ವಿಶೇಷ

ಸನ್ ಸ್ಟ್ರೋಕ್ ಅಥವಾ ಶಾಖಾಘಾತ ಬಗ್ಗೆ ಎಚ್ಚರಿಕೆಯಿರಲಿ

ಈ ಸುದ್ದಿಯನ್ನು ಶೇರ್ ಮಾಡಿ

ಇತ್ತೀಚಿನ ದಿನಗಳಲ್ಲಿ ಬಿಸಿಲಿನ ಆರ್ಭಟ ಜೋರಾಗಿದೆ, ಬಾಹ್ಯ ವಾತಾವರಣದ ಉಷ್ಣತೆ 42 ಡಿಗ್ರಿ ಸೆಲ್ಸಿಯಸ್ಗಿಂತಲೂ ಹೆಚ್ಚಾಗಿದೆ. ಇಂತಹ ಬಿಸಿಲಿನ ಹೊಡೆತಕ್ಕೆ ನಮ್ಮ ದೇಹ ಬಳಲುತ್ತದೆ. ಈ ವಿಪರೀತ ಬಿಸಿಲಿನ ಕಾರಣದಿಂದ ದೇಹಕ್ಕೆ ಉಂಟಾಗುವ ಆಘಾತವನ್ನು ಸನ್ ಸ್ಟ್ರೋಕ್ ಅಥವಾ ಶಾಖಾಘಾತ ಎಂದೂ ಕರೆಯುತ್ತಾರೆ.

ನಮ್ಮ ದೇಹದಲ್ಲಿ ಚಯಾಪಚಯ ಜೈವಿಕ ಕ್ರಿಯೆ ನಿರಂತರವಾಗಿ ನಡೆಯುತ್ತಿರುತ್ತದೆ. ಈ ಜೈವಿಕ ಕ್ರಿಯೆಯ ಸಂದರ್ಭದಲ್ಲಿ ದೇಹದಲ್ಲಿ ಶಾಖ ಉತ್ಪಾದನೆಯಾಗುತ್ತದೆ. ಈ ಶಾಖ ಚರ್ಮದ ಮುಖಾಂತರ, ಶಾಖದ ವಿಕಿರಣದಿಂದ ಅಥವಾ ಬೆವರುವಿಕೆಯಿಂದ ದೇಹದಿಂದ ಹೊರ ಹಾಕಲ್ಪಡುತ್ತದೆ. ಆದರೂ ಕೆಲವೊಮ್ಮೆ ತೀವ್ರವಾದ ಸೂರ್ಯನ ಶಾಖ ಮತ್ತು ಬಿಸಿಲಿನ ಧಗೆಯನ್ನು ಲೆಕ್ಕಿಸದೆ ಮಾಡುವ ದೈಹಿಕ ಪರಿಶ್ರಮದ ಕೆಲಸದ ಸಂದರ್ಭದಲ್ಲಿ, ದೇಹಕ್ಕೆ ತನ್ನೊಳಗೆ ಉಂಟಾದ ಶಾಖವನ್ನು ಹೊರ ಹಾಕಲು ಸಾಧ್ಯವಾಗದೇ ಇರಬಹುದು. ಆಗ ದೇಹದ ಉಷ್ಣತೆಯು 106oಈ ಅಥವಾ 41.1 ಡಿಗ್ರಿ ಸೆಲ್ಸಿಯಸ್ಗಿಂತಲೂ ಹೆಚ್ಚಾಗಬಹುದು. ಇದಲ್ಲದೆ ಕೆಲವೊಮ್ಮೆ ದೇಹಕ್ಕೆ ಬೇಕಾದ ಸೂಕ್ತ ಪ್ರಮಾಣದ ನೀರಿನಾಂಶ ದೊರಕದೆ ಇದ್ದಾಗ ದೇಹ ನಿರ್ಜಲೀಕರಣಗೊಳ್ಳುತ್ತದೆ. ಈ ಕಾರಣದಿಂದ ನೀರಿನ ಕೊರತೆಯಿಂದ ವ್ಯಕ್ತಿಯ ಬೆವರುವಿಕೆ ಕಡಿಮೆಯಾಗಿ ದೇಹದೊಳಗೆ ಉತ್ಪಾದನೆಯಾದ ಶಾಖ ಪರಿಣಾಮಕಾರಿಯಾಗಿ ಹೊರ ಹಾಕಲು ಸಾಧ್ಯವಾಗದೇ ದೇಹದ ಉಷ್ಣತೆ ಹೆಚ್ಚಾಗಿ, ಸನ್ ಸ್ಟ್ರೋಕ್ಗೆ ಕಾರಣವಾಗಬಹುದು.

