Gl harusha
ಸ್ಥಳೀಯ

ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್’ನಲ್ಲಿ ‘ವರುಷದ ಹರುಷ’ ಶಾಪಿಂಗ್ ಹಬ್ಬ | ಗ್ರಾಹಕರಿಗೆ ಭರ್ಜರಿ ಕೊಡುಗೆಗಳು – ಸ್ಪೆಷಲ್ ಡಿಸ್ಕೌಂಟ್ಸ್!| ಜಿಲ್ಲೆಯಲ್ಲೇ ಅತ್ಯಧಿಕ, 25 ಸಾವಿರಕ್ಕೂ ಮಿಕ್ಕಿ ಚಿನ್ನ ಹಾಗೂ ವಜ್ರಾಭರಣಗಳ ಸಂಗ್ರಹ, ಅಭೂತಪೂರ್ವ ಸ್ಪಂದನೆ!!

ಜಿ.ಎಲ್‌. ಆಚಾರ್ಯ ಜ್ಯುವೆಲ್ಲರ್ಸ್‌, ತಮ್ಮ ವಾರ್ಷಿಕೋತ್ಸವದ ಸಂಭ್ರಮವನ್ನು 'ಜಿ.ಎಲ್. ಶಾಪಿಂಗ್ ಹಬ್ಬ ವರುಷದ ಹರುಷ' ಎಂಬ ವಿಶೇಷ ಆಚರಣೆಯೊಂದಿಗೆ ಗ್ರಾಹಕರೊಡನೆ ಹಂಚಿಕೊಳ್ಳುತ್ತಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು:  ಪ್ರತಿಷ್ಠಿತ ಚಿನ್ನಾಭರಣಗಳ ಮಳಿಗೆ ಜಿ.ಎಲ್‌. ಆಚಾರ್ಯ ಜ್ಯುವೆಲ್ಲರ್ಸ್‌, ತಮ್ಮ ವಾರ್ಷಿಕೋತ್ಸವದ ಸಂಭ್ರಮವನ್ನು ‘ಜಿ.ಎಲ್. ಶಾಪಿಂಗ್ ಹಬ್ಬ ವರುಷದ ಹರುಷ’ ಎಂಬ ವಿಶೇಷ ಆಚರಣೆಯೊಂದಿಗೆ ಗ್ರಾಹಕರೊಡನೆ ಹಂಚಿಕೊಳ್ಳುತ್ತಿದೆ.

srk ladders
Pashupathi
Muliya

ಪುತ್ತೂರು, ಮೂಡಬಿದ್ರೆ, ಸುಳ್ಯ, ಹಾಸನ ಮತ್ತು ಕುಶಾಲನಗರದಲ್ಲಿರುವ ಸಂಸ್ಥೆಯ ಎಲ್ಲಾ ಶಾಖೆಗಳಲ್ಲಿ ಏಪ್ರಿಲ್ 13 ರಂದು ಆರಂಭವಾದ ಈ ಮಹಾ ಶಾಪಿಂಗ್ ಹಬ್ಬಕ್ಕೆ ಗ್ರಾಹಕರಿಂದ ನಿರೀಕ್ಷೆಗೂ ಮೀರಿದ. ಅತ್ಯುತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ.

ಪ್ರತಿ ವರ್ಷದಂತೆ, ಈ ವರ್ಷವೂ ಜಿ.ಎಲ್‌. ಆಚಾರ್ಯ ಜ್ಯುವೆಲ್ಲರ್ಸ್ ತನ್ನ ವಾರ್ಷಿಕೋತ್ಸವವನ್ನು ಗ್ರಾಹಕರಿಗೆ ವಿಶೇಷ ಕೊಡುಗೆಗಳನ್ನು ನೀಡುವ ಮೂಲಕ ಸ್ಮರಣೀಯವಾಗಿಸಿದೆ. ಪುತ್ತೂರು, ಸುಳ್ಯ ಸೇರಿದಂತೆ ನೆರೆಹೊರೆಯ ತಾಲೂಕುಗಳಲ್ಲೂ ಜನರ ಮನೆಮಾತಾಗಿರುವ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್, ಈ ಬಾರಿ ಇನ್ನಷ್ಟು ಆಕರ್ಷಕ ಕೊಡುಗೆಗಳೊಂದಿಗೆ ‘ವರುಷದ ಹರುಷ’ವನ್ನು ಆಚರಿಸುತ್ತಿದೆ.

ಆಭರಣಗಳ ವೈವಿಧ್ಯಮಯ ಲೋಕ:

ಜಿಲ್ಲೆಯ ಅತಿದೊಡ್ಡ ಚಿನ್ನಾಭರಣ ಮಳಿಗೆಗಳಲ್ಲಿ ಒಂದೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಜಿ.ಎಲ್‌. ಆಚಾರ್ಯ ಜ್ಯುವೆಲ್ಲರ್ಸ್, ಸುಮಾರು 25,200 ಕ್ಕೂ ಅಧಿಕ ವಿಶಿಷ್ಟ ಶೈಲಿಯ ಚಿನ್ನ ಹಾಗೂ ವಜ್ರಾಭರಣಗಳ ಬೃಹತ್ ಸಂಗ್ರಹವನ್ನು ಹೊಂದಿದೆ. ಎಲ್ಲಾ ವಯೋಮಾನದವರ ಅಭಿರುಚಿಗೆ ತಕ್ಕಂತೆ, ಮಕ್ಕಳಿಂದ ಹಿಡಿದು ಪುರುಷರು ಮತ್ತು ಮಹಿಳೆಯರಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಿದ ಆಭರಣಗಳು ಇಲ್ಲಿ ಲಭ್ಯ. ಗ್ರಾಹಕರಿಗೆ ಆಹ್ಲಾದಕರ ವಾತಾವರಣದಲ್ಲಿ ತಮ್ಮ ನೆಚ್ಚಿನ ಆಭರಣಗಳನ್ನು ಆಯ್ಕೆ ಮಾಡಲು ವಿಪುಲ ಅವಕಾಶ ಕಲ್ಪಿಸಲಾಗಿದೆ.

ವಿಶೇಷ ವಿಭಾಗಗಳ ಆಕರ್ಷಣೆ:

ಪ್ರಾಚಿ: ಪುರಾತನ ಹಾಗೂ ಸಾಂಪ್ರದಾಯಿಕ ವಿನ್ಯಾಸಗಳನ್ನು ಇಷ್ಟಪಡುವವರಿಗಾಗಿ, ಮನಸೂರೆಗೊಳ್ಳುವ ಆಂಟಿಕ್ ಚಿನ್ನಾಭರಣಗಳ ಅಪೂರ್ವ ಸಂಗ್ರಹ.

ವಜ್ರ: ಸುಮಾರು 2,000 ಕ್ಕೂ ಹೆಚ್ಚು ವಿನ್ಯಾಸಗಳಲ್ಲಿ ಕಣ್ಮನ ಸೆಳೆಯುವ, ಹೊಳೆಯುವ ವಜ್ರಾಭರಣಗಳ ಅದ್ಭುತ ಶ್ರೇಣಿ.

ಪಾರ್ಥ: ಪುರುಷರಿಗಾಗಿಯೇ ಮೀಸಲಾದ ಈ ವಿಭಾಗದಲ್ಲಿ ಕರ್ಟಿಯರ್ ಕಡ, ಲೇಸರ್ ಕಟ್ಟಿಂಗ್ ಕಡ. ಕ್ಯೂಬನ್‌ ಚೈನ್ಸ್. ಇಂಡೋ-ಇಟಾಲಿಯನ್ ಚೈನ್ಸ್. ನವರತ್ನ ಉಂಗುರಗಳು, ಆಂಟಿಕ್ ಪದಕಗಳು, ವಾಚ್ ಚೈನ್ಸ್‌ ಸೇರಿದಂತೆ ಅತ್ಯಾಧುನಿಕ ವಿನ್ಯಾಸಗಳ ಸಂಗ್ರಹವಿದೆ.

ಭರ್ಜರಿ ರಿಯಾಯಿತಿ ಮತ್ತು ಕೊಡುಗೆಗಳು: ‘ವರುಷದ ಹರುಷ’ದ ವಿಶೇಷ ಸಂದರ್ಭದಲ್ಲಿ, ಗ್ರಾಹಕರಿಗೆ ಅತ್ಯಾಕರ್ಷಕ ಕೊಡುಗೆಗಳನ್ನು ಘೋಷಿಸಲಾಗಿದೆ:

ಚಿನ್ನಾಭರಣ ಖರೀದಿ: ಪ್ರತಿ ಗ್ರಾಂ ಚಿನ್ನಾಭರಣ ಖರೀದಿಯ ಮೇಲೆ ರೂ.200 ವರೆಗೆ ರಿಯಾಯಿತಿ.

ಖಚಿತ ಉಡುಗೊರೆ: ರೂ. 25,000 ಕ್ಕಿಂತ ಹೆಚ್ಚಿನ ಮೌಲ್ಯದ ಆಭರಣ ಖರೀದಿಗೆ ವಿಶೇಷ ಮತ್ತು ಆಕರ್ಷಕ ಉಡುಗೊರೆ ಖಚಿತವಾಗಿ ಲಭ್ಯ.

ಇತರ ಕೊಡುಗೆಗಳು: ವಜ್ರಾಭರಣ ಹಾಗೂ ಬೆಳ್ಳಿಯಆಭರಣಗಳ ಖರೀದಿಯ ಮೇಲೂ ಗಮನಾರ್ಹ ರಿಯಾಯಿತಿಗಳನ್ನು ನೀಡಲಾಗುತ್ತಿದೆ.

ವಿಶ್ವಾಸ, ಪರಿಶುದ್ಧತೆ, ಪರಂಪರೆ, ನವನವೀನ ವಿನ್ಯಾಸ ಮತ್ತು ಶ್ರೇಷ್ಠ ಗ್ರಾಹಕ ಸೇವೆಗೆ ಸದಾ ಬದ್ಧವಾಗಿರುವ ಜಿ.ಎಲ್‌. ಆಚಾರ್ಯ ಜ್ಯುವೆಲ್ಲರ್ಸ್, ಈ ಶಾಪಿಂಗ್ ಹಬ್ಬದ ಸದುಪಯೋಗವನ್ನು ಪಡೆದುಕೊಳ್ಳುವಂತೆ ತಮ್ಮೆಲ್ಲಾ ಗ್ರಾಹಕರನ್ನು ಆಹ್ವಾನಿಸಿದೆ. ಈ ಕೊಡುಗೆಗಳು ಸೀಮಿತ ಅವಧಿಗೆ ಮಾತ್ರ ಲಭ್ಯವಿದ್ದು. ಕೂಡಲೇ ತಮ್ಮ ಸಮೀಪದ ಶಾಖೆಗೆ ಭೇಟಿ ನೀಡಿ ವರುಷದ ಹರುಷ’ದ ಸಂಭ್ರಮದಲ್ಲಿ ಪಾಲ್ಗೊಳ್ಳುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

Related Posts

ಸುಬ್ರಹ್ಮಣ್ಯಕ್ಕೆ ದಿನದ 3 ಹೊತ್ತು ರೈಲು ಸೇವೆ| ಮಂಗಳೂರು – ಪುತ್ತೂರು ರೈಲು ಓಡಾಟ ವಿಸ್ತರಣೆ: ಬದಲಾದ ಸಮಯ ಹೀಗಿದೆ

ಮಂಗಳೂರು-ಕಬಕ ಪ್ಯಾಸೆಂಜ‌ರ್ ರೈಲು ಸೇವೆಯನ್ನು ಇದೀಗ ಸುಬ್ರಹ್ಮಣ್ಯಕ್ಕೆ ವಿಸ್ತರಿಸಿ ಕೇಂದ್ರ