ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರಾ ಸಂದರ್ಭ ನಡೆಯುವ ಅನ್ನಸಂತರ್ಪಣೆಗೆ ಶ್ರೀ ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನ ಸಂರಕ್ಷಣಾ ಸಮಿತಿಯ ಸದಸ್ಯ ಬಾಬಾ ಪ್ರಕಾಶ್ ಶೆಟ್ಟಿ ಸಾರ್ಯ ಬೀಡು ಅವರು ಒಂದು ಲೋಡ್ ಸೌಧೆಯನ್ನು ಸಮರ್ಪಿಸಿದರು.
ದೇವಸ್ಥಾನದ ಅನ್ನಸಂತರ್ಪಣೆಗೆ ಟಿಪ್ಪರ್ ಲಾರಿಯಲ್ಲಿ ಒಂದು ಲೋಡು ಕಟ್ಟಿಗೆಯನ್ನು ನೀಡಿದರು.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಸದಸ್ಯರಾದ ಮಹಾಬಲ ರೈ, ಸಂರಕ್ಷಣಾ ಸಮಿತಿಯ ಸದಸ್ಯರಾದ ಹರಿಪ್ರಸಾದ್ ಶೆಟ್ಟಿ, ಬಾಲಚಂದ್ರ ಸೊರಕೆ, ಪ್ರಜ್ವಲ್ ಸೊರಕೆ, ಸುದರ್ಶನ್ ಪುoಚಪ್ಪಾಡಿ, ಗೋವಿಂದ ನಾಯಕ್, ಸುರೇಶ್ ಗೌಡಿಗೆರೆ ಹಾಗೂ ಆಡಳಿತ ಸಮಿತಿಯ ಹರೀಶ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.