SRK Ladders

*ಮೊಬೈಲ್ ಬೇಕೇ ಬೇಕೆಂಬ ಹಠ: ತೆಗೆದುಕೊಡದ್ದಕ್ಕೆ ಬಿಟ್ಟೇ ಬಿಟ್ಟಳು ಪ್ರಾಣ!* *ಸ್ನೇಹಿತೆಯ ಜೊತೆಗೆ ಸಮುದ್ರಕ್ಕೆ ಹಾರಿದ ಸ್ನೇಹಿತ!!*

ಶಾಖಾಘಾತದ ಲಕ್ಷಣಗಳು ಏನು?

1. ವಿಪರೀತ ಆಯಾಸ, ಸುಸ್ತು, ವಾಂತಿ, ವಾಕರಿಕೆ, ಕಿರಿಕಿರಿ, ದೌರ್ಬಲ್ಯ, ತಲೆನೋವು, ತಲೆಸುತ್ತುವುದು, ಸ್ನಾಯು ಸೆಳೆತ ಮತ್ತು ಸ್ನಾಯುಗಳಲ್ಲಿ ನೋವು ಕಂಡು ಬರುತ್ತದೆ. ವ್ಯಕ್ತಿಯ ದೇಹದ ಪ್ರಕೃತಿ, ದೇಹದ ತೂಕ ಮತ್ತು ವ್ಯಕ್ತಿಯ ವಯಸ್ಸಿಗೆ ಅನುಗುಣವಾಗಿ ಲಕ್ಷಣಗಳು ವಿಭಿನ್ನ ವ್ಯಕ್ತಿಗಳಲ್ಲಿ ವಿಭಿನ್ನವಾಗಿ ಪ್ರಕಟಗೊಳ್ಳಬಹುದಾಗಿದೆ.

2. ಉಸಿರಾಟದ ತೀವ್ರತೆ ಮತ್ತು ಹೃದಯದ ಬಡಿತ ಹೆಚ್ಚಳವಾಗುತ್ತದೆ. ದೇಹದ ಉಷ್ಣತೆ ಏರುವುದು.

3. ನಾಡಿ ಬಡಿತ ಜೋರಾಗಬಹುದು, ರಕ್ತದೊತ್ತಡ ಕಡಿಮೆಯಾಗುವುದು, ಉಸಿರಾಟದ ತೊಂದರೆ ಕಂಡು ಬರುವುದು.

4. ಭ್ರಮೆ, ಗೊಂದಲ, ತಳಮಳ, ದಿಗ್ಭ್ರಮೆ, ವಿಚಿತ್ರವಾದ ನಡವಳಿಕೆ ಕಂಡು ಬರುವುದು.

*ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ ನಡೆಸುತ್ತಿದ್ದ ವೇಳೆ ಕೆಮ್ಮಿದ ಮಗು!!* *ಪವಾಡ ಎಂದು ಸಂತಸಪಟ್ಟ ದಂಪತಿ*

5. ಯಾವುದೇ ಚಿಕಿತ್ಸೆ ತಕ್ಷಣವೇ ದೊರಕದೇ ಇದ್ದಲ್ಲಿ ವ್ಯಕ್ತಿ ಹಠಾತ್ತನೆ ಕೋಮಾಕ್ಕೆ ಜಾರುವ ಸಾಧ್ಯತೆ ಇರುತ್ತದೆ.

ಯಾರಲ್ಲಿ ಹೆಚ್ಚು ಕಂಡುಬರುತ್ತದೆ?

1. ಶಿಶುಗಳು ಮತ್ತು ಹೆಚ್ಚು ವಯಸ್ಸಾದವರಲ್ಲಿ ಈ ಸನ್ಸ್ಟ್ರೋಕ್ ಹೆಚ್ಚು ಕಂಡುಬರುತ್ತದೆ. ಹೃದಯ ಸಂಬಂಧಿ ಕಾಯಿಲೆ ಇರುವವರು, ಶ್ವಾಸಕೋಶದ ಕಾಯಿಲೆ ಇರುವವರು, ಮೂತ್ರ ಪಿಂಡದ ಸಮಸ್ಯೆ ಇರುವವರು ಮತ್ತು ದೇಹದ ರಕ್ಷಣಾ ವ್ಯವಸ್ಥೆ ಕುಸಿದವರಲ್ಲಿ ಶಾಖಾಘಾತ ಹೆಚ್ಚು ಕಂಡುಬರುತ್ತದೆ.

2. ಹೊರಾಂಗಣ ಆಟದಲ್ಲಿ ತೊಡಗಿಸಿಕೊಳ್ಳುವ ಕ್ರೀಡಾಪಟುಗಳಲ್ಲಿ ಹೆಚ್ಚು ಕಂಡುಬರಬಹುದು.

💥ಪ್ರಜ್ವಲ್’ಗೆ ವಾರ್ನಿಂಗ್ ನೀಡಿದ ದೇವೇಗೌಡ!!

3. ಹೊರಾಂಗಣದಲ್ಲಿ ಸೂರ್ಯನ ಶಾಖ ತಡೆದುಕೊಂಡು ಕೆಲಸ ಮಾಡುವವರು ಮತ್ತು ಸೂರ್ಯನ ಕೆಳಗೆ ದೈಹಿಕ ಶ್ರಮವುಳ್ಳ ಕೆಲಸ ಮಾಡುವವರಲ್ಲಿ ಶಾಖಾಘಾತ ಬಹಳ ಸಾಮಾನ್ಯ.

ತಡೆಗಟ್ಟುವುದು ಹೇಗೆ?

1. ದೇಹದ ತಾಪಮಾನವನ್ನು ತಗ್ಗಿಸಲು ಬೇಸಿಗೆ ಸಮಯದಲ್ಲಿ ಕನಿಷ್ಠ 3ರಿಂದ 4 ಲೀಟರ್ ನೀರು ಕುಡಿಯಬೇಕು.

2. ಚರ್ಮ ಹೆಚ್ಚು ಬಿಸಿಯಾಗಿದ್ದರೆ ಒದ್ದೆ ಬಟ್ಟೆಯಿಂದ ಮೈಯನ್ನು ಚೆನ್ನಾಗಿ ಒರೆಸಬೇಕು, ದೇಹವನ್ನು ತಂಪಾಗಿಸಬೇಕು.

💥ಪ್ರಜ್ವಲ್ ರೇವಣ್ಣಗೆ ಬಿಗ್ ಶಾಕ್ ಕೊಟ್ಟ ವಿದೇಶಾಂಗ ಸಚಿವಾಲಯ!!

3. ಬೇಸಿಗೆ ಕಾಲದಲ್ಲಿ ಹೆಚ್ಚು ದಪ್ಪಗಿರುವ ಮತ್ತು ಬಿಗಿಯಾಗಿರುವ ಬಟ್ಟೆ ಧರಿಸಬಾರದು. ಜಾಸ್ತಿ ತೆಳುವಾದ ಹತ್ತಿ ಬಟ್ಟೆಯನ್ನು ಧರಿಸಿ ತಂಪುಗಾಳಿ ದೇಹಕ್ಕೆ ತಲುಪುವಂತೆ ಬಟ್ಟೆ ಧರಿಸಬೇಕು. ಗಾಢ ಬಣ್ಣದ ಮತ್ತು ಕಪ್ಪು ಬಟ್ಟೆಗಳನ್ನು ಬಳಸುವುದು ಸೂಕ್ತವಲ್ಲ, ಯಾಕೆಂದರೆ ಅವುಗಳು ಶಾಖವನ್ನು ಹೀರಿ ದೇಹದ ಉಷ್ಣತೆಯನ್ನು ಹೆಚ್ಚಿಸುತ್ತದೆ.

💥ನಿಮ್ಮ ಆಧಾರ್ ಕಾರ್ಡ್‌ಗಳನ್ನು ನಿಷ್ಕ್ರಿಯಗೊಳಿಸಲಾಗುತ್ತದೆಯೇ? 💥ಮನೆಯಲ್ಲಿಯೇ ಕುಳಿತು ಆಧಾರ್ ಅಪ್’ಡೇಟ್ ಹೇಗೆ? ಇಲ್ಲಿದೆ ವಿವರ…

4. ಆಲ್ಕೋಹಾಲ್ ಮತ್ತು ಕೆಫಿನ್ಯುಕ್ತ ಪಾನೀಯಗಳನ್ನು ಬೇಸಿಗೆಯಲ್ಲಿ ಬಳಸಲೇಬೇಡಿ. ನೈಸರ್ಗಿಕ ಪೇಯಗಳನ್ನು ಹೆಚ್ಚು ಬಳಸಿ. ದೇಹವನ್ನು ತಂಪಾಗಿರಿಸಬೇಕೆಂದು ಅತಿಯಾದ ಐಸ್ಕ್ರೀಮ್ ತಿನ್ನುವುದು ಮತ್ತು ಹೆಚ್ಚು ಕೃತಕ ಸಕ್ಕರೆ ಹಾಕಿದ ಸಿದ್ಧ ಪಾನೀಯವನ್ನು ಸೇವಿಸುವುದು ಮೂರ್ಖತನ.

5. ಬೇಸಿಗೆಯಲ್ಲಿ ಸಾಕಷ್ಟು ನೀರಿನಾಂಶ ಇರುವ ಆಹಾರವನ್ನು ಸೇವಿಸಬೇಕು. ಗಂಜಿ, ಹಾಲು, ಎಳನೀರು, ಮಜ್ಜಿಗೆ ಇತ್ಯಾದಿ ಪೇಯಗಳಿಗೆ ಆದ್ಯತೆ ನೀಡಿ.

6. ಬಿಸಿಲ ಧಗೆ ಹೆಚ್ಚಾಗಿರುವ ಹೊರಗಿನ ಚಟುವಟಿಕೆಗಳನ್ನು ಕಡಿಮೆ ಮಾಡಬೇಕು. ವಿಪರೀತ ಬಿಸಿಲು ಇರುವ ಸಮಯವಾದ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಶ್ರಮದಾಯಕ ಕೆಲಸವನ್ನು ಬಿಸಿಲಿನಲ್ಲಿ ಮಾಡಬೇಡಿ.

ಪ್ರಥಮ ಚಿಕಿತ್ಸೆ

1. ಶಾಖಾಘಾತಕ್ಕೆ ತುತ್ತಾದ ವ್ಯಕ್ತಿಯನ್ನು ನೆರಳಿರುವ ತಂಪಾಗಿರುವ ಪ್ರದೇಶಕ್ಕೆ ಕರೆದೊಯ್ದು ಬಟ್ಟೆಗಳನ್ನು ಸಡಿಲಿಸಿ ಚರ್ಮಕ್ಕೆ ತಂಪಾದ ಗಾಳಿ ಮತ್ತು ನೀರನ್ನು ಸಿಂಪಡಿಸಬೇಕು. ಬೆವರುವಿಕೆಯನ್ನು ಉತ್ತೇಜಿಸಬೇಕಾದ ಕ್ರಿಯೆಯನ್ನು ಹೆಚ್ಚುಗೊಳಿಸಬೇಕು. ತೊಡೆಸಂಧಿ ಮತ್ತು ಕೈ ಸಂಧಿಗಳಲ್ಲಿ ಐಸ್ಪ್ಯಾಕ್ ಇಡಬೇಕು.

2. ವ್ಯಕ್ತಿಗೆ ಆಹಾರ ಸೇವಿಸಲು ಸಾಧ್ಯವಾದಲ್ಲಿ, ಆತನಿಗೆ ತಂಪಾದ ನೈಸರ್ಗಿಕ ಪೇಯಗಳಾದ ನೀರು, ಎಳನೀರು, ಲಿಂಬೆ ಜ್ಯೂಸ್, ಹಣ್ಣಿನ ರಸ ನೀಡಬಹುದು. ಕೃತಕ ಪಾನೀಯಗಳಾದ ಪೆಪ್ಸಿ, ಕೋಕ್ ನೀಡಬೇಡಿ. ಆಲ್ಕೋಹಾಲ್ಯುಕ್ತ ಮತ್ತು ಕೆಫಿನ್ಯುಕ್ತ ಪಾನೀಯಗಳನ್ನು ಬಳಸಬಾರದು.

3. ದೇಹದ ಉಷ್ಣತೆಯನ್ನು ದಾಖಲು ಮಾಡಬೇಕು. ದೇಹದ ಉಷ್ಣತೆ 101oಈಗಿಂತಲೂ ಕಡಿಮೆ ಆಗುವವರೆಗೆ ದೇಹವನ್ನು ತಂಪಾಗಿಸುವ ಯತ್ನವನ್ನು ಮುಂದುವರಿಸತಕ್ಕದ್ದು, ಐಸ್ ಬ್ಲಾಂಕೆಟ್ಗಳನ್ನು ಬಳಸಬಹುದಾಗಿದೆ.

4. ವ್ಯಕ್ತಿಯ ನಾಡಿ ಬಡಿತ, ರಕ್ತದೊತ್ತಡ ಮತ್ತು ಉಷ್ಣತೆಯನ್ನು ನಿರಂತರವಾಗಿ ದಾಖಲು ಮಾಡಿ ನಿಯಂತ್ರಣಕ್ಕೆ ಬರುವಲ್ಲಿ ವರೆಗೆ ಪ್ರಥಮ ಚಿಕಿತ್ಸೆ ಮುಂದುವರಿಸಿ.


ಈ ಸುದ್ದಿಯನ್ನು ಶೇರ್ ಮಾಡಿ

Related Posts

No Content Available