tamanvi
ಕರಾವಳಿಸ್ಥಳೀಯ

ಇಹಲೋಕ ತ್ಯಜಿಸಿದ ಕಾರಿಂಜೇಶ್ವರ ದೇವಸ್ಥಾನದ ಬಸವ ‘ಶಂಕರ’

D_shiva_bhat

ಈ ಸುದ್ದಿಯನ್ನು ಶೇರ್ ಮಾಡಿ

ಬಂಟ್ವಾಳ: ಇತಿಹಾಸ ಪ್ರಸಿದ್ದ ಬಂಟ್ವಾಳ ತಾಲೂಕಿನ ಕಾವಳಮೂಡೂರು ಗ್ರಾಮದ ಕಾರಿಂಜ ಶ್ರೀ ಕಾರಿಂಜೇಶ್ವರ ದೇವಸ್ಥಾನದ ಬಸವ ‘ಶಂಕರ’ ಅನಾರೋಗ್ಯದಿಂದ ಕೆದ್ದಳಿಕೆಯ ಮನೆಯೊಂದರಲ್ಲಿ ಅಸುನೀಗಿದೆ.

ಬಸವ ಶಂಕರ ಕಳೆದ 14 ವರ್ಷಗಳಿಂದ ಕಾರಿಂಜ ದೇವಸ್ಥಾನದಲ್ಲಿ ಸೇವೆ ಸಲ್ಲಿಸುತ್ತಿತ್ತು. ಒಂದು ವರ್ಷ ಪ್ರಾಯದ ಬಸವನನ್ನು ದೇವರಿಗೆ ಹರಕೆ ರೂಪದಲ್ಲಿ ಒಪ್ಪಿಸಲಾಗಿತ್ತು. ಶಂಕರ ಎಂದು ನಾಮಕರಣ ಮಾಡಲಾಗಿತ್ತು.

ಕೆಲವು ದಿನಗಳ ಹಿಂದೆ ಶಂಕರನನ್ನು ಆರೈಕೆಗಾಗಿ ಕೆದ್ದಳಿಕೆಗೆ ಕೊಂಡೊಯ್ಯಲಾಗಿತ್ತು. ಶಿವರಾತ್ರಿಗೆ ಕೆಲವೇ ದಿನಗಳಿರುವಾಗ ಶಂಕರ ಮೃತಪಟ್ಟಿದ್ದು, ಅಂತಿಮ ಸಂಸ್ಕಾರ ಕೆದ್ದಳಿಕೆಯಲ್ಲಿ ನೆರವೇರಿಸಲಾಯಿತು.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಮನೆಗೆ ಬಿಡುವುದಾಗಿ ಬೈಕ್‌ನಲ್ಲಿ ಕರೆತಂದು ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ಆರೋಪ: ಪೋಕ್ಸೋ ಪ್ರಕರಣ ದಾಖಲು

ಮಂಗಳೂರು: ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅಪ್ರಾಪ್ತ ಬಾಲಕಿಯನ್ನು ಮನೆಗೆ ಬಿಡುವುದಾಗಿ…

1 of 180