Gl jewellers
ಧಾರ್ಮಿಕ

ಧರ್ಮ ಶಿಕ್ಷಣಕ್ಕೆ ಧಾರ್ಮಿಕ ಶ್ರದ್ಧಾ   ಕೇಂದ್ರಗಳು ದಿಕ್ಸೂಚಿ |ಒಡಿಯೂರು   ರಥೋತ್ಸವ, ತುಳುನಾಡ ಜಾತ್ರೆ, ಧರ್ಮಸಭೆಯಲ್ಲಿ ಒಡಿಯೂರು ಶ್ರೀ

ವಿಟ್ಲ: ಭಕ್ತಿ, ಧ್ಯಾನ, ದಾನದಿಂದ ನೆಮ್ಮದಿಯ ಬದುಕು ಪ್ರಾಪ್ತವಾಗುತ್ತದೆ. ಧರ್ಮ ಶಿಕ್ಷಣಕ್ಕೆ ಧಾರ್ಮಿಕ ಶ್ರದ್ಧಾ ಕೇಂದ್ರಗಳು ದಿಕ್ಸೂಚಿಯಾಗಿವೆ. ಸಂಸ್ಕೃತಿಯ ಕೊರತೆಯಿಂದ ವಿಕೃತಿ ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ವಿಟ್ಲ: ಭಕ್ತಿ, ಧ್ಯಾನ, ದಾನದಿಂದ ನೆಮ್ಮದಿಯ ಬದುಕು ಪ್ರಾಪ್ತವಾಗುತ್ತದೆ. ಧರ್ಮ ಶಿಕ್ಷಣಕ್ಕೆ ಧಾರ್ಮಿಕ ಶ್ರದ್ಧಾ ಕೇಂದ್ರಗಳು ದಿಕ್ಸೂಚಿಯಾಗಿವೆ. ಸಂಸ್ಕೃತಿಯ ಕೊರತೆಯಿಂದ ವಿಕೃತಿ ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಸಮಾಜದಿಂದ, ಸಮಾಜಕ್ಕೆ, ಸಮಾಜಕ್ಕೋಸ್ಕರ ಎಂಬಂತೆ ಕ್ಷೇತ್ರ ಚಟುವಟಿಕೆ ನಡೆಸುತ್ತದೆ. ಭಕ್ತರ ಸೇವೆಯಿಂದ ಒಡಿಯೂರು ಸಂಸ್ಥಾನದ ಬೆಳವಣಿಗೆ ಸಾಧ್ಯ ಆಗಿದೆ ಎಂದು ಒಡಿಯೂರು ಶ್ರೀ ಗುರುದೇವ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.

Papemajalu garady
Karnapady garady

ಶ್ರೀ ಒಡಿಯೂರು ರಥೋತ್ಸವ ತುಳುನಾಡ ಜಾತ್ರೆ ಪ್ರಯುಕ್ತ ನಡೆದ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದರು.

ದಿವ್ಯ ಸಾನಿಧ್ಯ ವಹಿಸಿದ್ದ ಸಾಧ್ವಿ ಶ್ರೀ ಮಾತಾನಂದಮಯಿ ಆಶೀರ್ವಚನ ನೀಡುತ್ತಾ, ಒತ್ತಡ ರಹಿತ, ಸಂತೃಪ್ತ ಜೀವನ ಸಾಗಿಸುವಂತಾಗಬೇಕು. ಆಸೆ, ಆಕಾಂಕ್ಷೆಗಳು ಕ್ಷಯವಾದರೆ ಆನಂದ ಸಿಗುತ್ತದೆ. ಉತ್ತಮ ವ್ಯಕ್ತಿತ್ವ ನಿರ್ಮಾಣವಾಗಬೇಕು. ಜೀವನ ಪಾವನವಾಗಬೇಕು ಎಂದು ಹೇಳಿದರು.

