Gl jewellers
ಧಾರ್ಮಿಕ

ಮಾ. 8ರಿಂದ ಪುತ್ತೂರು ಶ್ರೀ ಮಹಾಲಿಂಗೇಶ್ವರ ಸನ್ನಿಧಿಯಲ್ಲಿ ಪರಿಹಾರ ಕಾರ್ಯ

ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿ ಕೆಲಸಗಳ ಬಗ್ಗೆ ನಡೆದ ತಾಂಬೂಲ ಪ್ರಶ್ನಾ ಚಿಂತನೆಯ ಪರಿಹಾರ ಕಾರ್ಯಕ್ರಮ ಮಾ. 8ರಿಂದ 14ರವರೆಗೆ ನಡೆಯಲಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿ ಕೆಲಸಗಳ ಬಗ್ಗೆ ನಡೆದ ತಾಂಬೂಲ ಪ್ರಶ್ನಾ ಚಿಂತನೆಯ ಪರಿಹಾರ ಕಾರ್ಯಕ್ರಮ ಮಾ. 8ರಿಂದ 14ರವರೆಗೆ ನಡೆಯಲಿದೆ.

Papemajalu garady
Karnapady garady

ಮಾ. 8ರಂದು ಸಂಜೆ 6 ರಿಂದ ಅಘೋರ ಹೋಮ, ಬಾದೋಚ್ಚಾಟನೆ, ವನದುರ್ಗಾಹೋಮ ನಡೆಯಲಿದೆ.
ಮಾ. 9ರ ಆದಿತ್ಯವಾರ ಬೆಳಗ್ಗೆ 8 ಗಂಟೆಯಿಂದ ಸಾಮೂಹಿಕ ಪ್ರಾರ್ಥನೆ, ಗಣಪತಿ ಹೋಮ, ನವಗ್ರಹ ಶಾಂತಿ ಹೋಮ, ಮೃತ್ಯುಂಜಯ ಹೋಮ, ಸಂಜೆ ಗಂಟೆ 4ರಿಂದ ದುರ್ಗಾಪೂಜೆ, ರಾತ್ರಿ 8ಕ್ಕೆ ದೈವ ತಂಬಿಲ ಜರಗಲಿದರ.

ಮಾ. 10ರ ಸೋಮವಾರ ಬೆಳಗ್ಗೆ 7.30ರಿಂದ ಪವಮಾನ ಹೋಮ, ಭೂ ವರಾಹ ಶಾಂತಿ, ತಿಲಹೋಮ, ಮಾ. 11ರ ಮಂಗಳವಾರ ಸರ್ಪಸಂಸ್ಕಾರ, ಮಾ. 14ರ ಶುಕ್ರವಾರ ಬೆಳಗ್ಗೆ ಪಂಚಗವ್ಯ, ಪುಣ್ಯಾರ್ಚನೆ, ಆಶ್ಲೇಷ ಬಲಿ, ಬ್ರಹ್ಮಚಾರಿ ಆರಾಧನೆ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ಜರಗಲಿದೆ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಕಾರ್ಯನಿರ್ವಹಣಾಧಿಕಾರಿ ಕೆ.ವಿ. ಶ್ರೀನಿವಾಸ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ

Related Posts