ಪುತ್ತೂರು: ವಿಶ್ವಬ್ರಾಹ್ಮಣ ಸೇವಾ ಸಂಘ ಹಾಗೂ ವಿಶ್ವಕರ್ಮ ಯುವ ಸಮಾಜದ ವಾರ್ಷಿಕ ಮಹಾಸಭೆ ಹಾಗೂ ವಾರ್ಷಿಕೋತ್ಸವ ಶನಿವಾರ ಸಂಜೆ ಬೊಳುವಾರು ವಿಶ್ವಕರ್ಮ ಸಭಾಭವನದಲ್ಲಿ ಜರಗಿತು.
ಸಂಘ ಸ್ಥಾಪಕ ಸದಸ್ಯ ಅಣ್ಣಿ ಆಚಾರ್ಯ ಕಾರ್ಯಕ್ರಮ ಉದ್ಘಾಟಿಸಿದರು.
ವಿಶ್ವಬ್ರಾಹ್ಮಣ ಸೇವಾ ಸಂಘದ ಅಧ್ಯಕ್ಷ ಶ್ರೀಧರ ಆಚಾರ್ಯ ಕೆ. ಮಾತನಾಡಿ, ಸಮಾಜವನ್ನು ಒಗ್ಗಟ್ಟು ಮಾಡುವ ದಿಶೆಯಲ್ಲಿ ಪ್ರತಿವರ್ಷ ಸಂಘದ ಸದಸ್ಯರಿಗೆ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ. ಸಮಾಜದ ಅಭಿವೃದ್ಧಿಗಾಗಿ ಸಮಾಜ ಬಾಂಧವರು ಸಕ್ರೀಯರಾಗಬೇಕು. ಸಮಾಜಕ್ಕೆ ತೊಂದರೆ ಆಗುವಾಗ ಒಗ್ಗಟ್ಟಾಗಿ ಹೋರಾಡಬೇಕಾಗಿದೆ. ವಿಶ್ವಬ್ರಾಹ್ಮಣ ಸೇವಾ ಸಂಘದ ಸಮಾಜ ಬಾಂಧವರು ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಅವರಿಗೆ ಅಭಿನಂದನೆಗಳು ಎಂದರು.

ವಿಶ್ವಕರ್ಮ ಯುವ ಸಮಾಜದ ಅಧ್ಯಕ್ಷ ಪ್ರಕಾಶ್ ಆಚಾರ್ಯ ಕೆ. ಮಾತನಾಡಿ, ಕಾರ್ಯಕ್ರಮದಲ್ಲಿ ಯುವಜನರು ಹೆಚ್ಚು ಹೆಚ್ಚಾಗಿ ಪಾಲ್ಗೊಳ್ಳಬೇಕು. ಆಗ ಮಾತ್ರ ಇಂತಹ ಕಾರ್ಯಕ್ರಮಗಳು ಹೆಚ್ಚು ಕಳೆಗಟ್ಟುತ್ತವೆ. ಯುವಜನರು ಸಮಾಜದ ಕಾರ್ಯದಲ್ಲಿ ತೊಡಗಿಸಿಕೊಂಡಾಗ ಉತ್ತಮ ಕಾರ್ಯಕ್ರಮ ಹಮ್ಮಿಕೊಳ್ಳಲು ಸಮಾಜದ ಪ್ರಮುಖರು ಮುಂದಾಗುತ್ತಾರೆ ಎಂದರು.

ಇದೇ ಸಂದರ್ಭ ತಾಲೂಕು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಥಶಿಲ್ಪಿ ವಾಸುದೇವ ಆಚಾರ್ಯ ಬೆದ್ರಾಳ ಹಾಗೂ ಕಲಾರತ್ನ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ರೋಹಿಣಿ ರಾಘವ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು.
ಇದೇ ಸಂದರ್ಭ ಮಿಷನ್ ಮೂಲೆ ಶ್ರೀ ಮಹಿಷಮರ್ಧಿನಿ ದೇವಸ್ಥಾನದ ಶಿಲಾನ್ಯಾಸ ಸಮಾರಂಭದ ಆಮಂತ್ರಣವನ್ನು ಸಮಿತಿಯ ಪದಾಧಿಕಾರಿಗಳು ನೀಡಿದರು.
ಬಹುಮಾನ ವಿತರಣೆ:
ಇದೇ ಸಂದರ್ಭ ಸಂಘದ ಸದಸ್ಯರಿಗಾಗಿ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕಾಲಿಗೆ ಬಲೂನ್ ಕಟ್ಟಿ ಒಡೆಯುವ ಸ್ಪರ್ಧೆಯಲ್ಲಿ ಶ್ರೀಧರ ಆಚಾರ್ಯ ಕೊಕ್ಕಡ ಪ್ರಥಮ, ಹರೀಶ್ ಆಚಾರ್ಯ ಕೊಡಪಟ್ಯ ದ್ವಿತೀಯ, ಶ್ರೀನಿವಾಸ ಆಚಾರ್ಯ ಪಡೀಲು ತೃತೀಯ ಬಹುಮಾನ ಪಡೆದುಕೊಂಡರು.
ಸಂಗೀತ ಕುರ್ಚಿಯಲ್ಲಿ ಪ್ರಥಮ ಜಗದೀಶ್ ಆಚಾರ್ಯ ಮಾಮೇಶ್ವರ, ದ್ವಿತೀಯ ಕೇಶವ ಆಚಾರ್ಯ ಮಾಮೇಶ್ವರ, ತೃತೀಯ ಶ್ರೀಧರ ಆಚಾರ್ಯ ಕೊಕ್ಕಡ ಬಹುಮಾನ ಪಡೆದುಕೊಂಡರು. ಮಡಿಕೆ ಒಡೆಯುವ ಸ್ಪರ್ಧೆಯಲ್ಲಿ ಕೇಶವ ಆಚಾರ್ಯ ಮಾಮೇಶ್ವರ ಜಯ ಗಳಿಸಿದರು. ನಿಧಾನ ಸ್ಕೂಟರ್ ಚಾಲನೆಯಲ್ಲಿ ಜಗದೀಶ್ ಆಚಾರ್ಯ ಮಾಮೇಶ್ವರ ಪ್ರಥಮ, ಪ್ರಕಾಶ್ ಆಚಾರ್ಯ ಕೆ. ದ್ವಿತೀಯ, ಶ್ರೀನಿವಾಸ ಆಚಾರ್ಯ ಪಡೀಲು ತೃತೀಯ ಬಹುಮಾನ ಪಡೆದುಕೊಂಡರು.
ಹಗ್ಗ ಜಗ್ಗಾಟದಲ್ಲಿ ಹರೀಶ್ ಆಚಾರ್ಯ ಕೊಡಪಟ್ಯ ತಂಡದಲ್ಲಿದ್ದ ವಸಂತ ಆಚಾರ್ಯ, ದಿನೇಶ್ ಆಚಾರ್ಯ ನಗ್ರಿ, ಹರೀಶ್ ಆಚಾರ್ಯ ಚಿಪ್ಪಾರು, ಜಗದೀಶ್ ಆಚಾರ್ಯ ಮಾಮೇಶ್ವರ ಪ್ರಥಮ ಬಹುಮಾನ ಪಡೆದುಕೊಂಡರು. ಸುರೇಶ್ ಆಚಾರ್ಯ ಕಾಣಿಯೂರು ತಂಡದಲ್ಲಿದ್ದ ಸುರೇಶ ಆಚಾರ್ಯ, ಶ್ರೀಧರ ಆಚಾರ್ಯ ಕೆ., ಪ್ರಕಾಶ್ ಆಚಾರ್ಯ ಕೆ., ಕೇಶವ ಆಚಾರ್ಯ ಕೆ. ದ್ವಿತೀಯ ಸ್ಥಾನ ಪಡೆದುಕೊಂಡರು.
1ನೇ ವಿಭಾಗವಾದ 1ರಿಂದ 4ನೇ ತರಗತಿಯ ಮಕ್ಕಳಿಗೆ ಏರ್ಪಡಿಸಿದ್ದ ಪೇಪರ್ ಕ್ರಾಫ್ಟ್ ಸ್ಪರ್ಧೆಯಲ್ಲಿ ಸಮನ್ಯೂ ಪ್ರಥಮ, ಪ್ರದ್ವೀನ್ ದ್ವಿತೀಯ ಹಾಗೂ ಚಿತ್ರಕಲೆಯಲ್ಲಿ ಪ್ರದ್ವೀನ್ ಪ್ರಥಮ, ಸಮನ್ಯೂ ದ್ವಿತೀಯ, ಶ್ರೀಲಕ್ಷ್ಮೀ ತೃತೀಯ ಬಹುಮಾನ ಪಡೆದುಕೊಂಡರು.
2ನೇ ವಿಭಾಗವಾದ ಮಣ್ಣಿನಲ್ಲಿ ವಿವಿಧ ಕಲಾಕೃತಿ ರಚನೆಯಲ್ಲಿ ಪ್ರೇಕ್ಷಣ್ ಬಹುಮಾನ ಪಡೆದುಕೊಂಡರು. ಚಿತ್ರಕಲೆಯಲ್ಲಿ ಶ್ರೀಯಾನ್ ಪ್ರಥಮ, ಪ್ರಣೀತಾ ದ್ವಿತೀಯ, ಅಶ್ವಿಜಾ ತೃತೀಯ ಬಹುಮಾನ ಪಡೆದುಕೊಂಡರು.
3ನೇ ವಿಭಾಗವಾದ ಭಾವಗೀತೆಯಲ್ಲಿ ತನ್ವಿ ಪ್ರಥಮ, ತನುಶ್ರೀ ದ್ವಿತೀಯ ಬಹುಮಾನ ಪಡೆದುಕೊಂಡರು. ಚಿತ್ರಕಲೆಯಲ್ಲಿ ಸೃಷ್ಟಿ ಪ್ರಥಮ ಹಾಗೂ ತನುಶ್ರೀ ದ್ವಿತೀಯ ಬಹುಮಾನ ಪಡೆದುಕೊಂಡರು.
4ನೇ ವಿಭಾಗದ ಭಾವಗೀತೆಯಲ್ಲಿ ಪ್ರಜ್ಞಾ ಪ್ರಥಮ, ದಿವ್ಯ ದ್ವಿತೀಯ, ಮಾನಸ ತೃತೀಯ ಬಹುಮಾನ ಪಡೆದುಕೊಂಡರು. ರಂಗೋಲಿಯಲ್ಲಿ ರೇಖಾ ಪ್ರಕಾಶ್ ಹಾಗೂ ಜ್ಯೋತಿ ದಿವಾಕರ್ ಪ್ರಥಮ ಬಹುಮಾನ, ದೀಪಾಶ್ರೀ ಹಾಗೂ ಶ್ವೇತಾ ದ್ವಿತೀಯ, ರಕ್ಷಿತಾ ತೃತೀಯ ಬಹುಮಾನ ಪಡೆದುಕೊಂಡರು.
ಬೆಂಕಿ ರಹಿತ ಅಡುಗೆ ತಯಾರಿಯಲ್ಲಿ ದೀಪಾಶ್ರೀ ಹಾಗೂ ಶ್ವೇತಾ ಪ್ರಥಮ, ರಕ್ಷಿತಾ ಹಾಗೂ ಮಾನಸ ದ್ವಿತೀಯ ಬಹುಮಾನ ಪಡೆದುಕೊಂಡರು. ಸುರೇಶ್ ಆಚಾರ್ಯ ಕಾಣಿಯೂರು ಬಹುಮಾನದ ಕಾರ್ಯಕ್ರಮ ನಿರ್ವಹಿಸಿದರು.
ಮುಂದಿನ ಸಾಲಿಗೆ ವಿಶ್ವಕರ್ಮ ಯುವ ಸಮಾಜದ ಆಡಳಿತ ಸಮಿತಿಗೆ ಆಯ್ಕೆ ಆದ ಸದಸ್ಯರ ಪಟ್ಟಿಯನ್ನು ಜಗದೀಶ್ ಆಚಾರ್ಯ ಮಾಮೇಶ್ವರ ಸಭೆಯ ಮುಂದಿಟ್ಟರು. ವಿಶ್ವಬ್ರಾಹ್ಮಣ ಸೇವಾ ಸಂಘದ ಸದಸ್ಯರಾಗಿ ಸೇರ್ಪಡೆಗೊಂಡವರನ್ನು ಗೌರವಿಸಲಾಯಿತು.
ಶಾಂತಾ ಉಪೇಂದ್ರ ಆಚಾರ್ಯ ಪ್ರಾರ್ಥಿಸಿ, ವಿಶ್ವಬ್ರಾಹ್ಮಣ ಸೇವಾ ಸಂಘದ ಉಪಾಧ್ಯಕ್ಷ ಭುಜಂಗ ಆಚಾರ್ಯ ಸ್ವಾಗತಿಸಿದರು. ವಿಶ್ವಕರ್ಮ ಯುವ ಸಮಾಜದ ಲೆಕ್ಕಪತ್ರವನ್ನು ಕೋಶಾಧಿಕಾರಿ ವಸಂತ ಆಚಾರ್ಯ ಬೊಳುವಾರು ಸಭೆಯ ಮುಂದಿಟ್ಟರು. ವಿಶ್ವಬ್ರಾಹ್ಮಣ ಸೇವಾ ಸಂಘದ ಲೆಕ್ಕಪತ್ರವನ್ನು ನಿಕಟಪೂರ್ವ ಅಧ್ಯಕ್ಷ ಜಗದೀಶ್ ಎಸ್.ಎನ್. ಮಂಡಿಸಿದರು. ವಿಶ್ವಕರ್ಮ ಯುವ ಸಮಾಜದ ಕಾರ್ಯದರ್ಶಿ ಹರೀಶ್ ಕೊಡಪಟ್ಯ, ವಿಶ್ವಬ್ರಾಹ್ಮಣ ಸೇವಾ ಸಂಘ ವರದಿಯನ್ನು ಕಾರ್ಯದರ್ಶಿ ಆನಂದ ಆಚಾರ್ಯ ಅಜ್ಜಿನಡ್ಕ ವಾಚಿಸಿದರು. ವಿಶ್ವಕರ್ಮ ಯುವ ಸಮಾಜದ ಆಡಳಿತ ಮಂಡಳಿ ಸದಸ್ಯ ಪ್ರವೀಣ್ ಆಚಾರ್ಯ ಉಕ್ಕುಡ ವಂದಿಸಿದರು. ಪ್ರಶಾಂತ್ ಮುಕ್ವೆ ಹಾಗೂ ಉಷಾ ಸದಾನಂದ ಕಾರ್ಯಕ್ರಮ ನಿರೂಪಿಸಿದರು.



























