ರಾಜ್ಯ ವಾರ್ತೆ

ಗರ್ಭಿಣಿಯನ್ನು ಕರೆದೊಯ್ಯುತ್ತಿದ್ದ ಆಂಬ್ಯುಲೆನ್ಸ್ ಸ್ಫೋಟ!!

ಅಂಬ್ಯುಲೆನ್ಸ್‌ನಲ್ಲಿ ಗರ್ಭಿಣಿ ಮತ್ತು ಅವರ ಕುಟುಂಬವನ್ನು ಎರಾಂಡೋಲ್  (ಮಹಾರಾಷ್ಟ್ರ) ಸರ್ಕಾರಿ ಆಸ್ಪತ್ರೆಯಿಂದ ಜಲ್ಲಾಂವ್‌ನ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ, ಅಂಬ್ಯುಲೆನ್ಸ್ ಚಾಲಕ ತನ್ನ ವಾಹನದ ಎಂಜಿನ್‌ನಿಂದ ಹೊಗೆ ಬರುತ್ತಿರುವುದನ್ನು ಕಂಡು ತಕ್ಷಣ ಕೆಳಗಿಳಿದು ಪ್ರಯಾಣಿಕರನ್ನು ಕೆಳಗಿಳಿಯುವಂತೆ ತಿಳಿಸಿದ್ದಾನೆ.

ಈ ಸುದ್ದಿಯನ್ನು ಶೇರ್ ಮಾಡಿ

ಅಂಬ್ಯುಲೆನ್ಸ್‌ನಲ್ಲಿ ಗರ್ಭಿಣಿ ಮತ್ತು ಅವರ ಕುಟುಂಬವನ್ನು ಎರಾಂಡೋಲ್  (ಮಹಾರಾಷ್ಟ್ರ)

ಸರ್ಕಾರಿ ಆಸ್ಪತ್ರೆಯಿಂದ ಜಲ್ಲಾಂವ್‌ನ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ, ಅಂಬ್ಯುಲೆನ್ಸ್ ಚಾಲಕ ತನ್ನ ವಾಹನದ ಎಂಜಿನ್‌ನಿಂದ ಹೊಗೆ ಬರುತ್ತಿರುವುದನ್ನು ಕಂಡು ತಕ್ಷಣ ಕೆಳಗಿಳಿದು ಪ್ರಯಾಣಿಕರನ್ನು ಕೆಳಗಿಳಿಯುವಂತೆ ತಿಳಿಸಿದ್ದಾನೆ.

SRK Ladders

ಬೆಂಕಿ ತಗುಲಿದ ಪರಿಣಾಮ ಕೆಲವೇ ನಿಮಿಷಗಳಲ್ಲಿ ಅಂಬ್ಯುಲೆನ್ಸ್ ಸ್ಫೋಟಗೊಂಡಿದ್ದು, ಅದರಲ್ಲಿದ್ದ ಗರ್ಭಿಣಿ ಮತ್ತು ಅವರ ಕುಟುಂಬ ಭಾರೀ ದುರಂತದಿಂದ ಪವಾಡ ಸದೃಶ್ಯ ರೀತಿಯಲ್ಲಿ ಪಾರಾಗಿದ್ದಾರೆ. ಹಾಗೇ ವಾಹನದಿಂದ ದೂರವಿರುವಂತೆ ಹತ್ತಿರದಲ್ಲಿದ್ದ ಜನರಿಗೆ ಎಚ್ಚರಿಸಿದ್ದಾನೆ.

ವಾಹನಕ್ಕೆ ಬೆಂಕಿ ಹೊತ್ತಿಕೊಂಡು ಕೆಲವೇ ನಿಮಿಷಗಳಲ್ಲಿ, ಅದು ಅಂಬ್ಯುಲೆನ್ಸ್‌ನ ಆಮ್ಲಜನಕ ಟ್ಯಾಂಕ್‌ಗೆ ಹರಡಿ ದೊಡ್ಡ ಸ್ಫೋಟಕ್ಕೆ ಕಾರಣವಾಯಿತು.ಅಂಬ್ಯುಲೆನ್ಸ್‌ನ ಚಾಲಕ ವಿವೇಕ್ ಗುಪ್ತಾ ಎನ್ನುವವರು ತನ್ನ ವಾಹನದಿಂದ ಹೊಗೆ ಬರುವುದನ್ನು ಕಂಡು ಹೊಗೆ ಬರಲು ಕಾರಣವೇನು ಎಂಬುದನ್ನು ಕಂಡುಹಿಡಿಯಲು ಸಾಧ್ಯವಾಗದ ಕಾರಣ ಹಿಂದಿನ ಬಾಗಿಲಿನ ಮೂಲಕ ಅಂಬ್ಯುಲೆನ್ಸ್‌ನಿಂದ ಹೊರಗೆ ಬಂದಿದ್ದಾರೆ.

