ಧಾರ್ಮಿಕ

ಬಾರ್ಯ ದೇವಸ್ಥಾನದ ಪ್ರತಿಷ್ಠಾ ದಿನೋತ್ಸವ

ಬಾರ್ಯ ಶ್ರೀ ಮಹಾವಿಷ್ಣು ದೇವಸ್ಥಾನದ ಐದನೇ ವಾರ್ಷಿಕ ಪ್ರತಿಷ್ಠಾ ದಿನೋತ್ಸವವು ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ಎರಡು ದಿನಗಳಲ್ಲಿ ಜರಗಿತು

ಈ ಸುದ್ದಿಯನ್ನು ಶೇರ್ ಮಾಡಿ

ಉಪ್ಪಿನಂಗಡಿ ಸಮೀಪದ ಬಾರ್ಯ ಶ್ರೀ ಮಹಾವಿಷ್ಣು ದೇವಸ್ಥಾನದ ಐದನೇ ವಾರ್ಷಿಕ ಪ್ರತಿಷ್ಠಾ ದಿನೋತ್ಸವವು ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ಎರಡು ದಿನಗಳಲ್ಲಿ ಜರಗಿತು.

ಫೆಬ್ರವರಿ 6ರಂದು ಸುತ್ತಮುತ್ತಲಿನ ಗ್ರಾಮಗಳಿಂದ ಹೊರೆಕಾಣಿಕೆ, ‌ಮಹಾಪೂಜೆ ಅನ್ನಸಂತರ್ಪಣೆ,ಭಜನೆ ಮಹಾರಂಗಪೂಜೆ ಬಳಿಕ ನಾಗ ಮಾಣಿಕ್ಯ ನಾಟಕ ನಡೆಯಿತು.

ಮರುದಿನ ಕೆಮ್ಮಿಂಜೆ ಬ್ರಹ್ಮ ಶ್ರೀ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಗಣಹೋಮ, ಪಂಚ ವಿಂಶತಿ ಕಲಶಾಭಿಶೇಕ, ಪರಿವಾರ ದೈವಗಳಿಗೆ ಕಲಶ ತಂಬಿಲ, ಶ್ರೀ ಆಂಜನೇಯ ಯಕ್ಷಗಾನ ಮಹಿಳಾ ಸಂಘ ಬೊಳುವಾರು ಪುತ್ತೂರು ಇವರಿಂದ ಶ್ಯಮಂತಕ ಮಣಿ ತಾಳಮದ್ದಳೆ, ದೇವರ ಬಲಿ ಉತ್ಸವ, ದರ್ಶನ ಬಲಿ ,ಬಟ್ಟಲು ಕಾಣಿಕೆ‌ ನಡೆಯಿತು.

ಆಡಳಿತ ಟ್ರಸ್ಟಿನ ಅಧ್ಯಕ್ಷ ಭಾಸ್ಕರ್ ಬಾರ್ಯ ಗುರಿಕಾತ್ವದಲ್ಲಿ ಟ್ರಸ್ಟಿ ಮತ್ತು ಪದಾಧಿಕಾರಿಗಳು ಮತ್ತು ಒಂಭತ್ತು ಗುತ್ತಿನ ಮನೆಯವರ ಉಪಸ್ಥಿತಿಯಲ್ಲಿ ಗ್ರಾಮದೈವ ಪಂಜುರ್ಲಿಯ ನೇಮ ಜರಗಿತು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಪುತ್ತೂರಿನಲ್ಲಿ ಆರೋಗ್ಯದ ಕಡೆಗೆ ಯೋಗದ ನಡಿಗೆ | ಎಸ್.ಪಿ.ವೈ.ಎಸ್.ಎಸ್.ನಿಂದ ನಡೆಯುತ್ತಿರುವ ಯೋಗ ಜೀವನ ದರ್ಶನ

ಪುತ್ತೂರು: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಕರ್ನಾಟಕ ಇದರ ರಾಜ್ಯ ರಾಷ್ಟ್ರೀಯ ಯೋಗ ಶಿಕ್ಷಕರ…

ಆ. 16ರಂದು 27ನೇ ವರ್ಷದ ಶ್ರೀಕೃಷ್ಣ ಲೋಕ | ತೊಟ್ಟಿಲ ಸಂಭ್ರಮದ ಬಳಿಕ ಪುತ್ತೂರು ಪೇಟೆಯಲ್ಲಿ ನಡೆಯಲಿದೆ ಶೋಭಾಯಾತ್ರೆ

ಪುತ್ತೂರು: ಪುತ್ತೂರು ವಿವೇಕಾನಂದ ಶಿಶುಮಂದಿರ ಮತ್ತು ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಟಮಿ…