Gl
ಧಾರ್ಮಿಕ

ಕರ್ನಾಟಕ ರಾಜ್ಯ ಜೈನ್ ಅಸೋಸಿಯೇಷನ್ ಬೆಂಗಳೂರು ವಿಭಾಗದ ನಿರ್ದೇಶಕರಾಗಿ ಸಾಮಾಜಿಕ ಹೋರಾಟಗಾರ ಮಾಳ ಹರ್ಷೇಂದ್ರ ಜೈನ್, ಶೀತಲ್ ಕುಮಾರ್ ಬಿ.ಆರ್. ಆಯ್ಕೆ

ಕರ್ನಾಟಕ ರಾಜ್ಯ ಜೈನ್ ಅಸೋಸಿಯೇಷನ್ ರಾಜ್ಯ ಮಟ್ಟದ 2024-29ರ ಸಾಲಿನ ರಾಜ್ಯಮಟ್ಟದ ಚುನಾವಣೆ ನಡೆದಿದ್ದು, ಇದೇ ಭಾನುವಾರ ಬೆಂಗಳೂರಿನ ಕೆಆರ್ ರಸ್ತೆಯ ಜೈನ್ ಭವನದಲ್ಲಿ ಸೋಮವಾರ ಹಾಗೂ ಮಂಗಳವಾರ ಮತ ಎಣಿಕೆ ಕಾರ್ಯಕ್ರಮ ನಡೆಯಿತು. 

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು : ಕರ್ನಾಟಕ ರಾಜ್ಯ ಜೈನ್ ಅಸೋಸಿಯೇಷನ್ ರಾಜ್ಯ ಮಟ್ಟದ 2024-29ರ ಸಾಲಿನ ರಾಜ್ಯಮಟ್ಟದ ಚುನಾವಣೆ ನಡೆದಿದ್ದು, ಇದೇ ಭಾನುವಾರ ಬೆಂಗಳೂರಿನ ಕೆಆರ್ ರಸ್ತೆಯ ಜೈನ್ ಭವನದಲ್ಲಿ ಸೋಮವಾರ ಹಾಗೂ ಮಂಗಳವಾರ ಮತ ಎಣಿಕೆ ಕಾರ್ಯಕ್ರಮ ನಡೆಯಿತು. 

rachana_rai
Pashupathi

ಈ ಚುನಾವಣೆಯ ಫಲಿತಾಂಶದಲ್ಲಿ ಬೆಂಗಳೂರು ವಿಭಾಗದ ಕರ್ನಾಟಕ ಜೈನ್ ಅಸೋಸಿಷನಿನ ಕಾರ್ಯಕಾರಿ ಸಮಿತಿಯ ನಿರ್ದೇಶಕರಾಗಿ SRF ಸೆಕ್ಯೂರಿಟಿ ಸರ್ವಿಸಸ್ ನ ಮ್ಯಾನೇಜಿಂಗ್ ಡೈರೆಕ್ಟರ್ ಹಾಗೂ ಸಮಾಜಸೇವಕ ಕೊಡುಗೈ ದಾನಿ ವಿಜಯನಗರ ಹಂಪಿ ಬಡಾವಣೆಯ ರವಿಕೀರ್ತಿ ದಂಪತಿಗಳ ಸುಪುತ್ರ ಬಿಆರ್ ಶೀತಲ್ ಕುಮಾರ್ ಹಾಗೂ ಸುಮಾರು ನಾಲ್ಕು ದಶಕಗಳಿಂದ ಸಮಾಜ ಸೇವೆ ಮತ್ತು ಸಾಮಾಜಿಕ ಹೋರಾಟ ಮಾಡಿಕೊಂಡು ಬರುತ್ತಿದ್ದ , ಸತತ 75 ಬಾರಿ ರಕ್ತದಾನ ಮಾಡಿದ ಸಾಮಾಜಿಕ ಹೋರಾಟಗಾರ ಮಾಳ ಹರ್ಷೇಂದ್ರ ಜೈನ್ ರವರು ಚುನಾವಣೆಯ ಫಲಿತಾಂಶದಲ್ಲಿ ಅತ್ಯಂತ ಅಧಿಕ ಮತಗಳನ್ನು ಪಡೆದು ವಿಜಯ ಶಾಲಿ ಆಗಿರುತ್ತಾರೆ.