ಸ್ಫೋಟದ ಪರಿಣಾಮದಿಂದಾಗಿ ಹತ್ತಿರದ ಮನೆಗಳ ಕಿಟಕಿಗಳು ಸಹ ಛಿದ್ರಗೊಂಡಿದ್ದು, ಅದೃಷ್ಟವಶಾತ್ ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ, ಪ್ರಾಣಹಾನಿ ಸಂಭವಿಸಿಲ್ಲ ಎಂಬುದಾಗಿ ತಿಳಿದುಬಂದಿದೆ.

ಪೆಟ್ರೋಲ್‌ ಪಂಪ್ ಉದ್ಯೋಗಿಗಳ ಸಹಾಯದಿಂದ ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದರು. ಆದರೆ ಯಶಸ್ವಿಯಾಗಲಿಲ್ಲ. ಬೆಂಕಿ ಬೇಗನೆ ಅಂಬ್ಯುಲೆನ್ಸ್‌ನಲ್ಲಿದ್ದ ಆಮ್ಲಜನಕ ಟ್ಯಾಂಕ್‌ಗೆ ಹರಡಿ ದೊಡ್ಡದಾಗಿ ಸ್ಫೋಟಗೊಂಡಿದೆ. ಈ ಘಟನೆಯಲ್ಲಿ ದಾರಿಹೋಕ ಅಮರ್‌ ಜೈಸ್ವಾಲ್ (20) ಎಂಬುವವರು ಗಾಯಗೊಂಡಿದ್ದು, ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಅಂಬ್ಯುಲೆನ್ಸ್ ಯಾವುದೇ ಆಸ್ಪತ್ರೆಗೆ ಸಂಬಂಧಿಸಿದ ವಾಹನ ಆಗಿರಲಿಲ್ಲ, ಬದಲಾಗಿ ಅದೊಂದು ಖಾಸಗಿ ಸೇವೆಯ ವಾಹನವಾಗಿದ್ದು, ಅದನ್ನು ದೆಹಲಿಯಿಂದ ತರಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ

Related Posts

ವಿವಿ ಪ್ರಾಧ್ಯಾಪಕಿಯಾದ ಮಂಗಳಮುಖಿ; ಉನ್ನತ ಶಿಕ್ಷಣದ ಪ್ರಾಧ್ಯಾಪಕಿಯಾದದ್ದು ಇದೇ ಮೊದಲು!!

ತೃತೀಯ ಲಿಂಗಿಯೊಬ್ಬರು ವಿಶ್ವವಿದ್ಯಾಲಯವೊಂದರ ಅರೆಕಾಲಿಕ ಪ್ರಾಧ್ಯಾಪಕಿಯಾಗಿ ನೇಮಕಗೊಳ್ಳುವ ಮೂಲಕ…

ಕರ್ನಾಟಕ ನಿವೃತ್ತ  ನೌಕರರ ರಾಜ್ಯಮಟ್ಟದ ಪ್ರತಿಭಟನಾ ಸಮಾವೇಶ ಸ್ಥಳಕ್ಕೆ ಶಾಸಕ ಅಶೋಕ್ ರೈ ಭೇಟಿ

ಸಲು ಹಾಗೂ ಆರ್ಥಿಕ ಸೌಲಭ್ಯವನ್ನು ನೀಡುವಲ್ಲಿ ಪರಿಷ್ಕೃತ ಆದೇಶ ಹೊರಡಿಸಬೇಕೆಂದು ನಡೆಸುತ್ತಿರುವ…

1 of 2