ಧಾರ್ಮಿಕ

ಮಹಾಕುಂಭಮೇಳ: 90 ಸಾವಿರ ಖೈದಿಗಳಿಗೆ ಸ್ನಾನ ಭಾಗ್ಯ! ಪವಿತ್ರ ಸ್ನಾನ ಮಾಡಿಸಿದ ಬಗೆಯಾದರೂ ಹೇಗೆ ಬಲ್ಲಿರಾ?

ಜೈಲುಗಳಲ್ಲಿ ಬಂಧಿತರಾಗಿರುವ ಸುಮಾರು 90 ಸಾವಿರ ಕೈದಿಗಳಿಗೆ ಮಹಾಕುಂಭದ ಪವಿತ್ರ ಸ್ನಾನ ಮಾಡಲು ಅವಕಾಶ ನೀಡಲಾಯಿತು.

ಈ ಸುದ್ದಿಯನ್ನು ಶೇರ್ ಮಾಡಿ

ಲಕ್ನೋ: ಉತ್ತರ ಪ್ರದೇಶದ 75 ಜೈಲುಗಳಲ್ಲಿ ಬಂಧಿತರಾಗಿರುವ ಸುಮಾರು 90 ಸಾವಿರ ಕೈದಿಗಳಿಗೆ ಮಹಾಕುಂಭದ ಪವಿತ್ರ ಸ್ನಾನ ಮಾಡಲು ಅವಕಾಶ ನೀಡಲಾಯಿತು.

akshaya college

ಅಧಿಕಾರಿಗಳು ಲಕ್ನೋ, ಅಯೋಧ್ಯೆ ಮತ್ತು ಅಲಿಘರ್‌ನ ವಿವಿಧ ನಗರಗಳ ಜೈಲುಗಳಿಗೆ ತ್ರಿವೇಣಿ ಸಂಗಮದ ಕೆಲವು ಪವಿತ್ರ ನೀರನ್ನು ತಂದುಕೊಡುವ ಮೂಲಕ, ಕೈದಿಗಳಿಗೆ ಪವಿತ್ರಾ ಸ್ನಾನದ ಅವಕಾಶ ಕಲ್ಪಿಸಿಕೊಡಲಾಯಿತು.

ಅಧಿಕಾರಿಗಳ ಪ್ರಕಾರ, ಸಂಗಮ ತ್ರಿವೇಣಿ ನೀರನ್ನು ಸಾಮಾನ್ಯ ನೀರಿನೊಂದಿಗೆ ಬೆರೆಸಿ ಸಣ್ಣ ಟ್ಯಾಂಕ್‌ಗಳಲ್ಲಿ ಸಂಗ್ರಹಿಸಲಾಗಿದೆ. ಕೈದಿಗಳಿಗೆ ಪವಿತ್ರ ಸ್ನಾನ ಮಾಡಲು ಮತ್ತು ಜೈಲಿನಲ್ಲಿಯೇ ಪ್ರಾರ್ಥನೆ ಸಲ್ಲಿಸಲು ಅನುವು ಮಾಡಿಕೊಡಲಾಯಿತು.

ಲಕ್ನೋದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಯುಪಿಯ ಜೈಲು ಸಚಿವ ದಾರಾ ಸಿಂಗ್ ಚೌಹಾಣ್‌, ಸುಮಾರು 90 ಸಾವಿರ ಕೈದಿಗಳಿಗೆ ಪವಿತ್ರ ಸ್ನಾನ ಮಾಡುವ ಅವಕಾಶವನ್ನು ನೀಡಲಾಗಿದೆ ಎಂದು ಹೇಳಿದರು.

ಸಾಮಾನ್ಯ ಜನರು ಮಹಾಕುಂಭಮೇಳದಲ್ಲಿ ಪಾಲ್ಗೊಳ್ಳುತ್ತಾರೆ. ಆದರೆ ಅವರ ನಂಬಿಕೆಯ ಹೊರತಾಗಿಯೂ ಜೈಲುವಾಸದಲ್ಲಿರುವವರು ನಾಲ್ಕು ಗೋಡೆಗಳಿಂದ ಹೊರಬರಲು ಸಾಧ್ಯವಿಲ್ಲ ಎಂಬ ದೃಷ್ಟಿಯಿಂದ ಕೈದಿಗಳ ಒತ್ತಾಯ ಮೇರೆಗೆ ಈ ಅವಕಾಶ ಕಲ್ಪಿಸಿಕೊಡಲಾಯಿತು.

ಜೈಲಿನ ಎಲ್ಲಾ ಹಿರಿಯ ಮತ್ತು ಕಿರಿಯ ಅಧಿಕಾರಿಗಳ ಬೆಂಬಲದೊಂದಿಗೆ, ಉತ್ತರ ಪ್ರದೇಶದ ಸುಮಾರು ತೊಂಬತ್ತು ಸಾವಿರ ಕೈದಿಗಳು ಪವಿತ್ರ ಸ್ನಾನ ಮಾಡಿದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಆ. 16ರಂದು 27ನೇ ವರ್ಷದ ಶ್ರೀಕೃಷ್ಣ ಲೋಕ | ತೊಟ್ಟಿಲ ಸಂಭ್ರಮದ ಬಳಿಕ ಪುತ್ತೂರು ಪೇಟೆಯಲ್ಲಿ ನಡೆಯಲಿದೆ ಶೋಭಾಯಾತ್ರೆ

ಪುತ್ತೂರು: ಪುತ್ತೂರು ವಿವೇಕಾನಂದ ಶಿಶುಮಂದಿರ ಮತ್ತು ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಟಮಿ…