ಧಾರ್ಮಿಕ

ಕರ್ನಪ್ಪಾಡಿ ಗರಡಿ; ಬ್ರಹ್ಮಕಲಶೋತ್ಸವ, ನೇಮೋತ್ಸವದ ಆಮಂತ್ರಣ ಬಿಡುಗಡೆ

GL

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ನಿಡ್ಪಳ್ಳಿ ಗ್ರಾಮದ ಕರ್ನಪ್ಪಾಡಿ ಶ್ರೀ ಕೊಡಮಣಿತ್ತಾಯ ದೈವಸ್ಥಾನ ಬ್ರಹ್ಮಕಲಶೋತ್ಸವ ಹಾಗೂ ಕರ್ನಪ್ಪಾಡಿ ಶ್ರೀ ಬ್ರಹ್ಮ ಬೈದರ್ಕಳ ಗರಡಿ ನೇಮೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ  ಸಮಾರಂಭ ಕರ್ನಪ್ಪಾಡಿ ಗರಡಿ ವಠಾರದಲ್ಲಿ ನಡೆಯಿತು.

chennai-shopping
maithri

ನಿವೃತ ಡಿಜಿಪಿ ಜಗನ್ನಾಥ ರೈ ನುಳಿಯಾಲು, ಕೊಡಮಣಿತ್ತಾಯ ದೈವಸ್ಥಾನ ಬ್ರಹ್ಮಕಲಶೋತ್ಸವ ಹಾಗೂ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕರ್ನಪ್ಪಾಡಿ ನೇಮೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ ಗೊಳಿಸಿ ಶುಭ ಹಾರೈಸಿದರು.

ಈಶ್ವರಮಂಗಲ ಪಂಚಲಿಂಗೇಶ್ವರ ಪ್ರೌಢ ಶಾಲಾ ನಿವೃತ್ತ ಮುಖ್ಯ ಶಿಕ್ಷಕ ಸರ್ವೋತ್ತಮ ಬೋರ್ಕರ್, ಬೆಟ್ಟಂಪ್ಪಾಡಿ ಸಿ.ಎ. ಬ್ಯಾಂಕ್ ನಿವೃತ್ತ ಲಿಂಗಪ್ಪ ಗೌಡ ಕಕ್ಕೂರು, ಕೊಡಮಣಿತ್ತಾಯ ದೈವಸ್ಥಾನದ ಪ್ರತಿಷ್ಠೆ ಬಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಜನಾರ್ಧನ ಪೂಜಾರಿ ಪದಡ್ಕ ಶುಭ ಹಾರೈಸಿದರು.

ಕರ್ನಪ್ಪಾಡಿ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಸೇವಾ ಸಮಿತಿ ಅಧ್ಯಕ್ಷ ಶಿವಪ್ಪ ಪೂಜಾರಿ ನುಳಿಯಾಲು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸುಮಾರು 500 ವರ್ಷ ಇತಿಹಾಸವಿರುವ ಗರಡಿ ಇದಾಗಿದೆ. ಪ್ರತಿವರ್ಷ ನೇಮೋತ್ಸವ ಮಾಯಿ ತಿಂಗಳಲ್ಲಿ ನಡೆಸಲಾಗುತ್ತದೆ. ಪ್ರಶ್ನೆ ಚಿಂತನೆ ಪ್ರಕಾರ ಕೊಡಮಣಿತ್ತಾಯ ದೈವಕ್ಕೆ ದೈವಸ್ಥಾನ ನಿರ್ಮಾಣ ಮಾಡಿ ತಮ್ಮೆಲ್ಲರ ಸಹಕಾರದಲ್ಲಿ ಬ್ರಹ್ಮಕಲಶೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯ ಸಂತೋಷ ತಂದಿದೆ. ಮುಂದೆ ತಮ್ಮೆಲ್ಲರ ಸಹಕಾರದಲ್ಲಿ  ಬ್ರಹ್ಹಕಲಶ ಹಾಗೂ ವಾರ್ಷಿಕ ನೇಮೋತ್ವವ ವಿಜೃಂಭಣೆಯಲ್ಲಿ ನಡೆಯಬೇಕಿದೆ ಎಂದರು.

ವೇದಿಕೆಯಲ್ಲಿ ಪ್ರಗತಿಪರ ಕೃಷಿಕ ಬಾಲಕೃಷ್ಣ ರೈ, ಉದ್ಯಮಿ ಕಿರಣ್ ಕುಮಾರ್ ಇರ್ದೆ ಕಾರ್ಯಾಧ್ಯಕ್ಷ ಅಶ್ವಥ ಪೂಜಾರಿ ಕರ್ನಪ್ಪಾಡಿ, ಉಪಾಧ್ಯಕ್ಷರಾದ ಶೀನಪ್ಪ ಪೂಜಾರಿ ಕರ್ನಪ್ಪಾಡಿ  ಉಪಸ್ಥಿತರಿದ್ದರು.

ಶ್ರೀ ಬ್ರಹ್ಮ ಬೈದರ್ಕಳ ಗರಡಿ ಸೇವಾ ಸಮಿತಿ ಕಾರ್ಯದರ್ಶಿ ಮಾಧವ ಪೂಜಾರಿ ರೆಂಜ ಮತ್ತು ಸದಸ್ಯರು ಉಪಸ್ಥಿತರಿದ್ದರು.

