ವಿಶೇಷ

ಚಲಿಸುವ ರೈಲಿನಲ್ಲೇ ಪ್ರಯಾಣಿಕರಿಗೆ   ATM  ಸೌಲಭ್ಯ!!

GL
ಭಾರತೀಯ ರೈಲ್ವೆ ಇಲಾಖೆಯೂ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಹೊಸ ಹೊಸ ಪ್ರಯೋಗ ಮಾಡುತ್ತಿರುತ್ತದೆ. ಅದರಂತೆ ಇದೀಗ ಚಲಿಸುವ ರೈಲಿನಲ್ಲಿ ಎಟಿಎಂ ಇರಿಸಿ ಪರೀಕ್ಷೆ ಮಾಡಲಾಗಿದ್ದು ಅದರಲ್ಲಿ ಸಕ್ಸಸ್ ಆಗಿದೆ ಎನ್ನಲಾಗಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಭಾರತೀಯ ರೈಲ್ವೆ ಇಲಾಖೆಯೂ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಹೊಸ ಹೊಸ ಪ್ರಯೋಗ ಮಾಡುತ್ತಿರುತ್ತದೆ. ಅದರಂತೆ ಇದೀಗ ಚಲಿಸುವ ರೈಲಿನಲ್ಲಿ ಎಟಿಎಂ ಇರಿಸಿ ಪರೀಕ್ಷೆ ಮಾಡಲಾಗಿದ್ದು ಅದರಲ್ಲಿ ಸಕ್ಸಸ್ ಆಗಿದೆ ಎನ್ನಲಾಗಿದೆ.

chennai-shopping
maithri

ಇಷ್ಟು ದಿನ ರಸ್ತೆಗಳ ಬದಿಯಲ್ಲಿ ಇರುವ ಎಟಿಎಂಗಳಲ್ಲಿ ಜನರು ಹಣ ತೆಗೆದುಕೊಳ್ಳುತ್ತಿದ್ದರು. ಇನ್ನು ಮೇಲೆ ಟ್ರ್ಯಾಕ್ ಮೇಲೆ ಚಲಿಸುವ ಟ್ರೈನ್ ನಲ್ಲೂ ಎಟಿಎಂಗಳಿಂದ ಹಣ ಡ್ರಾ ಮಾಡಬಹುದು. ಇಂತಹದೊಂದು ವಿನೂತನ ಕಾರ್ಯವನ್ನು ಭಾರತೀಯ ರೈಲ್ವೆ ಇಲಾಖೆ ಪ್ರಯಾಣಿಕರಿಗೆ ಪರಿಚಯಿಸಿದೆ.

ರೈಲ್ವೆಯ ಭೂಸಾವಲ್ ವಿಭಾಗ ಮತ್ತು ಬ್ಯಾಂಕ್ ಆಫ್ ಮಹಾರಾಷ್ಟ್ರದ ನಡುವಿನ ಸಹಭಾಗಿತ್ವದಲ್ಲಿ ಮುಂಬೈಯಿಂದ ನಾಸಿಕ್ ನ ಮನ್ಮಾಡ್ ವರೆಗೆ ಸಂಚಾರ ಮಾಡುವ ಪಂಚವಟಿ ಎಕ್ಸ್ ಪ್ರೆಸ್ ರೈಲ್ವೆಯ ಎಸಿ ಕೋಚ್ ನ ಒಳಗೆ ಎಟಿಎಂ ಇರಿಸಲಾಗಿದೆ. ಪ್ರಯಾಣಿಸುವ ಸಮಯದಲ್ಲಿ ಹಣದ ಅವಶ್ಯಕತೆ ಇದ್ದರೇ ಪ್ರಯಾಣಿಕರು ಹಣ ಡ್ರಾ ಮಾಡಿಕೊಳ್ಳಬಹುದು. ಇದನ್ನು INFRIS (Innovative and Non-Fare Revenue Ideas Scheme) ಯೋಜನೆಯ ಅಡಿ ರೈಲಿನಲ್ಲಿ ಪರಿಚಯಿಸಲಾಗಿದೆ.

ಪಂಚವಟಿ ಎಕ್ಸ್‌ಪ್ರೆಸ್ ರೈಲಿನ ಎಲ್ಲ 22 ಕೋಚ್‌ಗಳು ಒಂದಕ್ಕೊಂದು ಸಂಪರ್ಕ ಹೊಂದಿವೆ. ಹೀಗಾಗಿ ಎಲ್ಲ ಬೋಗಿಗಳಲ್ಲಿ ಇರುವ ಪ್ರಯಾಣಿಕರು ಎಟಿಎಂ ಅನ್ನು ಬಳಸಬಹುದು ಎನ್ನಲಾಗಿದೆ. ಇದೊಂದು ರೈಲ್ವೆಯ ಉತ್ತಮವಾದ ಯೋಜನೆ ಆಗಿದೆ ಎಂದು ಹೇಳಬಹುದು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts