ಪುತ್ತೂರು: ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಡೆಯಲಿರುವ ವರ್ಷಾವಧಿ ಜಾತ್ರೋತ್ಸವಕ್ಕೆ ಜ. 25ರಂದು ಸಂಜೆ ಭಕ್ತಾದಿಗಳಿಂದ ಹೊರೆಕಾಣಿಕೆ ಸಮರ್ಪಣೆ ನಡೆಯಿತು.
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿಯಿಂದ ಹೊರಟ ಹೊರೆಕಾಣಿಕೆ ಹಾಗೂ ದೇವರಿಗೆ ಸಮರ್ಪಣೆಯಾಗಲಿರುವ ಪಲ್ಲಕ್ಕಿಯ ಮೆರವಣಿಗೆಗೆ ಚಾಲನೆ ನೀಡಲಾಯಿತು.
ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ತೆಂಗಿನಕಾಯಿ ಒಡೆದು, ದೇವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಮೆರವಣಿಗೆಗೆ ಚಾಲನೆ ನೀಡಿದರು. ದೇವಸ್ಥಾನದ ಬಳಿಯಿಂದ ಹೊರಟ ಮೆರವಣಿಗೆಯು ಮುಖ್ಯ ರಸ್ತೆಯ ಮೂಲಕ ದರ್ಬೆ ಮುಕ್ರಂಪಾಡಿ ಮೂಲಕ ದೇವಸ್ಥಾನಕ್ಕೆ ಸಾಗಿ ಬಂದಿತು.
ಕ್ಷೇತ್ರದ ತಂತ್ರಿ ಪ್ರೀತಂ ಪುತ್ತೂರಾಯ, ಮಾಜಿ ಶಾಸಕ ಸಂಜೀವ ಮಠಂದೂರು, ತಾ.ಪಂ. ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಎಪಿಎಂಸಿ ಮಾಜಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಪದ್ಮಶ್ರೀ ಸೋಲಾರ್ ಮಾಲಕ ಸೀತಾರಾಮ ರೈ ಕೆದಂಬಾಡಿ ಗುತ್ತು, ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ರಾಜಾರಾಮ ಶೆಟ್ಟಿ ಕೋಲ್ಪೆಗುತ್ತು, ಬಿಜೆಪಿ ನಗರ ಮಂಡಲ ಅಧ್ಯಕ್ಷ ಶಿವಕುಮಾರ್ ಕಲ್ಲಿಮಾರ್, ಕಿರಣ್ ಎಂಟರ್ ಪ್ರೈಸಸ್ ನ ಕೇಶವ, ಪುರಸಭಾ ಮಾಜಿ ಅಧ್ಯಕ್ಷರಾದ ಯು.ಲೋಕೇಶ್ ಹೆಗ್ಡೆ, ರಾಜೇಶ್ ಬನ್ನೂರು, ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ರವೀಂದ್ರ ಶೆಟ್ಟಿ ನುಳಿಯಾಲು, ನಗರಸಭಾ ಸದಸ್ಯರಾದ ಜೀವಂಧರ್ ಜೈನ್, ರಮೇಶ್ ರೈ ನೆಲ್ಲಿಕಟ್ಟೆ, ಉತ್ಸವ ಸಮಿತಿ ಗೌರವಾಧ್ಯಕ್ಷರಾದ
