ಧಾರ್ಮಿಕ

ಅನ್ನದಾನದೊಂದಿಗೆ ಪಾಯಸ, ಭಕ್ತರಿಗೆ ಪರಮಾನ್ನ|ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನೂತನ ವ್ಯವಸ್ಥಾಪನಾ ಸಮಿತಿಯ ಪ್ರಥಮ ಸಭೆಯಲ್ಲಿ ಮಹತ್ವದ ನಿರ್ಣಯ |ಪರಮಾನ್ನ, ಮಹಾ ಅನ್ನದಾನ ಸೇವಾ ಯೋಜನೆಗೂ ನಿರ್ಣಯ

ಇಲ್ಲಿನ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಿತ್ಯ ಪರಮಾನ್ನ ಅನ್ನದಾನ ಸೇವೆ ಮತ್ತು ಮಹಾ ಅನ್ನದಾನ ಸೇವಾ ಯೋಜನೆಯ ಮೂಲಕ ಭಕ್ತರಿಗೆ ಪರಮಾನ್ನ ಮತ್ತು ಅನ್ನದಾನ ಸೇವೆಗೆ ವಿಶೇಷ ಅವಕಾಶ ಕಲ್ಪಿಸಲಾಗಿದೆ. ಇದರ ಜೊತೆಗೆ ಜ.1ರಿಂದ ನಿತ್ಯ ಪಾಯಸ ಪ್ರಸಾದವೂ ಆರಂಭಗೊಳ್ಳಲಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಇಲ್ಲಿನ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಿತ್ಯ ಪರಮಾನ್ನ ಅನ್ನದಾನ ಸೇವೆ ಮತ್ತು ಮಹಾ ಅನ್ನದಾನ ಸೇವಾ ಯೋಜನೆಯ ಮೂಲಕ ಭಕ್ತರಿಗೆ ಪರಮಾನ್ನ ಮತ್ತು ಅನ್ನದಾನ ಸೇವೆಗೆ ವಿಶೇಷ ಅವಕಾಶ ಕಲ್ಪಿಸಲಾಗಿದೆ. ಇದರ ಜೊತೆಗೆ ಜ.1ರಿಂದ ನಿತ್ಯ ಪಾಯಸ ಪ್ರಸಾದವೂ ಆರಂಭಗೊಳ್ಳಲಿದೆ.

akshaya college

ದೇವಾಲಯದ ನೂತನ ವ್ಯವಸ್ಥಾಪನಾ ಸಮಿತಿಯ ಸದಸ್ಯರ ಪ್ರಥಮ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಭಕ್ತರಿಗೆ ಪರಮಾನ್ನ ಮತ್ತು ಅನ್ನದಾನ ಸೇವೆಗೆ ವಿಶೇಷ ಅವಕಾಶ

ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಅವರು ಸಭೆಯ ಬಳಿಕ ಸಮಿತಿ ಮಾತನಾಡಿ, ಈಗಾಗಲೇ ಪ್ರತಿ ದಿನ ದೇವಳದಲ್ಲಿ ಅನ್ನದಾನ ನಡೆಯುತ್ತಿದೆ. ವಿದ್ಯಾರ್ಥಿಗಳು ಭಕ್ತರು ಸೇರಿದಂತೆ ಸುಮಾರು 2 ಸಾವಿರ ಮಂದಿ ಪ್ರತಿ ದಿನ ಹಾಗೂ ಸೋಮವಾರದಂದು 3 ಸಾವಿರ ಜನ ಅನ್ನದಾನ ಸ್ವೀಕರಿಸುತ್ತಾರೆ. ಈ ನಿಟ್ಟಿನಲ್ಲಿ ಭಕ್ತರ ಆಶಯದಂತೆ ದೇವಳದಲ್ಲಿ ಪರಮಾನ್ನ ಅನ್ನದಾನ ಮತ್ತು ಮಹಾ ಅನ್ನದಾನ ಸೇವೆಯನ್ನು ಆರಂಭಿಸುವ ಕುರಿತು ನಿರ್ಣಯಿಸಲಾಗಿದೆ.

ಶ್ರೀ ದೇವರಿಗೆ ಅರ್ಪಿಸಿದ ನೈವೇದ್ಯವನ್ನು ಒಂದು ದಿನದ ಪರಮಾನ್ನ ಅನ್ನದಾನ ಸೇವೆಯಾಗಿ ಮತ್ತು ಒಂದು ದಿನ ಮಹಾ ಅನ್ನದಾನ ಸೇವೆಯನ್ನು ಆರಂಭಿಸಲಾಗುವುದು. ಒಂದು ದಿನದ ಪರಮಾನ್ನ ಸೇವಾ ಶುಲ್ಕವಾಗಿ ರೂ.10 ಸಾವಿರ ಮತ್ತು ಒಂದು ದಿನದ ಮಹಾ ಅನ್ನದಾನ ಸೇವೆಗೆ ರೂ.15 ಸಾವಿರ ನಿಗದಿಪಡಿಸಲಾಗಿದೆ.

ಡಿ.31ರಂದು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್‌ ಪಂಜಿಗುಡ್ಡೆ ಅವರ ಅಧ್ಯಕ್ಷತೆಯಲ್ಲಿ ಸದಸ್ಯರ ಪ್ರಥಮ ಸಭೆ ನಡೆಯಿತು. ಸಭೆಯಲ್ಲಿ ದೇವಳದ ಇತರ ಅಭಿವೃದ್ಧಿ ವಿಚಾರಗಳ ಕುರಿತು ಚರ್ಚಿಸಲಾಯಿತು. ಅಲ್ಲದೇ ದೇವಳಕ್ಕೆ ಬಂದಿರುವ ವಿವಿಧ ದೂರು ಅರ್ಜಿಗಳನ್ನು ಪರಿಶೀಲಿಸಲಾಯಿತು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಆ. 16ರಂದು 27ನೇ ವರ್ಷದ ಶ್ರೀಕೃಷ್ಣ ಲೋಕ | ತೊಟ್ಟಿಲ ಸಂಭ್ರಮದ ಬಳಿಕ ಪುತ್ತೂರು ಪೇಟೆಯಲ್ಲಿ ನಡೆಯಲಿದೆ ಶೋಭಾಯಾತ್ರೆ

ಪುತ್ತೂರು: ಪುತ್ತೂರು ವಿವೇಕಾನಂದ ಶಿಶುಮಂದಿರ ಮತ್ತು ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಟಮಿ…