ರಾಜ್ಯ ವಾರ್ತೆ

ಸೂಫಿ ಸಂತ ಬಂದೇನವಾಜರ ವಂಶಸ್ಥ, ನಿವೃತ್ತ ಕುಲಪತಿ ಡಾ.ಸಯ್ಯದ್ ಷಾ ನಿಧನ

ಉತ್ತರ ಕರ್ನಾಟಕ ಭಾಗದಲ್ಲಿ ಪ್ರಸಿದ್ಧ ಹೊಂದಿದ್ದ ಧಾರ್ಮಿಕ ಕ್ಷೇತ್ರವಾದ ಖಾಜಾ ಬಂದೇನವಾಜ್ ದರ್ಗಾದ ಪೀಠಾಧಿಕಾರಿ ಮುತ್ಸದ್ಧಿ ಡಾ.ಸಯ್ಯದ್ ಷಾ ಬ್ರುಸ್ರೋ ಹುಸೈನಿ ಸಾಹೇಬ (79) ಇಂದು ವಯೋಸಹಜದಿಂದ ನಿಧನರಾಗಿದ್ದಾರೆ.

ಈ ಸುದ್ದಿಯನ್ನು ಶೇರ್ ಮಾಡಿ

ಉತ್ತರ ಕರ್ನಾಟಕ ಭಾಗದಲ್ಲಿ ಪ್ರಸಿದ್ಧ ಹೊಂದಿದ್ದ

ಧಾರ್ಮಿಕ ಕ್ಷೇತ್ರವಾದ ಖಾಜಾ ಬಂದೇನವಾಜ್ ದರ್ಗಾದ ಪೀಠಾಧಿಕಾರಿ ಮುತ್ಸದ್ಧಿ ಡಾ.ಸಯ್ಯದ್ ಷಾ ಬ್ರುಸ್ರೋ ಹುಸೈನಿ ಸಾಹೇಬ (79) ಇಂದು ವಯೋಸಹಜದಿಂದ ನಿಧನರಾಗಿದ್ದಾರೆ.

SRK Ladders

ಇವರು ಇಬ್ಬರು ಗಂಡು ಮತ್ತು ಮೂವರು ಹೆಣ್ಣುಮಕ್ಕಳು ಸೇರಿದಂತೆ ಅಪಾರ ಬಂಧು ವರ್ಗ ಅಸಂಖ್ಯಾತ ಭಕ್ತವರ್ಗವನ್ನು ಅಗಲಿದ್ದಾರೆ.

ಪ್ರಸಿದ್ಧ ಸೂಫಿ ಸಂತ ಹಜರತಗ ಖಾಜಾ ಬಂದೇನವಾಜ್ ರ 23 ನೇ ವಂಶಸ್ಥರಾಗಿದ್ದು, ಇವರು ಆಳವಾದ ಆಧ್ಯಾತ್ಮಿಕ ಜ್ಞಾನವನ್ನು ಹೊಂದಿದ್ದರು. ಅಲ್ಲದೆ ಶೈಕ್ಷಣಿಕ ತಜ್ಞರು ಮತ್ತು ನ್ಯಾಯವಾದಿ ಆಗಿದ್ದ ಇವರು KBN ವಿಶ್ವವಿದ್ಯಾಲಯದ ಕುಲಪತಿಯಾಗಿ ಸೇವೆ ಸಲ್ಲಿಸಿದ್ದರು. ಆಧುನಿಕ ತಂತ್ರಜ್ಞಾನದೊಂದಿಗೆ ಸೂಫಿ ಪರಂಪರೆಯ ಸೇತುವೆ ಆಗಿ ನಿರಂತರವಾಗಿ ದೇಶದ ವಿವಿಧ ಭಾಗಗಳಲ್ಲಿ ಇಂದಿನ ಪೀಳಿಗೆಗಳಿಗೆ ಸೂಫಿ ಪರಂಪರೆಯನ್ನು ತಿಳಿಸುವ ಸಮ್ಮೇಳನಗಳು ಮತ್ತು ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದರು.

ಅವರ ಬದುಕು ಉತ್ತಮ ಸಂಸ್ಕಾರ, ಸಂಸ್ಕೃತಿಯಿಂದ ಕೂಡಿತ್ತು. ಅವರ ಪೂರ್ವಜರ ಪರಂಪರೆಯನ್ನು ಮುಂದುವರೆಸಿಕೊಂಡು ಬಂದಿದ್ದರು. ಗುರುಗಳ ನಿಧನದಿಂದ ಅವರ ಅಪಾರ ಅನುಯಾಯಿ ಮತ್ತು ಸೂಫಿ ಸಮುದಾಯಕ್ಕೆ ತುಂಬಲಾರದ ನಷ್ಟ ಉಂಟಾಗಿದೆ


ಈ ಸುದ್ದಿಯನ್ನು ಶೇರ್ ಮಾಡಿ

Related Posts

ವಿವಿ ಪ್ರಾಧ್ಯಾಪಕಿಯಾದ ಮಂಗಳಮುಖಿ; ಉನ್ನತ ಶಿಕ್ಷಣದ ಪ್ರಾಧ್ಯಾಪಕಿಯಾದದ್ದು ಇದೇ ಮೊದಲು!!

ತೃತೀಯ ಲಿಂಗಿಯೊಬ್ಬರು ವಿಶ್ವವಿದ್ಯಾಲಯವೊಂದರ ಅರೆಕಾಲಿಕ ಪ್ರಾಧ್ಯಾಪಕಿಯಾಗಿ ನೇಮಕಗೊಳ್ಳುವ ಮೂಲಕ…

ವಕ್ಫ್ ಬೋರ್ಡ್ ಹೆಸರಿನಲ್ಲಿ ಎಷ್ಟು ಜಾಗವಿದೆ? ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್  ಹೇಳಿಕೆ ವೈರಲ್!!

ವಕ್ಫ್‌ ಬೋರ್ಡ್ ಹೆಸರಿನಲ್ಲಿ ಒಂದು ಎಕರೆ ಬಿಡಿ ಒಂದಿಂಚು ಭೂಮಿಯೂ ಇಲ್ಲ. ಈ ಆಸ್ತಿಗಳು ದರ್ಗಾ,…

1 of 2