ಡಾ.ಸುರೇಶ್ ಪುತ್ತೂರಾಯ, ಅರುಣ್ ಕುಮಾರ್ ಪುತ್ತಿಲ, ಶಿವರಾಮ ಆಳ್ವ, ವಿಜಯ ಬಿ.ಎಸ್., ಶ್ರೀಕೃಷ್ಣ ಭಟ್, ಉತ್ಸವ ಸಮಿತಿ ಅಧ್ಯಕ್ಷ ಜಯಕುಮಾರ್ ಆರ್. ನಾಯರ್, ಕಾರ್ಯದರ್ಶಿ ವಿನ್ಯಾಸ್ ಯು.ಎಸ್. ಸಂಪ್ಯ, ಹೊರೆಕಾಣಿಕೆ ಸಮಿತಿ ಸಂಚಾಲಕ ಲಕ್ಷ್ಮಣ್ ಬೈಲಾಡಿ, ಉತ್ಸವ ಸಮಿತಿ ಉಪಾಧ್ಯಕ್ಷರಾದ ರವೀಂದ್ರ ಎಸ್., ರವೀಂದ್ರ ರಾವ್ ಸಂಪ್ಯ, ಭೀಮಯ್ಯ ಭಟ್, ಸುರೇಶ್ ಪೂಜಾರಿ, ಉಮೇಶ್ ಎಸ್.ಕೆ., ಜತೆ ಕಾರ್ಯದರ್ಶಿ ಕುಂಞಣ್ಣ ಗೌಡ, ರವಿ ಗೌಡ ಬೈಲಾಡಿ, ಕೋಶಾಧಿಕಾರಿ ಉದಯ ಕುಮಾರ್ ರೈ ಎಸ್. ಸಂಪ್ಯ, ಗೌರವ ಸಲಹೆಗಾರ ಪ್ರಸನ್ನ ಮಾರ್ತ, ರಮೇಶ್ ಪ್ರಭು ವಿನ್ನರ್, ಸತೀಶ್ ರೈ ಮಿಶನ್ ಮೂಲೆ, ಸುರೇಂದ್ರ ರೈ ನೇಸರ, ಡಾ.ವೇಣುಗೋಪಾಲ, ಜಯಂತ ಶೆಟ್ಟಿ ಕಂಬಳತ್ತಡ್ಡ, ರಾಜೇಶ್ ಬನ್ನೂರು, ವೇಣುಗೋಪಾಲ ಶೆಟ್ಟಿ, ಕೃಷ್ಣಪ್ಪ ಕೆ., ಪ್ರಮುಖರಾದ ರವಿಚಂದ್ರ ಆಚಾರ್ಯ ಸಂಪ್ಯ, ಮೋಹನ ನಾಯ್ಕ, ಜಯರಾಮ ರೈ ಅಡ್ಯೆತ್ತಿಮಾರ್, ಧನುಷ್ ಹೊಸಮನೆ, ನಾಗೇಶ್ ಸಂಪ್ಯ, ವಸಂತ ಗೌಡ ಕುಕ್ಕಾಡಿ ಬಾರಿಕೆ, ರಮೇಶ್ ಅಂಗಿಂತ್ತಾಯ, ಉಮೇಶ್ ಆಚಾರ್ಯ ಕುಕ್ಕಾಡಿ, ಜಗದೀಶ್, ನವೀನ್ ಕುಕ್ಕಾಡಿ, ಶಮಂತ್ ಸುಳ್ಯ, ತೇಜಸ್ ಯು.ಎಸ್, ನಾರಾಯಣ ಪಂಜಳ, ಉಮೇಶ್ ಗೌಡ ಸಂಪ್ಯ, ಪ್ರವೀಣ್ ಕುಮಾರ್ ಉದಯಗಿರಿ, ಸುದರ್ಶನ್ ಭಟ್ ಕಾರ್ಪಾಡಿ, ಸುರೇಶ್ ಬೈಲಾಡಿ, ಹರಿಣಿ ಪುತ್ತೂರಾಯ, ಡಾ.ಆಶಾ ಪುತ್ತೂರಾಯ, ಪ್ರೇಮ ಶಿವಪ್ಪ ಸಫಲ್ಯ, ಜಯಲಕ್ಷ್ಮಿ ಶಗ್ರಿತ್ತಾಯ, ಶಶಿಕಲಾ ನಿರಂಜನ ರೈ, ಮಾಲಿನಿ ಕಶ್ಯಪ್ ಮೊದಲಾದವರು ಉಪಸ್ಥಿತರಿದ್ದರು