ಸಹಾಯ ಟ್ರಸ್ಟಿನ ಕಚೇರಿ ಮೇಲಂತಸ್ತಿನಲ್ಲಿ ದಶಮಾನೋತ್ಸವದ ಅಂಗವಾಗಿ ನಿರ್ಮಾಣಗೊಂಡ ನೂತನ ಸಭಾಭವನವನ್ನು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷ ಡಾ. ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿ ಉದ್ಘಾಟಿಸಿದರು.
ಟ್ರಸ್ಟಿನ ಕಚೇರಿಯಲ್ಲಿ ದೀಪ ಪ್ರಜ್ವಲಿಸಿದ ಅವರು ಮೇಲಂತಸ್ತಿನಲ್ಲಿರುವ ನೂತನ ಸಭಾಭವನವನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಡಾ. ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿ ಮಾತನಾಡಿ, ಮಂಗಳೂರು ಶಾಖಾ ಮಠಕ್ಕೆ ಬರುವಂತಹ ವ್ಯಾಪ್ತಿಯಲ್ಲಿ ಬಹಳ ಕಾರ್ಯಕ್ರಮ ಆಗಿದೆ. ಅದರಲ್ಲೂ ಬಹು ಹೆಚ್ಚು ಇಷ್ಟಪಟ್ಟು ಆಗಿರುವ ಕಾರ್ಯಕ್ರಮ ಪುತ್ತೂರಿನ ಈ ಸಮಯದಾಯ ಭವನದಲ್ಲಿ ಅನ್ನುವಂತಹದ್ದು ತುಂಬಾ ಸಂತೋಷ ಕೊಡುವಂತಹದ್ದು. ಸದಾ ಕಾಲದಲ್ಲೂ ತುಂಬಿ ಕಿಕ್ಕಿರಿದು ಇರುವ ಜನ, ಭಕ್ತಸ್ತೋಮ ಇಲ್ಲಿ ಇದೆ. ಕಾರ್ಯಕ್ರಮಕ್ಕೆ ಬೇಗ ಬರುವ ಅನಿವಾರ್ಯತೆ ಇತ್ತು ಎಂದರು.
ಮಂಗಳೂರು ಶಾಖಾ ಮಠದ ಡಾ. ಶ್ರೀ ಧರ್ಮಪಾಲನಾಥ ಸ್ವಾಮೀಜಿ ಮಾತನಾಡಿ, ದಾಖಲೆಯಿಟ್ಟೇ ಕರಾವಳಿ ಒಕ್ಕಲಿಗರು ಪುಸ್ತಕ ಬರೆದೆ.
ಕಳೆದ 35 ವರ್ಷದ ಹಿಂದಿನಿಂದಲೂ ಸಮಾಜವನ್ನು ಕಂಡಿದ್ದೇನೆ. ಆ ಕಾಲಘಟ್ಟದಲ್ಲಿ ಸಮಾಜ ಸಂಘಟನೆ ಹೇಗಿತ್ತು. ಈ ಭಾಗಕ್ಕೆ ಮಠ ಬಂದು 25 ವರ್ಷ ಸಂದಿದೆ. ಇಲ್ಲಿನ ಅನೇಕ ವಿಚಾರದಾರೆ ಭಿನ್ನವಾಗಿದೆ. ಅನೇಕ ಪಂಗಡ ಇದ್ದರೂ ಒಕ್ಕಲಿಗರು ಎಂದಾಗ ಎಲ್ಲರೂ ಒಂದೆ. ಇದಕ್ಕೆ ಸರಿಯಾದ ನೆಲೆಗಟ್ಟು ವಿಚಾರ ಮಾಡಿ, ಮನೋಭಾವನೆ ಅರ್ಥೈಸಿ ಕರಾವಳಿ ಒಕ್ಕಲಿಗರು ಎಂಬ ಪುಸ್ತಕ ಬರೆದೆ. ಇದು ಶಾಶ್ವತ ವಿಚಾರ. ಅನೇಕ ದಾಖಲೆ ಇಟ್ಟುಕೊಂಡು ಪುಸ್ತಕ ಬರೆದಿದ್ದೇನೆ. ಈ ಸಮಾಜದ ನಡಾವಳಿ, ಕಟ್ಟುಪಾಡು ಎನು, ಆಚಾರ ವಿಚಾರ ಎಲ್ಲ ವಿಚಾರಧಾರೆ ಒಳಗೊಂಡ ಪುಸ್ತಕ ಕರಾವಳಿ ಒಕ್ಕಲಿಗರು. ಇದನ್ನು ಎಲ್ಲರು ಒಮ್ಮೆ ಓದಬೇಕೆಂದು ಮನವಿ ಮಾಡಿದರು.
ಮಹಾಲಿಂಗೇಶ್ವರ ದೇವಸ್ಥಾನ ಭೇಟಿ:
ಆರಂಭದಲ್ಲಿ ಶ್ರೀಗಳು ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದರು. ಈ ಸಂದರ್ಭ ದಶಮಾನೋತ್ಸವ ಸಮಿತಿ ಕಾರ್ಯದರ್ಶಿ ಹೂವಪ್ಪ ಗೌಡ ದಂಪತಿ ಶ್ರೀಗಳ ಪಾದಕ್ಕೆ ನೀರು ಹಾಕಿದರು. ಟ್ರಸ್ಟ್ ಅಧ್ಯಕ್ಷ ಡಿ.ವಿ.ಮನೋಹರ್ ಗೌಡ ಮತ್ತು ದಶಮಾನೋತ್ಸವ ಸಮಿತಿ ಅಧ್ಯಕ್ಷ ಪಟೇಲ್ ಗೋಪಾಲಕೃಷ್ಣ ಗೌಡ ಚಾರ್ವಾಕ ಅವರು ಶ್ರೀಗಳಿಗೆ ತುಳಸಿ ಮಾಲೆ ಸಮರ್ಪಣೆ ಮಾಡಿದರು.
ಸತ್ಯನಾರಾಯಣ ಪೂಜೆ:
ಒಕ್ಕಲಿಗ ಗೌಡ ಸೇವಾ ಸಂಘದ ವಾರ್ಷಿಕ ಕಾರ್ಯಕ್ರಮದ ಅಂಗವಾಗಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯ ಮೊದಲು ಬೆಳಿಗ್ಗೆ ಗಣಪತಿ ಹೋಮ ನಡೆಯಿತು. ಬಳಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು. ಅರ್ಚಕ ರವಿ ನೆಲ್ಲಿತ್ತಾಯ ಅವರು ಪೂಜೆ ಕಾರ್ಯಕ್ರಮ ನೆರವೇರಿಸಿದರು. ಕಾರ್ಯಕ್ರಮದ ಪ್ರಚಾರ ಸಮಿತಿ ಸಂಚಾಲಕ ಪುರುಷೋತ್ತಮ ಮುಂಗ್ಲಿಮನೆ ದಂಪತಿ ಪೂಜೆಯ ನೇತೃತ್ವ ವಹಿಸಿದ್ದರು. ಈ ಸಂದರ್ಭ ಸಂಘದ ಮಹಿಳಾ ಪದಾಧಿಕಾರಿಗಳಿಂದ ಭಜನಾ ಕಾರ್ಯಕ್ರಮ ನಡೆಯಿತು. ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರು ಬಂದ ಬಳಿಕ ಪೂಜೆಯ ಪೂರ್ಣಾಹುತಿ ನಡೆಯಿತು.