ಬೆಂಗಳೂರು: ರಾಜ್ಯ ಸರ್ಕಾರ ಡೀಸೆಲ್ ಮೇಲಿನ ದರ ಏರಿಕೆಯನ್ನು ಕೂಡಲೇ ಹಿಂಪಡೆಯುವಂತೆ ಆಗ್ರಹಿಸಿರುವ ಲಾರಿ ಮಾಲೀಕರು, ಏಪ್ರಿಲ್ 15 ರಂದು ಮುಷ್ಕರಕ್ಕೆ ಕರೆ ನೀಡಿದ್ದಾರೆ. ಈ ಸಂಬಂಧ ಲಾರಿ ಮಾಲೀಕರು ಸಭೆ ನಡೆಸಿ ತೀರ್ಮಾನ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ನಿರ್ಧಾರ ತೆಗೆದುಕೊಂಡಿದ್ದಾರೆ.
ಏ.14 ರ ಮಧ್ಯರಾತ್ರಿಯಿಂದ ರಾಜ್ಯಾದ್ಯಂತ ಲಾರಿ ಮುಷ್ಕರಕ್ಕೆ ಕರೆ ನೀಡಲಾಗಿದ್ದು, 5 ಲಕ್ಷ ಲಾರಿಗಳ ಸಂಚಾರ ಬಂದ್ ಆಗಲಿದೆ. ಲಾರಿ ಮುಷ್ಕರಕ್ಕೆ ಏರ್ ಪೋರ್ಟ್ ಟ್ಯಾಕ್ಸಿಗಳು, ಪೆಟ್ರೋಲ್ ಬಂಕ್ ಗಳು ಬೆಂಬಲ ನೀಡಿದೆ ಎಂದು ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ ಹೇಳಿದ್ದಾರೆ. ಸರ್ಕಾರ ಡೀಸೆಲ್ ಬೆಲೆ ಏರಿಸಿದೆ. ರಾಜ್ಯ ಹೆದ್ದಾರಿಯಲ್ಲೂ ಟೋಲ್ ಸಂಗ್ರಹ ಶುರು ಮಾಡಿದ್ದಾರೆ. ನಾವು ಮುಷ್ಕರಕ್ಕೆ ಕರೆ ನೀಡಲು ಸಜ್ಜಾಗಿದ್ದರೂ ನಮ್ಮನ್ನು ಕರೆದು ಮಾತನಾಡಿಸುವ ಕೆಲಸ ಸರ್ಕಾರ ಮಾಡಿಲ್ಲ. ಡೀಸೆಲ್ ಬೆಲೆ ಇಳಿಸುವ ತನಕ ನಮ್ಮ ಪ್ರತಿಭಟನೆ ನಿಲ್ಲಲ್ಲ ಎಂದಿದ್ದಾರೆ