ತಣ್ಣೀರುಪಂತ ಗ್ರಾಮದ ರುದ್ರಗಿರಿ ಶ್ರೀ ಮೃತ್ಯುಂಜಯ ದೇವಸ್ಥಾನದಲ್ಲಿ ಶಿವರಾತ್ರಿಯ ಪ್ರಯುಕ್ತ ಶ್ರೀ ಮಹಿಷಮರ್ದಿನಿ ಕಲಾ ಪ್ರತಿಷ್ಠಾನ ಚಾರ -ಹೆಬ್ರಿ ಸಂಯೋಜನೆಯಲ್ಲಿ ಇಂದ್ರಕೀಲಕ -ಊರ್ವಶಿ ಶಾಪ ತಾಳಮದ್ದಳೆ ಜರಗಿತು.
ಭಾಗವತರಾಗಿ ಸ್ನೇಹ ಎಂ. ಕಾರ್ಕಳ, ಹಿಮ್ಮೇಳದಲ್ಲಿ ಶ್ರೀಪತಿ ಭಟ್ ಉಪ್ಪಿನಂಗಡಿ, ಪ್ರಚೇತ ಆಳ್ವ ಬಾರ್ಯ ಅರ್ಥದಾರಿಗಳಾಗಿ ಜಬ್ಬಾರ್ ಸಮೋ ಕೈಲಾಸ ಒಡೆಯ ಈಶ್ವರನಾಗಿ, ನಾ. ಕಾರಂತ ಪೆರಾಜೆ ದೇವಲೋಕದ ಅಪ್ಸರೆ ಊರ್ವಶಿಯಾಗಿ ಜೀವ ತುಂಬಿದರೆ, ದಿವಾಕರ ಆಚಾರ್ಯ ಗೇರುಕಟ್ಟೆ ದೇವರಾಜ ದೇವೇಂದ್ರ, ವಿದ್ವಾನ್ ಕೇಕಣಾಜೆ ಕೇಶವ ಭಟ್ ಮಧ್ಯಮ ಪಾಂಡವ ಅರ್ಜುನನಾಗಿ ಚಾರ ಪ್ರದೀಪ ಹೆಬ್ಬಾರ್ ಕೈಲಾಸದೊಡತಿ ರ್ಪಾರ್ವತಿ ಹಾಗೂ ಗಂಧರ್ವ ಗುರು ಚಿತ್ರಸೇನನಾಗಿ ಪಾತ್ರಕ್ಕೆ ಜೀವ ತುಂಬಿದರು.
ದೇವಳದ ಆಡಳಿತ ಮಂಡಳಿಯ ಅಧ್ಯಕ್ಷ ಭರತ್ ಶೆಟ್ಟಿ ಕಾರ್ಯಕ್ರಮ ಪ್ರಾಯೋಜಿಸಿದ್ದರು. ದೇವಳದ ಆಡಳಿತ ಸಮಿತಿಯ ಸದಸ್ಯರು ಕಲಾವಿದರನ್ನು ಗೌರವಿಸಿದರು.
ಚಾರ ಪ್ರದೀಪ ಹೆಬ್ಬಾರ್ ಸ್ವಾಗತಿಸಿ, ಪ್ರಭಾಕರ ಗೌಡ ಪೊಸಂದಡಿ ವಂದಿಸಿದರು.