pashupathi
ಸ್ಥಳೀಯ

ಬೀರಮಲೆ ಬೆಟ್ಟ ಪ್ರಜ್ಞಾ ಆಶ್ರಮದಲ್ಲಿ ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನದ ಸಭೆ.

tv clinic
ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ರಿ. ಮೆಲ್ಕಾರು ಬಂಟ್ವಾಳ ಇದರ ಕೇಂದ್ರ ಸಮಿತಿಯ ಸಭೆಯು ಪುತ್ತೂರಿನ ಬೀರಮಲೆ ಬೆಟ್ಟದ ಪ್ರಜ್ಞಾ ಆಶ್ರಮದಲ್ಲಿ ಜರಗಿತು.ಪ್ರತಿಷ್ಠಾನದ ಅಧ್ಯಕ್ಷ ಕಯ್ಯೂರು ನಾರಾಯಣ ಭಟ್ ದೀಪ ಬೆಳಗಿಸಿ ಸಭೆಯನ್ನು ಉದ್ಘಾಟಿಸಿ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಈ ಸುದ್ದಿಯನ್ನು ಶೇರ್ ಮಾಡಿ

ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ರಿ. ಮೆಲ್ಕಾರು ಬಂಟ್ವಾಳ ಇದರ ಕೇಂದ್ರ ಸಮಿತಿಯ ಸಭೆಯು ಪುತ್ತೂರಿನ ಬೀರಮಲೆ ಬೆಟ್ಟದ ಪ್ರಜ್ಞಾ ಆಶ್ರಮದಲ್ಲಿ ಜರಗಿತು.ಪ್ರತಿಷ್ಠಾನದ ಅಧ್ಯಕ್ಷ ಕಯ್ಯೂರು ನಾರಾಯಣ ಭಟ್ ದೀಪ ಬೆಳಗಿಸಿ ಸಭೆಯನ್ನು ಉದ್ಘಾಟಿಸಿ ಸಭೆಯ ಅಧ್ಯಕ್ಷತೆ ವಹಿಸಿದ್ದರು.

akshaya college

ಪಡುಮಲೆಯಲ್ಲಿ ಆಗಸ್ಟ್ 17ರಂದು ಜರಗಲಿರುವ ಜಿಲ್ಲಾಮಟ್ಟದ ಕಾರ್ಯಾಗಾರದ ಬಗ್ಗೆ ವಿವಿಧ ಸಮಿತಿಗಳನ್ನು ರಚಿಸಲಾಯಿತು. ಪುತ್ತೂರು ಘಟಕದ ಅಧ್ಯಕ್ಷ ಚಂದ್ರಶೇಖರ್ ಆಳ್ವ ಪಡುಮಲೆ ಮತ್ತು ಪ್ರತಿಷ್ಠಾನದ ಖಜಾಂಜಿ ಕೃಷ್ಣಶರ್ಮ ಅನಾರು ಕಾರ್ಯಗಾರದ ಸ್ವರೂಪದ ಬಗ್ಗೆ ಮಾಹಿತಿ ನೀಡಿದರು.

ಶ್ರೀ ಎಡನೀರು ಮಠಾಧೀಶರ ಚಾತುರ್ಮಾಸ್ಯ ಕಾರ್ಯಕ್ರಮ, ಸಹಕಾರಿ ಸಂಘದ ಚುನಾವಣೆ, ಪ್ರತಿಷ್ಠಾನದ ಸದಸ್ಯರಿಗೆ ಕೇತ್ರ ಸಂದರ್ಶನದ ಬಗ್ಗೆ ಕಯ್ಯೂರು ನಾರಾಯಣ ಭಟ್ ಮಾಹಿತಿ ನೀಡಿದರು.

ಬೌದ್ಧಿಕ ವಿಕಲಾಂಗರ ವಸತಿಯುತ ಕೇಂದ್ರದ ಬಗ್ಗೆ ಪುತ್ತೂರು ಘಟಕದ ಶ್ರೀಮತಿ ಶಂಕರಿ ಶರ್ಮ ಮಾಹಿತಿ ನೀಡಿದರು.ಕೇಂದ್ರದ ನಿರ್ವಾಹಕರಾದ ಶ್ರೀ ಅಣ್ಣಪ್ಪ ಮತ್ತು ಶ್ರೀಮತಿ ಜ್ಯೋತಿ ದಂಪತಿ ಮಾತನಾಡಿ ಕೇಂದ್ರದಲ್ಲಿ 15 ಸದಸ್ಯರಿದ್ದು ದಾನಿಗಳ ಸಹಕಾರದಿಂದ ಕೇಂದ್ರವನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಪ್ರತಿಷ್ಠಾನದ ಜಿಲ್ಲಾ ಸಂಚಾಲಕ ಭಾಸ್ಕರ ಬಾರ್ಯ ಸ್ವಾಗತಿಸಿ ಕಾರ್ಯದರ್ಶಿ ದಿವಾಕರ ಆಚಾರ್ಯ ಗೇರುಕಟ್ಟೆ ಕಾರ್ಯಕ್ರಮ ನಿರೂಪಿಸಿದರು. ಚಂದ್ರಶೇಖರ ಆಳ್ವ ಪಡುಮಲೆ ವಂದಿಸಿದರು.

ಬಾಲಕೃಷ್ಣರಾವ್. ಎ, ಪದ್ಮನಾಭ ನಾಯಕ್,ಚಂಚಲಾಕ್ಷಿ.ಯನ್, ಭವಾನಿ ಶಂಕರ ಶೆಟ್ಟಿ ಪುತ್ತೂರು,ಗುಂಡ್ಯಡ್ಕ ಈಶ್ವರ ಭಟ್, ಕೆ. ರಾಮಕೃಷ್ಣ ನಾಯಕ್, ಪ್ರೇಮಲತಾ ರಾವ್ ಟಿ, ಮಹಾಬಲ ರೈ ವಳತಡ್ಕ, ಸೋಮನಾಥ ಬೇಕಲ್, ಚಂದ್ರಕಲಾ ಬೇಕಲ್ ಸಭೆಯಲ್ಲಿ ಭಾಗವಹಿಸಿದ್ದರು. ಪ್ರತಿಷ್ಠಾನದ ಪುತ್ತೂರು ಘಟಕದ ವತಿಯಿಂದ ಆಶ್ರಮ ನಿವಾಸಿಗಳಿಗೆ ಬೆಳಗಿನ ಉಪಹಾರ ಮತ್ತು ಮಧ್ಯಾಹ್ನದ ಭೋಜನವನ್ನು ವ್ಯವಸ್ಥೆ ಮಾಡಲಾಗಿತ್ತು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

1 of 116