ಮಂಗಳೂರು ಆಕಾಶವಾಣಿ ಸಹಾಯಕ ನಿರ್ದೇಶಕ ಪಿ.ಎಸ್.ಸೂರ್ಯನಾರಾಯಣ ಭಟ್, ಮಂಗಳೂರು ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ನಿಕಟಪೂರ್ವ ಕಾರ್ಯದರ್ಶಿ ಡಾ.ಅವಿನ್ ಆಳ್ವ, ಕಾಸರಗೋಡು ಹೊಟೇಲ್ ಉಡುಪಿ ಗಾರ್ಡನ್‌ನ ರಾಮ ಪ್ರಸಾದ್, ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪ್ರಶಾಂತ ಪಕಳ ಮಲಾರಬೀಡು, ಮುಂಬಯಿ ಶ್ರೀಪ್ಯಾಕ್ ಕಂಟೈನರ್ಸ್ ಪ್ರೈ.ಲಿ.ನ ಆಡಳಿತ ನಿರ್ದೇಶಕ ಬಾಲಕೃಷ್ಣ ಎಂ.ರೈ, ಪುಣೆಯ ಒಡಿಯೂರು ಶ್ರೀ ಗುರುದೇವ ಸೇವಾ ಬಳಗದ ಅಧ್ಯಕ್ಷ ಪ್ರಭಾಕರ ಶೆಟ್ಟಿ, ಮುಂಬಯಿ ಒಡಿಯೂರು ಶ್ರೀ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ ಅಧ್ಯಕ್ಷೆ ಶ್ವೇತಾ ಸಿ. ರೈ, ಅಜಿತ್ ಕುಮಾರ್ ಪಂದಳಂ, ಒಡಿಯೂರು ಶ್ರೀ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಸಹಕಾರ ರತ್ನ ಎ.ಸುರೇಶ್ ರೈ, ಒಡಿಯೂರು ಶ್ರೀ ರಥೋತ್ಸವ ಸಮಿತಿ ಕಾರ್ಯಾಧ್ಯಕ್ಷ ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ ಉಪಸ್ಥಿತರಿದ್ದರು.

ಒಡಿಯೂರು ಶ್ರೀ ಗುರುದೇವ ಸೇವಾ ಬಳಗದ ಮುಂಬೈ ಘಟಕದ ಪ್ರಧಾನ ಕಾರ್ಯದರ್ಶಿ ಪ್ರಕಾಶ ಶೆಟ್ಟಿ ಪೇಟೆಮನೆ ಸ್ವಾಗತಿಸಿದರು. ಶ್ರೀ ಗುರುದೇವ ವಿದ್ಯಾಸಂಸ್ಥೆ ಮುಖ್ಯೋಪಾಧ್ಯಾಯಿನಿ ರೇಣುಕಾ ಎಸ್. ರೈ ಒಡಿಯೂರು ಆಶಯಗೀತೆ ಹಾಡಿದರು. ಒಡಿಯೂರು ಶ್ರೀ ವಿವಿಧೋದ್ದೇಶ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಯಾನಂದ ಶೆಟ್ಟಿ ಬಾಕ್ರಬೈಲು ವಂದಿಸಿದರು. ರಥೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಯಶವಂತ ವಿ.ಕಾರ್ಯಕ್ರಮ ನಿರೂಪಿಸಿದರು.

ಸನ್ಮಾನ – ನೆರವು
11 ಮುಖಗಳ ಆಂಜನೇಯನ ವಿಗ್ರಹ ರಚಿಸಿದ ಮಹೇಶ್ ಬಾಯಾರು ಮತ್ತು ಕಾರ್ಯಕ್ರಮದ ಪ್ರಾಯೋಜಕರನ್ನು ಗೌರವಿಸಲಾಯಿತು. ಒಡಿಯೂರು ಗ್ರಾಮ ವಿಕಾಸ ಯೋಜನೆ ವತಿಯಿಂದ ಅನಾರೋಗ್ಯ ಪೀಡಿತರಿಗೆ ಮತ್ತು ಅಶಕ್ತರಿಗೆ ಹಾಗೂ ಸಂಘ ಸಂಸ್ಥೆ ಸೇರಿ 127 ಮಂದಿಗೆ ಒಟ್ಟು 12.67 ಲಕ್ಷ ರೂ.ಗಳಷ್ಟು ಆರ್ಥಿಕ ನೆರವು ನೀಡಲಾಯಿತು. ಪ್ರತಿಷ್ಠೆ ಮಹೋತ್ಸವದ ಅಂಗವಾಗಿ ಸತ್ಯನಾರಾಯಣ ಪೂಜೆ ಜರಗಿತು.


ಈ ಸುದ್ದಿಯನ್ನು ಶೇರ್ ಮಾಡಿ

Related Posts