ರಾಜ್ಯದಲ್ಲಿ ಅರ್ಹರಲ್ಲದವರ ಬಿಪಿಎಲ್ ಕಾರ್ಡ್ ಪರಿಷ್ಕರಣೆಗೆ ಮುಂದಾಗಿದ್ದು. ಬಿಪಿಎಲ್ ಕಾರ್ಡ್ ಬೆನ್ನಲ್ಲೇ ಕಾರ್ಮಿಕ ಕಾರ್ಡುಗಳ ಅಮಾನತು ಮಾಡಲಾಗುತ್ತಿದೆ.
ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ 38.42 ಲಕ್ಷ ಕಾರ್ಡ್ ಗೆ ನೋಂದಣಿ ಮಾಡಿಕೊಂಡಿದ್ದು. 2.46 ಲಕ್ಷ ಸಾವಿರ ಕಾರ್ಡ್ ಅಮಾನತು ಮಾಡಲಾಗಿದೆ. ಹಾವೇರಿಯಲ್ಲಿ 1.69 ಲಕ್ಷ ಕಾರ್ಡ್ ಗಳು ಕಾರ್ಮಿಕ ಕಾರ್ಡ್ ಗಳನ್ನು ಅಮಾನತು ಮಾಡಲಾಗಿದೆ.
ಈ ಕುರಿತು ಸಚಿವ ಸಂತೋಷ ಲಾಡ್ ಮಾತನಾಡಿದ್ದು, ರಾಜ್ಯದಲ್ಲಿ ಅತಿ ಹೆಚ್ಚು ಹಾವೇರಿಯಲ್ಲಿ ಸುಮಾರು 2ರಿಂದ 3 ಲಕ್ಷ ಕಾರ್ಡ್ ಮಾಡಿದ್ದಾರೆ. ಅಲ್ಲಿ ಪರಿಶೀಲಿಸಿದ ನಂತರ ಕಾರ್ಡ್‌ಗಳನ್ನು ರದ್ದು ಪಡಿಸಿದ್ದೇವೆ. ಅದೇ ರೀತಿ ಎಲ್ಲಾ ಜಿಲ್ಲೆಯಲ್ಲೂ ಇದೇ ರೀತಿ ಮಾಡಲಾಗುತ್ತಿದೆ. ನಮ್ಮ ಸರ್ಕಾರಕ್ಕೆ ಯಾರು ಆದಾಯವನ್ನು ಗಳಿಸಲು ಸಹಾಯ ಮಾಡಿದ್ದಾರೋ ಅವರಿಗೆ ಕಾರ್ಮಿಕ ಕಾರ್ಡ್ ಅನ್ನು ನೀಡುತ್ತೇವೆ ಎಂದು ಹೇಳಿದರು.
ಕಾರ್ಮಿಕರ ಕಾರ್ಡ್ ಪರಿಶೀಲನೆ ಯಾವುದೇ ಕಾರಣಕ್ಕೂ ಇಲ್ಲ. ಅಂಬೇಡ್ಕರ್ ಸೇವಾ ಕೇಂದ್ರ ಮಾಡಿದ್ದೇವೆ. ಯಾರು ಅರ್ಜಿ ಹಾಕುತ್ತಾರೋ ಅವರ ಮನೆಗೆ ಹೋಗುತ್ತೇವೆ. ನೇರ ಪರಿಶೀಲನೆ ಮಾಡಿ ಕಾರ್ಡ್ ವಿತರಿಸುತ್ತೇವೆ. ಸಮೀಕ್ಷೆ ಮಾಡಿ ಕಾರ್ಮಿಕ ಕಾರ್ಡ್ ಅಮಾನತು ಮಾಡಲಾಗುತ್ತದೆ. ರದ್ದಾದ ಕಾರ್ಡ್ ನಕಲಿ ಅಲ್ಲದಿದ್ದರೆ ಪುನಃ ನೀಡಲಾಗುತ್ತೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಸ್ಪಷ್ಟನೆ ನೀಡಿದ್ದಾರೆ.