ಪುತ್ತೂರು: ಮುಖ್ಯರಸ್ತೆಗೆ ಹೊಂದಿಕೊಂಡತ್ತಿದ್ದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರದ ಎಲ್ಲಾ ಮನೆಗಳ ತೆರವು ಕಾರ್ಯ ಸಂಪೂರ್ಣಗೊಂಡಿದೆ.
ಕಾಲಾವಕಾಶ ಕೇಳಿದ್ದ ಎರಡು ಮನೆಗಳನ್ನು ಹೊರತುಪಡಿಸಿ ಉಳಿದೆಲ್ಲಾ ಮನೆಗಳನ್ನು ಸಂಪೂರ್ಣವಾಗಿ ಕೆಡವಲಾಗಿದೆ.
ತೋಡು ಬಳಿ ಉಳಿದಿದ್ದ ಕೊನೆಯ ಮನೆಯನ್ನು ಮಂಗಳವಾರ ರಾತ್ರಿಯೇ ತೆರವು ಮಾಡಲಾಯಿತು.
ರಾಜೇಶ್ ಬನ್ನೂರು ಅವರಿಗೆ ಸೇರಿದೆ ಎಂದು ಹೇಳಲಾಗಿದ್ದ ಮನೆಯನ್ನು ಮಂಗಳವಾರ ರಾತ್ರಿ ಒಡೆದು ಹಾಕಲಾಯಿತು. ಈ ಮೂಲಕ ಮಾಸ್ಟರ್ ಪ್ಲಾನಿನ ಯೋಜನೆಗಳನ್ನು ಜಾರಿಗೆ ತರಲು ಇದ್ದ ಎಲ್ಲಾ ಅಡೆ ತಡೆ ನಿವಾರಣೆ ಆದಂತಾಗಿದೆ.