ಚೈತ್ರಾ ಬಿಗ್ ಬಾಸ್ಗೆ ಹೋದ ಸಂದರ್ಭದಲ್ಲಿ ಬಾಲಕೃಷ್ಣ ಅವರು ವಿಶ್ ಮಾಡಿದ್ದ ವಿಡಿಯೋ ಒಂದು ಈಗ ವೈರಲ್ ಆಗುತ್ತಿದೆ.
ಚೈತ್ರಾ ಬಿಗ್ ಬಾಸ್ಗೆ ಹೋಗುವಾಗ ಅಮ್ಮನ ಜೊತೆ ಸೇರಿ ತನ್ನನ್ನು ಮನೆಯಲ್ಲಿ ಕೂಡಿಟ್ಟು ಹೋಗಿದ್ದರು ಎಂದು ಬಾಲಕೃಷ್ಣ ಅವರು ಇತ್ತೀಚೆಗೆ ಮಾಧ್ಯಮಗಳ ಎದುರು ಆರೋಪ ಹೊರಿಸಿದ್ದರು. ಇದು ಸಾಕಷ್ಟು ಸಂಚಲನ ಸೃಷ್ಟಿಸಿತ್ತು. ಮಗಳಾಗಿ ಈ ರೀತಿ ಮಾಡಿದ್ದು ಎಷ್ಟು ಸರಿ ಎಂಬ ನೈತಿಕ ಪ್ರಶ್ನೆ ಚೈತ್ರಾ ಎದುರು ಇಡಲಾಯಿತು. ಆದರೆ, ಚೈತ್ರಾ ಈ ವಿಚಾರವನ್ನು ಅಲ್ಲಗಳೆದಿದ್ದರು.
ಈಗ ಚೈತ್ರಾ ಬಿಗ್ ಬಾಸ್ ಮನೆಯಲ್ಲಿ ಇದ್ದ ಸಂದರ್ಭದಲ್ಲಿ ಬಾಲಕೃಷ್ಣ ಅವರು ನೀಡಿದ್ದ ಸಂದರ್ಶನದ ಕ್ಲಿಪ್ ವೈರಲ್ ಆಗಿದೆ. ಈ ವಿಡಿಯೋದಲ್ಲಿ, ‘ನಿಮ್ಮ ಮಗಳು ಬಿಗ್ ಬಾಸ್ಗೆ ಹೋಗಿದ್ದು ಎಷ್ಟು ಖುಷಿ ಇದೆ’ ಎಂದು ಕೇಳಲಾಗಿತ್ತು. ಇದಕ್ಕೆ ಉತ್ತರಿಸಿದ್ದ ಅವರು, ‘ತುಂಬ ಖುಷಿ ಆಗ್ತಿದೆ. ಕಾರ್ಯಕ್ರಮ ಚೆನ್ನಾಗಿ ನಡೆಸಿಕೊಡ್ತಿದ್ದಾಳೆ. ಹಾಗೆ ನಡೆಸಿಕೊಡಲಿ’ ಎಂದು ಖುಷಿಯಿಂದ ಹಾರೈಸಿದ್ದರು. ಆದರೆ, ಈಗ ಚೈತ್ರಾ ಬಿಗ್ ಬಾಸ್ ಮನೆಗೆ ಹೋದ ವಿಚಾರವೇ ಗೊತ್ತಿರಲಿಲ್ಲ ಎನ್ನುತ್ತಿದ್ದಾರೆ.
ಚೈತ್ರಾ ಕುಂದಾಪುರ ಬಗ್ಗೆ ಸ್ವತಃ ಅವರ ತಂದೆ ಬಾಲಕೃಷ್ಣ ನಾಯ್ಕ್ (Balakrishna Naik) ವಿವಿಧ ರೀತಿಯ ಆರೋಪ ಮಾಡಿದ್ದಾರೆ. ಮಗಳು ತಮ್ಮನ್ನು ಮದುವೆಗೆ ಕರೆದೇ ಇಲ್ಲ ಎಂಬುದು ಪ್ರಮುಖ ವಿಚಾರವಾದರೆ, ಚೈತ್ರಾ ಅನೇಕರಿಗೆ ಮೋಸ ಮಾಡಿದ್ದಾರೆ ಅನ್ನೋದು ಮತ್ತೊಂದು ಮುಖ್ಯ ಆರೋಪ. ಇನ್ನು, ಚೈತ್ರಾ ಬಿಗ್ ಬಾಸ್ಗೆ ಹೋಗಿದ್ದ ಮಾಹಿತಿ ತಮಗೆ ಗೊತ್ತೇ ಇರಲಿಲ್ಲ ಎಂದು ಬಾಲಕೃಷ್ಣ ಅವರು ಹೇಳಿಕೊಂಡಿದ್ದರು.
ಚೈತ್ರಾ ಕುಂದಾಪುರ ಹಾಗೂ ಬಾಲಕೃಷ್ಣ ಮಧ್ಯೆ ಆರೋಪ-ಪ್ರತ್ಯಾರೋಪ ನಡೆಯುತ್ತಲೇ ಇದೆ. ತಂದೆಯ ಕುಡಿತದಿಂದ ತಮಗೆ ತೊಂದರೆ ಆಗಿದೆ ಎಂದಿದ್ದಾರೆ ಚೈತ್ರಾ. ತಂದೆಯಾಗಿ ಅವರು ಯಾವುದೇ ಜವಾಬ್ದಾರಿ ತೆಗೆದುಕೊಂಡಿಲ್ಲ ಎಂಬುದು ಚೈತ್ರಾ ಆರೋಪ. ಇನ್ನು, ಮದುವೆಗೆ ಐದು ಲಕ್ಷ ರೂಪಾಯಿ ಕೇಳಿದ್ದಾಗಿ ಚೈತ್ರಾ ವಿರುದ್ಧ ಬಾಲಕೃಷ್ಣ ಆರೋಪಿಸಿದ್ದಾರೆ. ಇದರಲ್ಲಿ ನಿಜ ಯಾವುದು, ಸುಳ್ಳು ಯಾವುದು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.