pashupathi
ಕ್ರೀಡೆ

ಆರ್ಯಾಪು ಪ್ರೀಮಿಯರ್ ಲೀಗ್ – ಸೆವೆನ್ ಡೈಮಂಡ್ಸ್ ಆ್ಯಂಡ್ ಆರ್ಟ್ಸ್ ಚಾಂಪಿಯನ್ |ಐಪಿಎಲ್ ಮಾದರಿಯಲ್ಲೇ ನಡೆದಿದೆ ಏಪಿಎಲ್: ಸಹಜ್ ರೈ ಬಳಜ್ಜ

tv clinic
ಆರ್ಯಾಪು ಕಾರ್ಪಾಡಿ ಮೈದಾನದಲ್ಲಿ ಎರಡು ದಿನಗಳ ಕಾಲ ನಡೆದ ಆರ್ಯಾಪು ಪ್ರೀಮಿಯರ್ ಲೀಗ್'ನ ಸಮಾರೋಪ ಸಮಾರಂಭ ಭಾನುವಾರ ಸಂಜೆ ನಡೆಯಿತು.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಆರ್ಯಾಪು ಕಾರ್ಪಾಡಿ ಮೈದಾನದಲ್ಲಿ ಎರಡು ದಿನಗಳ ಕಾಲ ನಡೆದ ಆರ್ಯಾಪು ಪ್ರೀಮಿಯರ್ ಲೀಗ್’ನ ಸಮಾರೋಪ ಸಮಾರಂಭ ಭಾನುವಾರ ಸಂಜೆ ನಡೆಯಿತು.

akshaya college

ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದ ಉದ್ಯಮಿ ಸಹಜ್ ರೈ ಬಳಜ್ಜ, ಐಪಿಎಲ್ ಮಾದರಿಯಲ್ಲಿ ಕ್ರಿಕೆಟ್ ಪಂದ್ಯ ಏರ್ಪಡಿಸಿ, ಮ್ಯೂಸಿಕಲ್ ನೈಟ್ ಆಯೋಜನೆ ಮಾಡಿರುವುದು ಬಹಳ ಕಷ್ಟದ ವಿಷಯ. ಕಳೆದ ಒಂದು ತಿಂಗಳಿನಿಂದ ಹೊಸ ಮನೆ ಕ್ರಿಕೆಟರ್ಸ್ ತಂಡದ ಪ್ರಯತ್ನ ನೋಡುತ್ತಿದ್ದೇನೆ. ತುಂಬಾ ಶ್ರಮ ಪಟ್ಟಿದ್ದಾರೆ. ಅವರ ಶ್ರಮಕ್ಕೆ ತಕ್ಕಂತೆ ಮೊದಲ ಪ್ರಯತ್ನದಲ್ಲೇ ಏಪಿಎಲ್ ಬಹಳ ಯಶಸ್ಸು ಕಂಡಿದೆ. ಇದು ಇನ್ನಷ್ಟು ವರ್ಷ ಮೂಡಿ ಬರಲಿ ಎಂದು ಹಾರೈಸಿದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ಮಾರ್ತಾ ಮಾತನಾಡಿ, ಯುವಕರು ಒಟ್ಟುಗೂಡಿ ಕ್ರೀಡೆ ಹಾಗೂ ಸಂಸ್ಕೃತಿಯನ್ನು ಬಿಂಬಿಸುವ ಕಾರ್ಯಕ್ರಮ ಹಮ್ಮಿಕೊಂಡಿರುವುದು ಸಂತೋಷದ ವಿಚಾರ ಎಂದರು.

