Gl jewellers
ಧಾರ್ಮಿಕ

2025ರ ಡಿ. 27, 28ರಂದು ಶ್ರೀನಿವಾಸ ಕಲ್ಯಾಣೋತ್ಸವ, 29ಕ್ಕೆ ಉಚಿತ ಸಾಮೂಹಿಕ ವಿವಾಹ | ಪೂರ್ವತಯಾರಿಗೆ ಮೊದಲು ಮಹಾಲಿಂಗೇಶ್ವರ ದೇವಾಲಯದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಪುತ್ತಿಲ ಪರಿವಾರ ಸೇವಾ ಟ್ರಸ್ಟ್

2025ರ ಡಿಸೆಂಬರ್ 27,28 ಮತ್ತು 29ರಂದು   ಪುತ್ತೂರು  ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರು ಜರಗುವ ಶ್ರೀನಿವಾಸ ಕಲ್ಯಾಣೋತ್ಸವ ಹಾಗೂ 29ಕ್ಕೆ ಜರಗುವ 100 ಜೋಡಿಗೆ ಸಾಮೂಹಿಕ ವಿವಾಹದ ತಯಾರಿಗೆ ಮೊದಲು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಡೆಯಲ್ಲಿ ವಿಶೇಷ ಪ್ರಾರ್ಥನೆ ಫೆ. 7ರಂದು ಬೆಳಿಗ್ಗೆ ಜರಗಿತು. 

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: 2025ರ ಡಿಸೆಂಬರ್ 27,28 ಮತ್ತು 29ರಂದು   ಪುತ್ತೂರು  ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರು ಜರಗುವ ಶ್ರೀನಿವಾಸ ಕಲ್ಯಾಣೋತ್ಸವ ಹಾಗೂ 29ಕ್ಕೆ ಜರಗುವ 100 ಜೋಡಿಗೆ ಸಾಮೂಹಿಕ ವಿವಾಹದ ತಯಾರಿಗೆ ಮೊದಲು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಡೆಯಲ್ಲಿ ವಿಶೇಷ ಪ್ರಾರ್ಥನೆ ಫೆ. 7ರಂದು ಬೆಳಿಗ್ಗೆ ಜರಗಿತು. 

Papemajalu garady
Karnapady garady

ಮಹಾಲಿಂಗೇಶ್ವರ ದೇವರಲ್ಲಿ ಅರ್ಚಕರು ವಿಶೇಷ ಪ್ರಾರ್ಥನೆ ನೆರವೇರಿಸಿದರು.

ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಕಾರ್ಯಕ್ರಮದ ಯಶಸ್ಸಿಗೆ ಶುಭಹಾರೈಸಿದರು.

ಕಾರ್ಯಕ್ರಮಕ್ಕೆ ಸಾಕಷ್ಟು ತಯಾರಿ ನಡೆಸಬೇಕಾಗಿರುವುದರಿಂದ ಈಗಿನಿಂದಲೇ ಕಾರ್ಯಪ್ರವೃತ್ತರಾಗುವ ಅನಿವಾರ್ಯತೆ ಇದೆ ಎಂದು ಅರುಣ್ ಪುತ್ತಿಲ ಪ್ರಾರ್ಥನೆಯ ಸಂದರ್ಭ ತಿಳಿಸಿದರು.

ಪ್ರಾರ್ಥನೆಯ ಸಂದರ್ಭ ವ್ಯವಸ್ಥಾಪನ ಸಮಿತಿ ಸದಸ್ಯ ವಿನಯ ಸುವರ್ಣ, ಅರುಣ್ ಕುಮಾರ್ ಪುತ್ತಿಲ, ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಅಧ್ಯಕ್ಷ ಮಹೇಂದ್ರ ವರ್ಮ ಬಜತ್ತೂರು, ಉಮೇಶ್ ಕೊಡಿಬೈಲು, ಅನಿಲ್ ತೆಂಕಿಲ, ಪ್ರವೀಣ್ ಭಂಡಾರಿ,  ರಾಜು ಶೆಟ್ಟಿ, ರವಿ ಕುಮಾರ್ ರೈ ಕೆದಂಬಾಡಿಮಠ, ಶ್ರೀಕಾಂತ್ ಆಚಾರ್ಯ, ರೂಪೇಶ್, ಜಯಪ್ರಕಾಶ್ ಅಮೈ, ಮನೀಶ್ ಕುಲಾಲ್ ಉಪಸ್ಥಿತರಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ

Related Posts

ಮಾ. 14ರಿಂದ 23ರವರೆಗೆ ಶರವೂರು ಜಾತ್ರೋತ್ಸವ | ಮಾ. 21ರಂದು ದರ್ಶನ ಬಲಿ, 22ರಂದು ಶ್ರೀ ಮಹಾರಥೋತ್ಸವ, 16, 17, 24ರಂದು ದೈವಗಳ ನೇಮೋತ್ಸವ

ಕಡಬ ತಾಲೂಕಿನ ಆಲಂಕಾರು ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವ…