Gl harusha
ಧಾರ್ಮಿಕ

ಇಂದು ಕಲ್ಲೇಗ ಜಾತ್ರೆ |ಕಲ್ಕುಡ – ಕಲ್ಲುರ್ಟಿ ದೈವಸ್ಥಾನದಲ್ಲಿ ವಾರ್ಷಿಕ ನೇಮ

ನೆಹರುನಗರದ ಕಲ್ಲೇಗ ಶ್ರೀ ಕಲ್ಕುಡ ಕಲ್ಲುರ್ಟಿ ದೈವದ ವಾರ್ಷಿಕ ಜಾತ್ರೋತ್ಸವ ಕಾರ್ಯಕ್ರಮವು ಫೆ. 11ರಂದು ನಡೆಯಲಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ನೆಹರುನಗರದ ಕಲ್ಲೇಗ ಶ್ರೀ ಕಲ್ಕುಡ ಕಲ್ಲುರ್ಟಿ ದೈವದ ವಾರ್ಷಿಕ ಜಾತ್ರೋತ್ಸವ ಕಾರ್ಯಕ್ರಮವು ಫೆ. 11ರಂದು ನಡೆಯಲಿದೆ.

Pashupathi

ಬೆಳಗ್ಗೆ ಕಾರ್ಜಾಲು ಗುತ್ತಿನಲ್ಲಿ ಸ್ಥಳ ಶುದ್ಧಿ ಹೋಮ ಮತ್ತು ಕಲಶ ಪ್ರತಿಷ್ಠೆ ಜರಗಲಿರುವುದು. 11-30ಕ್ಕೆ ಕಲ್ಲೇಗ ದೈವಸ್ಥಾನದಲ್ಲಿ ಗಣಹೋಮ ಹಾಗೂ ಶ್ರೀ ದೈವಗಳ ತಂಬಿಲ ಮತ್ತು ನಾಗತಂಬಿಲ, ಮಧ್ಯಾಹ್ನ 12.30 ರಿಂದ ಕಲ್ಲೇಗ ದೈವಸ್ಥಾನದಲ್ಲಿ ಅನ್ನಸಂತರ್ಪಣಾ ಕಾರ್ಯಕ್ರಮ ನೆರವೇರಲಿರುವುದು.

akshaya college

ರಾತ್ರಿ ಗಂಟೆ 7.30ಕ್ಕೆ ಸರಿಯಾಗಿ ಶ್ರೀದೈವಗಳ ಮೂಲನೆಲೆ ಕಾರ್ಜಾಲು ಗುತ್ತಿನಿಂದ ಭಂಡಾರ ಹೊರಡಲಿದ್ದು. ರಾತ್ರಿ ಗಂಟೆ 9:30ಕ್ಕೆ ಗೊಂದೊಳು ಪೂಜೆ, ರಾತ್ರಿ 12 ಗಂಟೆಗೆ ಶ್ರೀ ಕಲ್ಕುಡ ಕಲ್ಲುರ್ಟಿ ದೈವಗಳ ವರ್ಷಾವಧಿ ನೇಮೋತ್ಸವ ಜರಗಲಿರುವುದು.

ಹಿಂದಿನಿಂದ ನಡೆದುಕೊಂಡು ಬಂದ ಸಂಪ್ರದಾಯಗಳು:

ಶ್ರೀ ದೈವಗಳ ಕಾಲಾವಧಿ ಜಾತ್ರೆ ನೇಮಗಳಿಗೆ ಆಗಿನದ ಕುದಿಯಿಟ್ಟ ದಿನದಿಂದ ನೇಮಗಳು ಜರಗುವ ದಿನಗಳ ವರೆಗೆ ಗ್ರಾಮದಲ್ಲಿ ಯಾವುದೇ ಶುಭ ಕಾರ್ಯಗಳಾಗಲಿ, ಕೋಳಿ ಅಂಕವೇ ಮೊದಲಾದ ಪ್ರಾಣಿ ಹಿಂಸೆಯ ಕಾರ್ಯಗಳು ಜರಗುವುದಿಲ್ಲ. ಗ್ರಾಮದಲ್ಲಿ ನಡೆಯುವ ಯಾವುದೇ ಮದುವೆ, ಗೃಹಪ್ರವೇಶ, ದೈವಗಳ ನೇಮ ಮೊದಲಾದ ಶುಭಕಾರ್ಯಗಳಲ್ಲಿ ಶ್ರೀ ದೈವಗಳ ಭಂಡಾರಕ್ಕೆ ಕಾಣಿಕೆ ಅರ್ಪಿಸಿ ನಡೆಯುವ ಶುಭಕಾರ್ಯ ನಿರ್ವಿಘ್ನವಾಗಿ ನಡೆಯುವಂತೆ ದೈವಗಳಲ್ಲಿ ಬೇಡಿಕೊಳ್ಳುವ ಸಂಪ್ರದಾಯವಿರುತ್ತದೆ.

ಮಹಾಮ್ಮಾಯಿ – ಕಲ್ಲುರ್ಟಿ ಗುಡಿಗೆ ತಾಮ್ರದ ಹೊದಿಕೆ:

ಶ್ರೀ ಕಲ್ಕುಡ ದೈವಸ್ಥಾನದ ಎರಡನೇ ಹಂತದ ಜೀರ್ಣೋದ್ದಾರದ ಹಾಗೂ ಅಭಿವೃದ್ಧಿ ಕೆಲಸ ಕಾರ್ಯಗಳು ಯಶಸ್ವಿಯಾಗಿ ನೆರವೇರಿದ್ದು. ಮೂರನೇಯ ಹಂತದ ಕಾರ್ಯಯೋಜನೆಯನ್ನು 2024ರಲ್ಲಿ ಹಮ್ಮಿಕೊಳ್ಳಲಾಗಿದೆ. ಶ್ರೀ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಭಕ್ತಾಭಿಮಾನಿಗಳ ಅಪೇಕ್ಷೆಯಂತೆ ಅಂದಾಜು 20 ಲಕ್ಷ ರೂ. ವೆಚ್ಚದಲ್ಲಿ ಶ್ರೀ ಮಹಾಮಾಯಿ ದೈವದ ಗುಡಿ ಮತ್ತು ಶ್ರೀ ಕಲ್ಲುರ್ಟಿ ದೈವದ ಗುಡಿ ಮೇಲ್ಛಾವಣಿಗೆ ತಾಮ್ರದ ಹೊದಿಕೆ ಮಾಡುವ ಹಾಗೂ ಇತರ ಅಭಿವೃದ್ಧಿ ಕೆಲಸ ಕಾರ್ಯಗಳಿಗೆ ಭಕ್ತಾದಿಗಳು ತನು ಮನ ಧನಗಳಿಂದ ಸಹಕರಿಸಬೇಕೆಂದು ವಿನಂತಿಸಲಾಗಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

Related Posts

ಮೇ 11ರಂದು ಪುತ್ತೂರು ಶ್ರೀ ಮಹಾಕಾಳಿ ದೇವಸ್ಥಾನದ ಷಡಾಧಾರ, ನಿಧಿಕುಂಭ ಪ್ರತಿಷ್ಠೆ | ಮೇ 10ರಂದು ನಿಧಿಕುಂಭ ಮೆರವಣಿಗೆ

ಪುತ್ತೂರು: ಇಲ್ಲಿನ ಕಿಲ್ಲೆ ಮೈದಾನ ಬಳಿಯ ಪುತ್ತೂರು ಸೆಂಟರ್ ಹಿಂಭಾಗದಲ್ಲಿರುವ ಶ್ರೀ ಮಹಾಕಾಳಿ…