akshaya college

ಸಮಾಜ ಸೇವಕ ಹರ್ಷೇಂದ್ರ ಜೈನ್ ಅವರು ಮಾತಾಡುತ್ತಾ ಜೈನ ಸಮಾಜದ ಧರ್ಮದ ಪ್ರಚಾರ ಪ್ರಭಾವನೆ ಮತ್ತು ಮುನಿ ಪರಂಪರೆ ಹಾಗೂ ಸಮಾಜದ ಸರ್ವಾಂಗಿನ ಅಭಿವೃದ್ಧಿಗೆ ಯಾವುದೇ ಪಲಾಪೇಕ್ಷೆ ಇಲ್ಲದೆ ದುಡಿದ ನನ್ನ ಕರ್ತವ್ಯವನ್ನು ಪರಿಗಣಿಸಿ ಧರ್ಮದ ಬಂಧುಗಳು ನಮ್ಮ ಮೇಲೆ ಅತೀವ ಪ್ರೀತಿ-ವಿಶ್ವಾಸ ಇಟ್ಟುಕೊಂಡು ಆಯ್ಕೆ ಮಾಡಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಸಮಾಜಮುಖಿ ಕೆಲಸಗಳು ಇನ್ನು ಹೆಚ್ಚಿನ ರೀತಿಯಲ್ಲಿ ಮಾಡುವಂತೆ ಆಶೀರ್ವದಿಸಿದ್ದಾರೆ. ಹಾಗೆಯೇ ಇನ್ನೊಬ್ಬ ಸಮಾಜ ಸೇವಕ ಬಿ ಆರ್ ಶೀತಲ್ ಕುಮಾರ್ ಅವರು ಮಾತನಾಡುತ್ತಾ ಕೆಜೆಎ ಸಂಸ್ಥೆಯು ರಾಜ್ಯಮಟ್ಟದ ಜೈನ ಸಂಸ್ಥೆಯಾಗಿದ್ದು ಈಗಾಗಲೇ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಹಾಗೂ ವಿದ್ಯಾರ್ಥಿ ವೇತನದ ಜೊತೆಯಲ್ಲಿ ಮುಂದಿನ ದಿನಗಳಲ್ಲಿ ಕೆಜೆಎ ಸಂಸ್ಥೆ ಮುಖಾಂತರ ಹತ್ತು ಹಲವರು ಸಮಾಜಮುಖಿ ಕೆಲಸ ಕಾರ್ಯಗಳು ಕರ್ತವ್ಯ ನಿಷ್ಠೆಯಿಂದ ಮಾಡಿಕೊಂಡು ಬರುವ ಜವಾಬ್ದಾರಿಯು ಈಗಾಗಲೇ ಹೊಸದಾಗಿ ಆಯ್ಕೆಯಾದ  ಜೈನರ ವಿಧಾನಸೌಧದ ರೂವಾರಿ ಎಂದೇ ಖ್ಯಾತವಾದ ಶ್ರೀ ಜಿತೇಂದ್ರ ಕುಮಾರ್ ಹಾಗೂ ಅವರ ತಂಡದ ಎಲ್ಲಾ ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರ ಕರ್ತವ್ಯವಾಗಿರುತ್ತದೆ ಎಂದರು. 

ರಾಜ್ಯಮಟ್ಟದ ಕೆಜೆಎಯ ನೂತನ ಅಧ್ಯಕ್ಷರಾಗಿ ಚುನಾವಣೆಯಲ್ಲಿ ಜಿತೇಂದ್ರ ಕುಮಾರ್ ಅವರು ಅತ್ಯಂತ ಹೆಚ್ಚಿನ ಮತದೊಂದಿಗೆ ಆಯ್ಕೆಯಾಗಿದ್ದಾರೆ. ಹಾಗೆಯೆ ಉಪಾಧ್ಯಕ್ಷರಾಗಿ ರಾಜಕೀರ್ತಿಯವರು ಮತ್ತು ಶೀತಲ್ ಕುಮಾರ್ ಪಾಟೀಲ್ ಅವರು ಹಾಗೂ ಕಾರ್ಯದರ್ಶಿಯಾಗಿ ಆಶಾ ಪ್ರಭು ರವರು ಖಜಾಂಚಿಯಾಗಿ ಮಹಾವೀರವರು ಹಾಗೂ ರಾಜ್ಯದ ವಿವಿಧ ಜಿಲ್ಲೆಯ ರಾಜ್ಯ ನಿರ್ದೇಶಕರಾಗಿ ಆಯ್ಕೆಯಾದ ತಂಡದ ಎಲ್ಲಾ ಅಭ್ಯರ್ಥಿಗಳಿಗೆ ಶುಭಾಶಯಗಳನ್ನು ಜೈನ ಮಠದ ಎಲ್ಲಾ ಭಟ್ಟಾರಕರು ಹಾಗೂ ಧರ್ಮಸ್ಥಳ ಧರ್ಮಾ ಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರು ಮತ್ತು ಧರ್ಮಸ್ಥಳ ಶ್ರೀ ಸುರೇಂದ್ರ ಕುಮಾರ್ ದಂಪತಿಗಳು ಹಾರೈಸಿದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

Related Posts

ಸಾವಿರ ವರ್ಷ ಇತಿಹಾಸದ ಪುತ್ತೂರು ಶ್ರೀ ಮಹಾಕಾಳಿ ದೇವಸ್ಥಾನದಲ್ಲಿ ನಡೆದ ಷಡಾಧಾರ, ನಿಧಿಕುಂಭ ಪ್ರತಿಷ್ಠೆ

ಸಾವಿರ ವರ್ಷ ಇತಿಹಾಸವಿರುವ ಶ್ರೀ ಮಹಾಕಾಳಿ ದೇವಸ್ಥಾನದ ಷಡಾಧಾರ ಹಾಗೂ ನಿಧಿಕುಂಭ ಪ್ರತಿಷ್ಠೆ…