ಚಿಕ್ಕಬಳ್ಳಾಪುರ: ಜೋಡಿಯೊಂದು ಮನೆಬಿಟ್ಟು ಓಡಿ ಹೋಗಿ ಮದುವೆಯಾಗಿದ್ದಕ್ಕೆ ರೊಚ್ಚಿಗೆದ್ದ ಯುವತಿ ಕುಟುಂಬಸ್ಥರು ಯುವಕನ ತಾಯಿಗೆ ಬೆಂಕಿ ಹಚ್ಚಿರುವ ಘಟನೆ ಚಿಕ್ಕಬಳ್ಳಾಪುರದ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲ್ಲೂಕಿನ ಸಂಗಟಪಲ್ಲಿ ನಡೆದಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲ್ಲೂಕಿನ ಸಂಗಟಪಲ್ಲಿ ಗ್ರಾಮದ ಅಂಬರೀಶ ಹಾಗೂ ಸಿಂಗಪ್ಪಗಾರಿಪಲ್ಲಿಯ ಪ್ರತಿಭಾ ಒಬ್ಬರನ್ನೊಬ್ಬರು ಪರಸ್ಪರ ಪ್ರೀತಿಸಿ ಮದುವೆಯಾಗಲು ತೀರ್ಮಾನಿಸಿದ್ದರು. ಆದ್ರೆ ಇಬ್ಬರ ಮದುವೆಗೆ ಪ್ರತಿಭಾ ಮನೆಯವರು ತೀವ್ರ ವಿರೋಧ ವ್ಯೆಕ್ತಪಡಿಸಿದ್ದರು. ಆದರೂ ಸಹ ಪ್ರತಿಭಾ ಮನೆಯವರ ವಿರೋಧದ ನಡುವೆಯೂ ಓಡಿ ಹೋಗಿ ದೇವಸ್ಥಾನವೊಂದರಲ್ಲಿ ಅಂಬರೀಶನಿಂದ ತಾಳಿ ಕಟ್ಟಿಸಿಕೊಂಡು ಸಪ್ತಪದಿ ತುಳಿದಿದ್ದಾಳೆ.
ಈ ವಿಚಾರ ಗೊತ್ತಾಗುತ್ತಿದ್ದಂತೆಯೇ ರೊಚ್ಚಿಗೆದ್ದ ಪ್ರತಿಭಾ ಮನೆ ಕಡೆಯವರು, ಯುವಕ ಅಂಬರೀಶನ ಮನೆಯ ಮುಂದೆ ಹೋಗಿ ಗಲಾಟೆ ಮಾಡಿದ್ದಾರೆ. ಅಲ್ಲದೇ ತಮ್ಮ ಮಗಳ ಬಟ್ಟೆ-ಬರೆ ಹಾಗೂ ಪುಸ್ತಕಗಳನ್ನು ತಂದು ಪೆಟ್ರೋಲ್ ಹಾಕಿ ಬೆಂಕಿ ಹಚ್ಚಲು ಮುಂದಾಗಿದ್ದರು. ಇದೇ ವೇಳೆ ಅಂಬರೀಶ ತಾಯಿ ಬಯ್ಯಮ್ಮ ಅಡ್ಡ ಹೋಗಿದ್ದಾಳೆ. ಆ ವೇಳೆ ಪ್ರತಿಭಾ ಪೋಷಕರು, ಬಯ್ಯಮ್ಮ ಮೇಲೆಯೂ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಇದರಿಂದ ಬಯ್ಯಮ್ಮ ಗಂಭಿರ ಗಾಯಗೊಂಡಿದ್ದು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಇತ್ತ ಬಾಗೇಪಲ್ಲಿ ತಾಲೂಕಿನ ಪಾತಪಾಳ್ಯ ಠಾಣೆ ಪೊಲೀಸರು, ಪ್ರತಿಭಾಳ ಪೋಷಕರ ಮೇಲೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.
ಇನ್ನೂ ಅಕ್ಕನ ಸಾವಿನಿಂದ ತಮ್ಮ ಸಹ ಕುಗ್ಗಿ ಹೋಗಿದ್ದು, ತಾಯಿಗೆ ಆತಂಕ ಭಯ ಮೂಡಿಸಿದೆ. ಈ ಸಂಬಂಧ ಬೆಂಗಳೂರಿನ ಹೈಗ್ರೌಂಡ್ ಪೊಲೀಸರು, ಚಿಕ್ಕಬಳ್ಳಾಪುರಕ್ಕೆ ಆಗಮಿಸಿ ಮೃತ ಸ್ವರ್ಣ ತಾಯಿ ಬಳಿ ಹೇಳಿಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.