ಸದಸ್ಯರ ಆಯ್ಕೆ:

ಈ ಸಂಧರ್ಭದಲ್ಲಿ ರಾಜೇಶ್ ಪೂಜಾರಿ ಆರ್ಲಪದವು, ಶೀನಪ್ಪ ಪೂಜಾರಿ ಕುಕ್ಕುಪುಣಿ, ಪದ್ಮನಾಭ ಕುಲಾಲ್ ಜ್ಯೋತಿ ನಿಲಯ ಗುರಿ, ಉದಯ ಪೂಜಾರಿ ಅರಂಭ್ಯ, ಕಾರ್ಯದರ್ಶಿಯಾಗಿ ರಾಧಾಕೃಷ್ಣ .ಆರ್ ಕೋಡಿ, ಕೋಶಾಧಿಕಾರಿ ರಾಜೇಶ್ ಎನ್ ನೆಲ್ಲಿತ್ತಡ್ಕ, ಜತೆ ಕಾರ್ಯದರ್ಶಿ ಸಂತೋಷ್ ಪೂಜಾರಿ ಕಾನ ಕುಕ್ಕುಪುಣಿ, ವಿಜಿತ್ ಕುಮಾರ್ ದೇವಸ್ಯ, ಪೂಜಿತ್ ಕರ್ನಪ್ಪಾಡಿ, ಸಂಚಾಲಕರಾದ ಹರೀಶ್ ಪೂಜಾರಿ ದೇವಸ್ಯ ಹೊಸಮನೆ, ದಯಾನಂದ ಪೂಜಾರಿ ಕರ್ನಪ್ಪಾಡಿ, ಸತೀಶ್ ಶೆಟ್ಟಿ ನೆಲ್ಲಿಕಟ್ಟೆ, ಉಚಿತ್ ಕುಮಾರ್ ರೆಂಜ, ಭಾಸ್ಕರ ಕರ್ಕೇರ ನುಳಿಯಾಲು, ಲೋಕೇಶ್ ಪೂಜಾರಿ ಕರ್ನಪ್ಪಾಡಿ, ಸುರೇಶ್ ಪೂಜಾರಿ ಬೊಳ್ಳಿಂಬಲ ಆರ್ಲಪದವು, ನಾರಾಯಣ ಪೂಜಾರಿ ತೂಂಬಡ್ಕ, ಪ್ರಖ್ಯಾತ್ ಸಾಲ್ಯಾನ್ ನುಳಿಯಾಲು,ಮನೋಹರ ನುಳಿಯಾಲು, ವಸಂತ ಗೌಡ ಕರ್ನಪ್ಪಾಡಿ, ಸತೀಶ್ ಕರ್ನಪ್ಪಾಡಿ, ಕುಮಾರ ನರಸಿಂಹ ಭಟ್ ಬುಳೆನಡ್ಕ, ಬಿಪಿನ್ ಸಾಲ್ಯಾನ್ ನೆಲ್ಲಿತ್ತಡ್ಕ, ಸಂತೋಷ್ ಕುಮಾರ್ ಬೇರಿಕೆ ಹಾಗೂ ಹಲವರನ್ನು ಸದಸ್ಯರುಗಳಾಗಿ ಸರ್ವಾನುಮತದಿಂದ ಆರಿಸಲಾಯಿತು.

ಸಮಿತಿ ರಚನೆ ನಂತರ ಅಧ್ಯಕ್ಷ ಜನಾರ್ಧನ ಪೂಜಾರಿ ಪದಡ್ಕ ಮಾತನಾಡಿ ಎಲ್ಲರೂ ಒಟ್ಟಾಗಿ ಕೊಡಮಣಿತ್ತಾಯ ದೈವದ ಕೆಲಸಕ್ಕೆ ಶ್ರಮಿಶೋಣ ಎಂದರು. ಗೌರವಾಧ್ಯಕ್ಷ ಜಯಂತ ನಡುಬೈಲು ಮಾತನಾಡಿ ಊರ ಮತ್ತು ಪರ ಊರ ಭಕ್ತಾದಿಗಳ ಸಂಪೂರ್ಣ ಸಹಕಾರ ಅಗತ್ಯವಿದೆ ಎಂದರು.

ರಾಜೇಶ್ ನೆಲ್ಲಿತ್ತಡ್ಕ ಪ್ರಸ್ತಾವಿಕ ಮಾತನಾಡಿದರು. ರಾಧಾಕೃಷ್ಣ ಆರ್ ಕೋಡಿಸ್ವಾಗತಿಸಿ  ಕಾರ್ಯಕ್ರಮ ನಿರೂಪಿಸಿದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಕಡಿಮೆ ವೇತನಕ್ಕಾಗಿ ಕ್ರಿಶ್ಚಿಯನ್ ಯುವಕನಿಂದ ದೈವ ನರ್ತನ!! ಮಂಗಳೂರಿನಲ್ಲಿ ನಡೆದ ಘಟನೆಗೆ ವಿರೋಧ ವ್ಯಕ್ತಪಡಿಸಿದ ಡಾ. ರತಿ

ಮಂಗಳೂರು: ಕ್ರಿಶ್ಚಿಯನ್ ಮಹಿಳೆಗೆ ಜನಿಸಿದ ಯುವಕನಿಂದ ದೈವ ನರ್ತನ ಸೇವೆ ಮಾಡಿಸಿದ್ದು, ಇದೀಗ…