ಧಾರ್ಮಿಕ

ಬನ್ನೂರು ಶನೀಶ್ವರ ಸನ್ನಿಧಿಯಲ್ಲಿ ಸ್ಫೂರ್ತಿ ಯುವಕ, ಯುವತಿ, ಮಹಿಳಾ, ಬಾಲಸಭಾದ ವಾರ್ಷಿಕೋತ್ಸವ

GL

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಬನ್ನೂರು ಶ್ರೀ ಶನೀಶ್ವರ ಸನ್ನಿಧಿಯ 21ನೇ ವರ್ಷದ ಸಾಮೂಹಿಕ ಶ್ರೀ ಶನೀಶ್ವರ ಪೂಜೆಯ ಅಂಗವಾಗಿ ಸ್ಫೂರ್ತಿ ಯುವಕ – ಯುವತಿ ಮಂಡಲ, ಮಹಿಳಾ ಮಂಡಲ, ಸ್ಫೂರ್ತಿ ಬಾಲಸಭಾದ ವಾರ್ಷಿಕೋತ್ಸವ ಶನಿವಾರ ಸಂಜೆ ನಡೆಯಿತು.

chennai-shopping
maithri

ಉದ್ಯಮಿ ಉಜ್ವಲ್ ಪ್ರಭು ಮಾತನಾಡಿ, ನವಗ್ರಹಗಳಲ್ಲಿ ಶನಿ ದೇವರಿಗೆ ಪ್ರಮುಖ ಸ್ಥಾನ. ರಿಯಲ್ ಎಸ್ಟೇಟ್ ಉದ್ಯಮಕ್ಕೂ ಕುಜ ಹಾಗೂ ಶನಿ ಗ್ರಹ ಅಗತ್ಯ. ಇದರಲ್ಲಿ ಶನಿ ಗ್ರಹ ನೀಡುವ ಸಂದೇಶ‌ ಏನೆಂದರೆ ಕಷ್ಟ ಪಟ್ಟು ಶಿಸ್ತಿನ ಜೀವನ ರೂಢಿಸಿಕೊಳ್ಳಬೇಕು ಎನ್ನುವುದು. ಬನ್ನೂರಿನ ಶನಿ ದೇವರು ಎಲ್ಲರಿಗೂ ಒಳಿತು ಮಾಡಲಿ ಎಂದು ಹಾರೈಸಿದರು.

ಪುತ್ತೂರು ಮಹಿಳಾ ವಿವಿಧೋದ್ದೇಶ ಸಹಕಾರಿಯ ಅಧ್ಯಕ್ಷೆ ಗೌರಿ ಬನ್ನೂರು ಮಾತನಾಡಿ, ಎಲ್ಲರನ್ನು ಒಗ್ಗೂಡಿಸಿಕೊಂಡು ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮ ನಡೆಸುವ ಈ ಶನೀಶ್ವರ ದೇವರ ಸಾನಿಧ್ಯದಲ್ಲಿ ಎಲ್ಲರೂ ಉತ್ತಮ ಕೆಲಸ ನಿರ್ವಹಿಸುವಂತಾಗಲಿ ಎಂದು ಹಾರೈಸಿದರು.

ಚಿಕ್ಕಮುಡ್ನೂರು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಸುಂದರ ಪೂಜಾರಿ ಬಡಾವು ಮಾತನಾಡಿ, ಇಲ್ಲಿನ ಶನೀಶ್ವರ ದೇವರ ಸನ್ನಿಧಿಗೆ ಬಂದ ಬಳಿಕ ಸಮಾಜದಲ್ಲಿ ಉತ್ತಮ ಸ್ಥಾನ ಸಿಗುವಂತಾಗಿದೆ. ಅಶೋಕ್ ರೈ ಅವರು ಶಾಸಕರಾಗುವ ಮೊದಲು ಈ ಕ್ಷೇತ್ರಕ್ಕೆ ಬಂದಿದ್ದರು. ಇದೀಗ ಶಾಸಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಬನ್ನೂರು ಗ್ರಾಮವಾದರೂ ಬಹಳ ಅಭಿವೃದ್ಧಿಯ ನಿರೀಕ್ಷೆಯಲ್ಲಿದೆ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ನಿವೃತ್ತ ಶಿಕ್ಷಕ ನಾರಾಯಣ ರೈ ಕುಕ್ಕುವಳ್ಳಿ, ಶುಭಹಾರೈಸಿದರು.

ಸ್ಫೂರ್ತಿ ಯುವಕ ಮಂಡಲದ ಅಧ್ಯಕ್ಷ ದೀಪಕ್ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಬನ್ನೂರು ಶಾಲೆಯ ಹಿರಿಯ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಜಯಕುಮಾರ್ ಜೈನ್, ಮುಖ್ಯಗುರು ಮಹಮ್ಮದ್ ಅಶ್ರಫ್ ಉಪಸ್ಥಿತರಿದ್ದರು.