ಎಂ.ಆರ್.ಪಿ.ಎಲ್.ನ ಸೀತಾರಾಮ ರೈ ಕೈಕಾರ ಮಾತನಾಡಿ, ಜೀರ್ಣೋದ್ಧಾರ ಸಂದರ್ಭ ಊಟದ ವ್ಯವಸ್ಥೆ ಮಾಡಿದ ಮೈದಾನದಲ್ಲಿ ಇಂದು ಎಪಿಎಲ್ ಪಂದ್ಯ ಆಯೋಜನೆಗೊಂಡಿದೆ. ಎಪಿಎಲ್ ಇನ್ನಷ್ಟು ಸುಂದರವಾಗಿ ಮುಂಬರುವ ವರ್ಷಗಳಲ್ಲೂ ಮೂಡಿಬರಲಿ ಎಂದರು.

ಉದ್ಯಮಿ, ಅಕ್ಷಯ ಕಾಲೇಜಿನ ಸಂಚಾಲಕ ಜಯಂತ್ ನಡುಬೈಲು, ಬಿಜೆಪಿ ಗ್ರಾಮಾಂತರ ಮಂಡಲ ಉಪಾಧ್ಯಕ್ಷ ವಿದ್ಯಾಧರ್ ಜೈನ್, ಆರ್ಯಾಪು ಗ್ರಾಪಂ ಮಾಜಿ ಅಧ್ಯಕ್ಷ ವಿಜಯ ಬಿ.ಎಸ್., ಪುತ್ತೂರು ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಪೂಜಾರಿ ಬಡಾವು ಶುಭಹಾರೈಸಿದರು.

ತಾಪಂ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಸಿನಿಮಾ ವಿತರಕ ಬಾಲಕೃಷ್ಣ ಶೆಟ್ಟಿ ಕುಕ್ಕಾಡಿ, ಸಂಪ್ಯ ನವಚೇತನ ಯುವಕ ಮಂಡಲ ಅಧ್ಯಕ್ಷ ಜಯಂತ್ ಶೆಟ್ಟಿ ಕಂಬಳತ್ತಡ್ಡ, ಉದ್ಯಮಿ ಅಮಿತ್ ಕಲ್ಲಡ್ಕ, ಶ್ರೀ ಚಕ್ರರಾಜರಾಜೇಶ್ವರಿ ದೇವಸ್ಥಾನದ ಅಧ್ಯಕ್ಷ ಗಂಗಾಧರ್ ಅಮೀನ್ ಹೊಸಮನೆ, ಉದ್ಯಮಿ ಗಂಗಾಧರ ಕಲ್ಲಡ್ಕ, ಬಾರಿಕೆ ಮನೆತನದ ಮಂಜಪ್ಪ ರೈ, ಉದ್ಯಮಿ ಉಮೇಶ್ ಶೆಟ್ಟಿ ಬೈಲಾಡಿ, ಧನಂಜಯ ಶೆಟ್ಟಿ ಮೇರ್ಲ, ತಾರಾನಾಥ ಮೇರ್ಲ, ಶರತ್ ಆಳ್ವ ಕೂರೇಕು, ಸಂತೋಷ್ ಸುವರ್ಣ ಮೇರ್ಲ, ಸುರೇಶ್ ಪೆಲತ್ತಡಿ, ನರೇಂದ್ರ ನಾಯಕ್ ಮರಕ್ಕ, ಬಾಲಚಂದ್ರ ಕಾರ್ಪಾಡಿ ಮೊದಲಾದವರು ಉಪಸ್ಥಿತರಿದ್ದರು.

ಹೊಸಮನೆ ಕ್ರಿಕೆಟರ್ಸ್ ಅಧ್ಯಕ್ಷ ಧನುಷ್ ಹೊಸಮನೆ, ಉಪಾಧ್ಯಕ್ಷ ಪ್ರಜ್ವಲ್ ಎಂ.ಎಸ್., ಕೋಶಾಧಿಕಾರಿ ಶಿವಪ್ರಸಾದ್ ಶೆಟ್ಟಿ, ಸದಸ್ಯರಾದ ಸೃಜನ್ ರೈ, ಯತೀಶ್ ಪಿ.ಕೆ., ಹರಿಪ್ರಸಾದ್, ಶ್ರೇಯಸ್ ರೈ ಮೊದಲಾದವರು ಅತಿಥಿಗಳನ್ನು ಗೌರವಿಸಿದರು.

