ಧಾರ್ಮಿಕ

ಮಹಾಭಾರತ ಸರಣಿಯಲ್ಲಿ ಮಧ್ಯಮ ವ್ಯಾಯೋಗ  ತಾಳಮದ್ದಳೆ 

ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ಕಾಳಿಕಾಂಬಾ ಯಕ್ಷಗಾನ ಕಲಾ ಸೇವಾ ಸಂಘದ  50ನೇ ವರ್ಷದ ನಿಮಿತ್ತ ನಡೆಸಲಾಗುತ್ತಿರುವ  ಶ್ರೀ ಮಹಾಭಾರತ ಸರಣಿಯಲ್ಲಿ 61ನೇ ಕಾರ್ಯಕ್ರಮವಾಗಿ ಶೇಣಿ ಡಾ.ಗೋಪಾಲಕೃಷ್ಣ ಭಟ್ ವಿರಚಿತ ಮಧ್ಯಮ ವ್ಯಾಯೋಗ ತಾಳಮದ್ದಳೆ ಜರಗಿತು.

ಈ ಸುದ್ದಿಯನ್ನು ಶೇರ್ ಮಾಡಿ

ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ಕಾಳಿಕಾಂಬಾ ಯಕ್ಷಗಾನ ಕಲಾ ಸೇವಾ ಸಂಘದ  50ನೇ ವರ್ಷದ ನಿಮಿತ್ತ ನಡೆಸಲಾಗುತ್ತಿರುವ  ಶ್ರೀ ಮಹಾಭಾರತ ಸರಣಿಯಲ್ಲಿ 61ನೇ ಕಾರ್ಯಕ್ರಮವಾಗಿ ಶೇಣಿ ಡಾ.ಗೋಪಾಲಕೃಷ್ಣ ಭಟ್ ವಿರಚಿತ ಮಧ್ಯಮ ವ್ಯಾಯೋಗ ತಾಳಮದ್ದಳೆ ಜರಗಿತು.

ಭಾಗವತರಾಗಿ ಪದ್ಮನಾಭ ಕುಲಾಲ್, ಸುರೇಶ ರಾವ್. ಬಿ, ಹರೀಶ ಆಚಾರ್ಯ ಬಾರ್ಯ ಹಿಮ್ಮೇಳದಲ್ಲಿ ಶ್ರೀಪತಿ ಭಟ್ ಉಪ್ಪಿನಂಗಡಿ,ಚಂದ್ರಶೇಖರ ಆಚಾರ್ಯ ಗೇರುಕಟ್ಟೆ, ಅರ್ಥಧಾರಿಗಳಾಗಿ ಜಯರಾಮ ಬಲ್ಯ(ಭೀಮ)ಹರೀಶ ಆಚಾರ್ಯ ಬಾರ್ಯ (ಧರ್ಮರಾಯ )  ಪೂರ್ಣಿಮ ರಾವ್ ಬೆಳ್ತಂಗಡಿ ( ಕೇಶವ ದಾಸ ) ದಿವಾಕರ ಆಚಾರ್ಯ ಗೇರುಕಟ್ಟೆ ( ಕೇಶವ ದಾಸನ ಪತ್ನಿ )ಪುಷ್ಪಾ ತಿಲಕ್( ಹಿಡಿಂಬಾ )ಶ್ರುತಿ ವಿಸ್ಮಿತ್(ಘಟೋತ್ಕಚ)ಶ್ರೀಧರ  ಎಸ್ಪಿ ಸುರತ್ಕಲ್ (ಮಧ್ಯಮ )ಭಾಗವಹಿಸಿದ್ದರು. ಗೋಪಾಲ್ ಶೆಟ್ಟಿ ಕಳಿಂಜ ಕಾರ್ಯಕ್ರಮದ ಪ್ರಾಯೋಜಕರಾಗಿದ್ದರು.

*ಶ್ರದ್ಧಾಂಜಲಿ ಅರ್ಪಣೆ* ಸಂಘದ ರಜತ ಮಹೋತ್ಸವದ ಖಜಾಂಚಿಯಾಗಿ  ಕರ್ತವ್ಯ ನಿರ್ವಹಿಸಿದ್ದ ಉದ್ಯಮಿ ಮೋಹನದಾಸ ಕಿಣಿ ಉಪ್ಪಿನಂಗಡಿ ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತ ಭರತನಾಟ್ಯ ಗುರು,ಯಕ್ಷಗಾನ ಪೋಷಕ ಪಿ.ಕಮಲಾಕ್ಷ ಆಚಾರ್ಯ ಬೆಳ್ತಂಗಡಿ ಇವರ ನಿಧನಕ್ಕೆ ಸಂತಾಪ ಸೂಚಿಸಿ ಶ್ರದ್ಧಾಂಜಲಿ ಅರ್ಪಿಸಲಾಯಿತು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಧರ್ಮಸ್ಥಳ: ಬಾಹುಬಲಿ ಮೂರ್ತಿಯ ಪ್ರತಿಷ್ಠಾ ಮಹೋತ್ಸವದ 44ನೆ ವರ್ಧಂತ್ಯುತ್ಸವ | ನಾಳೆ ಬಾಹುಬಲಿಸ್ವಾಮಿ ಮೂರ್ತಿಗೆ ಪಾದಾಭಿಷೇಕ

ಧರ್ಮಸ್ಥಳದಲ್ಲಿ ರತ್ನಗಿರಿಯಲ್ಲಿ ಭಗವಾನ್ ಬಾಹುಬಲಿಮೂರ್ತಿಯ ಪ್ರತಿಷ್ಠಾಪಕರು ಹಾಗೂ ಧರ್ಮಾಧಿಕಾರಿ…

ಕುಂದೇಶ್ವರ ಸಮ್ಮಾನ್ ಪ್ರಶಸ್ತಿಗೆ ಭಾಗವತೆ ಕಾವ್ಯಶ್ರೀ ಅಜೇರು, ಕುಂದೇಶ್ವರ ಕಲಾಭೂಷಣ ಪ್ರಶಸ್ತಿಗೆ ಉಮೇಶ್ ಮಿಜಾರು ಆಯ್ಕೆ

ಮಂಗಳೂರು: ಕಾರ್ಕಳ ಹಿರ್ಗಾನ ಶ್ರೀ ಕುಂದೇಶ್ವರ ಕ್ಷೇತ್ರದ ವತಿಯಿಂದ ನೀಡಲಾಗುವ ಪ್ರತಿಷ್ಠಿತ…