ಸತೀಶ್ ಮಡಿವಾಳ ಪುತ್ತೂರು, ವಿಶ್ರಾಂತ ಮುಖ್ಯಶಿಕ್ಷಕಿ ಜೂಲಿಯಾನ್ ವಾಸ್, ಉರಗ ತಜ್ಞ ತೇಜಸ್ ಕರ್ಮಲ, ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಉದ್ಯೋಗಿ ಗೋಪಾಲ ಅವರಿಗೆ ಸ್ಫೂರ್ತಿಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. 

7ನೇ ತರಗತಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಾದ ಪದ್ಮಿತಾ ಕೆ., ಯಜ್ಞೇಶ್ ಬಿ. ಅವರಿಗೆ ಹಾಗೂ ಎಸ್.ಎಸ್.ಎಲ್.ಸಿ.ಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಾದ ಲಿಖಿತಾ, ಯಶಸ್ವಿ, ಶಬರಿ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. 

ಪ್ರಾಸ್ತಾವಿಕವಾಗಿ ಮಾತನಾಡಿದ ದಿನೇಶ್ ಸಾಲ್ಯಾನ್, ತಂತ್ರಿಗಳ ಸಲಹೆಯಂತೆ ಶನಿ ದೇವರ ಮುಂಭಾಗದಿಂದ ದಾರಿ ಆಗಬೇಕಿದೆ. ಈಗ ಇರುವ ದಾರಿ ಗುಡಿಗೆ ಯೋಗ್ಯವಲ್ಲ. ಆದ್ದರಿಂದ ನಿರ್ಮಾಣ ಆಗಲಿರುವ ಹಾದಿಗೆ ಅಗತ್ಯ ಕಲ್ಲುಗಳನ್ನು ದಾನಿಗಳಿಂದ ನಿರೀಕ್ಷೆ ಮಾಡುತ್ತೇವೆ. 

ಸ್ಫೂರ್ತಿ ಯುವಕ ಮಂಡಲದ ಉಪಾಧ್ಯಕ್ಷ ನವೀನ್ ರೈ ಬನ್ನೂರು ಸ್ವಾಗತಿಸಿದರು. ಸ್ಫೂರ್ತಿ ಮಹಿಳಾ ಮಂಡಲದ ಉಪಾಧ್ಯಕ್ಷೆ ವನಿತಾ ವಿಶ್ವನಾಥ್ ವರದಿ ವಾಚಿಸಿದರು. ಸ್ಫೂರ್ತಿ ಯುವಕ ಮಂಡಲದ ಕಾರ್ಯದರ್ಶಿ ನಿತಿನ್ ವಂದಿಸಿದರು. ಗೌರವ ಸಲಹೆಗಾರರಾದ ದೇವಿಕಾ ಜಯಾನಂದ್, ಅಮರ್’ನಾಥ್ ಪಟ್ಟೆ ಕಾರ್ಯಕ್ರಮ ನಿರೂಪಿಸಿದರು.

ಬಳಿಕ ಶ್ರೀ ಶನೀಶ್ವರ ಯಕ್ಷ ಬಳಗ ಸ್ಫೂರ್ತಿ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಜಾಂಬವತಿ ಕಲ್ಯಾಣ ಹಾಗೂ ಬಬ್ರುವಾಹನ ಕಾಳಗ ಯಕ್ಷಗಾನ ಪ್ರಸ್ತುತಗೊಂಡಿತು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಕಡಿಮೆ ವೇತನಕ್ಕಾಗಿ ಕ್ರಿಶ್ಚಿಯನ್ ಯುವಕನಿಂದ ದೈವ ನರ್ತನ!! ಮಂಗಳೂರಿನಲ್ಲಿ ನಡೆದ ಘಟನೆಗೆ ವಿರೋಧ ವ್ಯಕ್ತಪಡಿಸಿದ ಡಾ. ರತಿ

ಮಂಗಳೂರು: ಕ್ರಿಶ್ಚಿಯನ್ ಮಹಿಳೆಗೆ ಜನಿಸಿದ ಯುವಕನಿಂದ ದೈವ ನರ್ತನ ಸೇವೆ ಮಾಡಿಸಿದ್ದು, ಇದೀಗ…

ಡಿ. 7, 8: ಬೆಳ್ಳಿಚಡವು ಅಯ್ಯಪ್ಪ ಸ್ವಾಮಿ ಶಾರದಾಂಬ ಭಜನಾ ಮಂದಿರದ 3ನೇ ಪ್ರತಿಷ್ಠಾ ವಾರ್ಷಿಕೋತ್ಸವ, ಅಯ್ಯಪ್ಪ ದೀಪೋತ್ಸವ

ಪುತ್ತೂರು: ನೆಟ್ಟಣಿಗೆಮುಡ್ನೂರು ಗ್ರಾಮದ ಈಶ್ವರಮಂಗಲ ಬೆಳ್ಳಿಚಡವು ಅಯ್ಯಪ್ಪ ಸ್ವಾಮಿ-ಶಾರದಾಂಭ…