ಹೊಸಮನೆ ಕ್ರಿಕೆಟರ್ಸ್ ಕಾರ್ಯದರ್ಶಿ ಪವನ್ ಶೆಟ್ಟಿ ಕಂಬ್ಳತ್ತಡ್ಡ ಸ್ವಾಗತಿಸಿ, ಉಪಾಧ್ಯಕ್ಷ ಉಮೇಶ್ ಎಸ್.ಕೆ. ವಂದಿಸಿದರು. ಶ್ರೇಯಸ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಎಪಿಎಲ್ ಫಲಿತಾಂಶ:

ಚಾಂಪಿಯನ್ ಆಗಿ ಶರತ್ ಆಳ್ವ ಕೂರೇಲು ಮಾಲಕತ್ವದ ಸೆವೆನ್ ಡೈಮಂಡ್ಸ್ ಆ್ಯಂಡ್ ಆರ್ಟ್ಸ್ ಕ್ಲಬ್ ಪುತ್ತೂರು ಹೊರಹೊಮ್ಮಿತು. ರನ್ನರ್ ಅಪ್ ಆಗಿ ಪ್ರೀತಂ ಶೆಟ್ಟಿ ಮೇರ್ಲ ಮಾಲಕತ್ವದ ಎಸ್.ಕೆ.ಸಿ. ಪುತ್ತೂರು, ತೃತೀಯ ಸ್ಥಾನ ಸುರೇಶ್ ಪೆಲತ್ತಡಿ ಮಾಲಕತ್ವದ ಸ್ವರ್ಣ ಸ್ಟ್ರೈಕರ್ಸ್, ಚತಿರ್ಥ ಸ್ಥಾನ ಜಯಂತ್ ಶೆಟ್ಟಿ ಕಂಬ್ಳತ್ತಡ್ಡ ಮಾಲಕತ್ವದ ಟೀಮ್ ರತ್ನಶ್ರೀ ಪಡೆದುಕೊಂಡಿತು.

ಬೆಸ್ಟ್ ಬ್ಯಾಟ್ಸ್ ಮೆನ್ ಲೋಹಿತ್, ಫೈನಲ್ ಪಂದ್ಯದ ಮ್ಯಾನ್ ಆಫ್ ದಿ ಮ್ಯಾಚ್ ಶರತ್ ಆಳ್ವ ಕೂರೇಲು, ಬೆಸ್ಟ್ ಬೌಲರ್ ಆಫ್ ಸಿರೀಸ್ ಪ್ರಶಾಂತ್, ಮ್ಯಾನ್ ಆಫ್ ದ ಸಿರೀಸ್ ಸುನಿಲ್, ಬೆಸ್ಟ್ ಫೀಲ್ಡರ್ ಪ್ರಮೋದ್, ಬೆಸ್ಟ್ ಎಮರ್ಜಿಂಗ್ ಪ್ಲೇಯರ್ ಶ್ರವಣ್ ಅವರು ಪಡೆದುಕೊಂಡರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಸವಾಲು, ಸಮಸ್ಯೆ ಬದುಕಿನ ಸಾಧನೆಗೆ ಸ್ಫೂರ್ತಿ | ರಾಮಕುಂಜದಲ್ಲಿ ಮೈಸೂರು ವಿಭಾಗ ಮಟ್ಟದ ಕಬಡ್ಡಿ ಉದ್ಘಾಟಿಸಿ ಭಾಗೀರಥಿ ಮುರುಳ್ಯ

ಕ್ರೀಡೆಯಲ್ಲಿ ಭಾಗವಹಿಸುವುದು ಬಹುಮಾನ ಗಿಟ್ಟಿಸಿಕೊಳ್ಳುವ ಲೆಕ್ಕಚಾರಕ್ಕೆ ಸೀಮಿತವಾಗದೆ ಪ್ರತಿಭೆ…