೋಗ ದಿನವನ್ನು ಆಚರಿಸಲಾಯಿತು.

ಈ ಸುದ್ದಿಯನ್ನು ಶೇರ್ ಮಾಡಿ

ಉಪ್ಪಿನಂಗಡಿ: ಒಂದು ಭೂಮಿ ಒಂದು ಆರೋಗ್ಯಕ್ಕಾಗಿ ಯೋಗ ಎಂಬ ಘೋಷ ವಾಕ್ಯದೊಂದಿಗೆ spyss ಉಪ್ಪಿನಂಗಡಿ ನಗರದ ಸಹಸ್ರಲಿಂಗೇಶ್ವರ ಶಾಖೆ ಉಪ್ಪಿನಂಗಡಿ ಮತ್ತು ಗಾಣಿಗ ಸಮುದಾಯ ಭವನ ಶಾಖೆಯ ವತಿಯಿಂದ ಗುರುವಾಯನಕೆರೆ ನಮ್ಮ ಮನೆ ಹವ್ಯಕ ಸಭಾಭವನದಲ್ಲಿ ವಿಶ್ವ ಯೋಗ ದಿನವನ್ನು ಆಚರಿಸಲಾಯಿತು.

akshaya college

ನಮ್ಮ ಮನೆ ಶಾಖೆ ಮತ್ತು ಪಾಂಡುರಂಗ ಶಾಖೆಯ ಯೋಗ ಬಂಧುಗಳಿಂದ, ಆಲಂಕಾರು ಶ್ರೀ ಭಾರತಿ ಶಾಲೆಯಲ್ಲಿ ಆಲಂಕಾರು ಭಾರತೀ ಶಾಖೆ ಮತ್ತು ಕೊಯಿಲ ಸದಾಶಿವ ಮಹಾಗಣಪತಿ ಶಾಖೆಯ ಯೋಗ ಬಂಧುಗಳು, ಮತ್ತು ನೆಲ್ಯಾಡಿ ಶಬರೀಶ ಕಲಾಮಂದಿರ ಅಯ್ಯಪ್ಪ ಬೆಟ್ಟ, ಇಲ್ಲಿ ಶಬರೀಶ ಶಾಖೆ ಯೋಗ ಬಂದುಗಳು ಹೀಗೆ ನಾಲ್ಕು ಕಡೆಗಳಲ್ಲಿ ಸಮಿತಿಯ ನಿತ್ಯಾಭ್ಯಾಸದ ಜೊತೆಗೆ ಆಯುಷ್ ಇಲಾಖೆಯ ಪಠ್ಯಕ್ರಮದಂತೆ ಆಸನಾಭ್ಯಾಸವನ್ನು ಮಾಡಲಾಯಿತು.

ಗುರುವಾಯನಕೆರೆ ನಮ್ಮ ಮನೆ ಶಾಖೆಯಲ್ಲಿ ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜ ಅವರು ದೀಪ ಪ್ರಜ್ವಲನೆಗೈದು ಉದ್ಘಾಟಿಸಿದರು. ಯೋಗ ದಿನಾಚರಣೆಯ ಮಹತ್ವಗಳನ್ನು ಸಂಕ್ಷಿಪ್ತವಾಗಿ ಪ್ರಸ್ತಾಪಿಸಿದರು.

ಅಲಂಕಾರು ಶ್ರೀ ಭಾರತೀ ಶಾಖೆಯಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಅವರು ದೀಪ ಪ್ರಜ್ವಲನೆಗೈದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಎಲ್ಲಾ ಶಾಖೆಗಳಲ್ಲಿಯೂ 11ನೇ ವಿಶ್ವ ಯೋಗ ದಿನಾಚರಣೆಯ ಕುರಿತಾಗಿ ಯೋಗ ಬಂಧುಗಳಿಂದ ಬೌದ್ಧಿಕ್ ನೀಡಲಾಯಿತು. ಉಪ್ಪಿನಂಗಡಿ ನಗರದ ನಾಲ್ಕು ಕಡೆಗಳಲ್ಲಿ ನಡೆದ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ಸಮಾಪನಗೊಂಡಿತು.

ಉಪ್ಪಿನಂಗಡಿ ನಗರದ ಶಿಕ್ಷಕರುಗಳಿಂದ ಸಾರ್ವಜನಿಕ ಸ್ಥಳಗಳಲ್ಲಿ ಶಾಲೆಗಳಲ್ಲಿ, ಕ್ಯಾಪ್ಕೋದಲ್ಲಿ ಪಂಚಾಯತುಗಳಲ್ಲಿ, ಸರಕಾರಿ ಆಸ್ಪತ್ರೆ, ಯುವಮೋರ್ಚಾ, ಮಾಂಡೋವಿ ಮೋಟಾರ್ಸ್ ಉಪ್ಪಿನಂಗಡಿ ಸೇರಿದಂತೆ ಹಲವು ಕಡೆಗಳಲ್ಲಿ ಆಯುಷ್ ಪಠ್ಯಕ್ರಮದಂತೆ ತರಗತಿಗಳನ್ನು ನಡೆಸಲಾಯಿತು.

ಉಪ್ಪಿನಂಗಡಿ ನಗರದ ನಾಲ್ಕು ಕಡೆಗಳಲ್ಲಿ ಸುಮಾರು 306 ಯೋಗ ಹಾಗೂ ಯೋಗೆತರ ಬಂಧುಗಳು ಭಾಗವಹಿಸಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

1 of 107